13 ಮಹಾ(ಮೇಳಾವ್)ದ ಮುಖಂಡರ ಮೇಲೆ ಎಫ್‍ಐಆರ್

0
26
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:14 ಅನುಮತಿ ಇಲ್ಲದೆ ರಾಜ್ಯ ಸರಕಾರ ನಡೆಸುತ್ತಿರುವ ಚಳಿಗಾಲದ ಅಧಿವೇಶನದ ವಿರುದ್ಧವಾಗಿ ನಾಡದ್ರೋಹಿ ಎಂಇಎಸ್ ಮುಖಂಡರು ಜಿಲ್ಲಾಡಳಿತದ ಆದೇಶವನ್ನು ಉಲ್ಲಂಘಿಸಿ ಮಹಾಮೇಳಾವ್ ನಡೆಸಿದ್ದಕ್ಕೆ ಮಹಾ ಮುಖಂಡರು ಸೇರಿ 13 ಜನರ ಮೇಲೆ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿ ಬಾರಿ ಕ್ಯಾತೆ ತೆಗೆಯುವ ಪುಂಡ ಎಂಇಎಸ್ ಚಳಿಗಾಲದ ಅಧಿವೇಶನ ಹಾಗೂ ಜಿಲ್ಲಾಡಳಿತದ ಆದೇಶವನ್ನು ಗಾಳಿಗೆ ತೂರಿ ಮಹಾಮೇಳಾವ್ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಶಾಸಕಿ ಸಂದ್ಯಾದೇವಿ ಕುಪ್ಪಿಕರ, ಕೊಲ್ಹಾಪುರ ಸಂಸದ ಧನಂಜಯ ಪಾಟೀಲ ಸೇರಿದಂತೆ 13 ಜನರ ಮೇಲೆ ಎಫ್‍ಐಆರ್ ದಾಖಲಾಗಿದೆ

loading...