ಅಂಗವಿಕಲತೆ ಶಾಪವಲ್ಲ: ಡಾ. ಬೂದೆಪ್ಪ

0
17
loading...

ಕನ್ನಡಮ್ಮ ಸುದ್ದಿ-ವಿಜಯಪುರ: ಅಂಗವಿಕಲತೆ ಶಾಪವಲ್ಲ, ಅಂಗವಿಕಲತೆಯನ್ನು ಶಾಪ ಎಂದು ಭಾವಿಸದೇ ಕುಗ್ಗಬಾರದು. ಅನೇಕ ಅಂಗವಿಕಲರು ಜಗತ್ತು ನಿಬ್ಬೆರೆಗಾಗಿಸುವ ಸಾಧನೆ ಮಾಡುವ ಮೂಲಕ ಅಂಗವಿಕಲರಿಗೆ ಸ್ಪೂರ್ತಿಯ ಪಾಠವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಎಚ್‌.ಬಿ. ಬೂದೆಪ್ಪ ಹೇಳಿದರು.
ವಿಜಯಪುರದ ಕನಕದಾಸ ಬಡಾವಣೆಯ ಮೈದಾನದಲ್ಲಿ ಅಂಗವಿಕಲರ ದಿನಾಚರಣೆ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಕ್ರಿಕೆಟ್‌ ಟೂರ್ನಾಮೆಂಟ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಆತ್ಮವಿಶ್ವಾಸದಿಂದ ಉನ್ನತ ಸಾಧನೆ ಮಾಡಬೇಕು, ಅಂಗವಿಕಲರು ಅಂಗವಿಕಲತೆಯ ಬಗ್ಗೆ ಯಾವತ್ತಿಗೂ ಯೋಚನೆ ಮಾಡಬಾರದು, ಕೇವಲ ಉನ್ನತ ಸಾಧನೆ ಮಾಡುವ ಲಕ್ಷ್ಯದ ಬಗ್ಗೆ ಯೋಚನೆ ಮಾಡಬೇಕು. ಅನೇಕ ಅಂಗವಿಕಲರು ಜಗತ್ತು ನಿಬ್ಬೆರೆಗಾಗಿಸುವ ಸಾಧನೆ ಮಾಡಿದ್ದಾರೆ. ಈ ಸಾಧನೆಯ ಪಾಠಗಳಿಂದ ಹೊಸ ಚೈತನ್ಯ ಪಡೆದು ಉನ್ನತ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಪ್ರಸ್ತುತ ನಡೆದ ಕ್ರಿಕೆಟ್‌ ಟೂರ್ನಾಮೆಂಟ್‌ನಲ್ಲಿ ಐದು ತಾಲೂಕುಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು. ಸುರೇಶ ಚವ್ಹಾಣ, ಪರಶುರಾಮ ಗುನ್ನಾಪೂರ, ಕಂಟೆಪ್ಪಗೌಡ ಪಾಟೀಲ ಉಪಸ್ಥಿತರಿದ್ದರು. ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ವಿಠ್ಠಲರಾವ ಉಪಾಧ್ಯೆ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಎಸ್‌.ಕೆ. ಘಾಟಿ, ಮುತ್ತು ಸಾತಿಹಾಳ, ಪರಶುರಾಮ ಭೋಸಲೆ, ಬಾಳು ಗಾಯಕವಾಡ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದರು. ಶಿವಾಜಿ ಹರಣಶಿಕಾರಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.

loading...