ಹೆಸ್ಕಾಂ ಖಾನಾಪುರ ಉಪ ವಲಯಕ್ಕೆ 2017ರ ಪವರ್ ಅವಾರ್ಡ್

0
28
loading...

ಖಾನಾಪುರ: ಹೆಸ್ಕಾಂನ ಖಾನಾಪುರ ಉಪ ವಲಯ ಕಂದಾಯ ಸಂಗ್ರಹಣೆಯಲ್ಲಿ ಉತ್ತಮ ಸಾಧನೆ ಮಾಡಿದ್ದನ್ನು ಪರಿಗಣಿಸಿ ರಾಜ್ಯ ಸರ್ಕಾರ ಮತ್ತು ಇಂಧನ ಇಲಾಖೆಯ ಸಹಯೋಗದಲ್ಲಿ 2017ರ ಪವರ್ ಅವಾರ್ಡ್ ನೀಡಿ ಗೌರವಿಸಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಜರುಗಿದ ಸಮಾರಂಭದಲ್ಲಿ ಸಿಎಂ ಸಿದ್ಧರಾಮಯ್ಯ ಮತ್ತು ಇಂಧನ ಸಚಿವ ಡಿ.ಕೆ ಶಿವಕುಮಾರ ಅವರಿಂದ ಹೆಸ್ಕಾಂ ಬೆಳಗಾವಿ ಗ್ರಾಮೀಣ ಉಪ ವಿಭಾಗದ ಕಾರ್ಯನಿರ್ವಾಹಕ ಅಭಿಯಂತ ಪ್ರವೀಣಕುಮಾರ ಚಿಕ್ಕಾಡೆ, ಖಾನಾಪುರ ಉಪ ವಿಭಾಗದ ಎಇಇ ಎಸ್.ಪಿ ಅಲಕುಂಟೆ, ಶಾಖಾಧಿಕಾರಿ ಎಂ.ಬಿ ಪಠಾಣ ಹಾಗೂ ಸಿಬ್ಬಂದಿ ಪ್ರಶಸ್ತಿ ಸ್ವೀಕರಿಸಿದರು.
ಕೆಇಬಿ, ಎಲ್ಲ ವಿದ್ಯುತ್ ಸರಬರಾಜು ಮಂಡಳಿಗಳು ಹಾಗೂ ಕರ್ನಾಟಕ ಪವರ್ ಕಾರ್ಪೋರೇಶನ್‍ಗಳಲ್ಲಿ ಉತ್ತಮ ಸಾಧನೆ ಮಾಡಿದ ಉಪ ವಲಯಗಳಿಗೆ ಪವರ್ ಅವಾರ್ಡ್ ಹೆಸರಿನಲ್ಲಿ ಪ್ರಶಸ್ತಿ ಫಲಕ ಮತ್ತು ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಲಾಗುತ್ತಿದ್ದು, ಕಳೆದ ಆರ್ಥಿಕ ವರ್ಷದಲ್ಲಿ ಕಂದಾಯ ಸಂಗ್ರಹಣೆ, ಬಾಕಿ ವಸೂಲಿ ಮತ್ತು ಸಂಸ್ಥೆಗೆ ಉತ್ತಮ ಆದಾಯ ಒದಗಿಸಿಕೊಟ್ಟ ಹಿನ್ನೆಲೆಯಲ್ಲಿ ಖಾನಾಪುರ ವಲಯ ಈ ಗೌರವಕ್ಕೆ ಪ್ರಾಪ್ತವಾಗಿದೆ.

loading...