ಅಂಗವಿಕಲಮುಕ್ತ ಸಮಾಜ ನಿರ್ಮಾಣಕ್ಕಾಗಿ ಸಂಶೋಧನೆಗಳು ಬಲಗೊಳ್ಳಲಿಡಾ.ನಸೀಮಾ

0
31
loading...

ಚಿಕ್ಕೋಡಿ 29: ಸಮಾಜದಲ್ಲಿ ಪೊಲೀಯೋ ಪಿಡುಗಿನ ನಂತರ ಇದೀಗ ಅಂಗವಿಕಲ, ಬುದ್ಧಮಾಂದ್ಯರ ಸಂತತಿ ಹೆಚ್ಚುತ್ತಿದ್ದು, ಇದರ ತಡೆಗಾಗಿ ಸರಕಾರ ಸಂಶೋಧನಾ ಕ್ರಮ ಅನುಷ್ಠಾನಗೊಳಿಸಬೇಕೆಂದು ಹೆಲ್ಪರ್ಸ ಆಪ್‌ ಹ್ಯಾಂಡಿಕ್ಯಾಪ್‌ ಸಂಸ್ಥೆಯ ಸಂಸ್ಥಾಪಕಿ ಡಾ.ನಸೀಮಾ ಹುರ್ಝುಕ್‌ ಹೇಳಿದರು.ತಾಲೂಕಿನ ಯಕ್ಸಂಬಾ ಪಟ್ಟಣದ ಜೊಲ್ಲೆ ಉದ್ಯೋಗ ಸಮೂಹ 23 ಡಿಸೆಂಬರ ರಿಂದ 28 ಡಿಸೆಂಬರ ವರೆಗೆ ಸಂಸ್ಥೆಯ ಪ್ರೇರಣಾ ಶಕ್ತಿಯಾದ ಕು. ಜ್ಯೋತಿಪ್ರಸಾದ ಅಣ್ಣಾಸಾಹೇಬ ಜೊಲ್ಲೆ ಅವರ ಹುಟ್ಟುಹಬ್ಬದ ನಿಮಿತ್ಯ ಹಮ್ಮಿಕೊಂಡ ಪ್ರೇರಣಾ ಉತ್ಸವದಲ್ಲಿ ಪ್ರೇರಣಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಅಂಗವಿಕಲ ಹಾಗೂ ಬುದ್ಧಿಮಾಂದ್ಯ ಮಕ್ಕಳು ಜನಿಸುವ ಸಾಧ್ಯತೆಗಳನ್ನು ರಕ್ತತಪಾಸಿಸಿ ಗುರುತಿಸಿದರೆ ಇಂತಹ ತೊಂದರೆ ಇಂದಿನ ಮಕ್ಕಳಿಗಾಗುತ್ತಿರಲಿಲ್ಲ. ಇನ್ನಾದರೂ ಸರಕಾರ ಈ ವಿಷಯ ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.

ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಸಂಪಾದನಾ ಮಹಾಸ್ವಾಮಿಗಳು ಮಾತನಾಡಿದರು.ಈ ಸಂದರ್ಭದಲ್ಲಿ ಸಹಕಾರಿ ಧುರೀಣ ಅಣ್ಣಾಸಾಹೇಬ ಜೊಲ್ಲೆ, ಬಸವಜ್ಯೋತಿ ಯುಥ್‌ ಫೌಂಡೇಶನ್‌ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ, ಶಂಕರಪ್ಪ ಪಾಟೀಲ, ಮಹಾಂತೇಶ ಪಾಟೀಲ, ವೀರನಗೌಡ ಪಾಟೀಲ, ಬಿ ಹನುಮಂತರಾಯ, ಕುಮಾರಸ್ವಾಮಿ, ಬಸವರಾಜ ತೇಲಿ, ಶಿವಗೌಡ ಪಾಟೀಲ, ರಾಮಾನುಜ ರೆಡ್ಡಿ, ರಾಮಗೌಡ ಪಾಟೀಲ, ಅಪ್ಪಾಸಾಹೇಬ ಜೊಲ್ಲೆ, ಸಮೀತ ಸಾಸನೆ, ಚಂದ್ರಕಾಂತ ಕೋಠಿವಾಲೆ, ಜಯಾನಂದ ಜಾಧವ, ಕಲ್ಲಪ್ಪಾ ಜಾಧವ, ರಾಜ ಪಠಾಣ,ಪ್ರವೀಣ ಭಾಟಲೆ, ದೀಪಕ ಮಾನೆ, ಸಂಜಯ ಶಿಂತ್ರೆ, ಮಹೇಶ ಭಾತೆ, ಗೋಪಾಳ ನಾಯಕ, ಜಯಾನಂದ ಜಾಧವ, ವಿಜಯ ರಾವುತ, ಅನ್ವರ ದಾಡಿವಾಲೆ, ಲಕ್ಷ್ಮಣ ಕಬಾಡೆ, ಜೊಲ್ಲೆ ಉದ್ಯೋಗ ಸಮೂಹದ ಎಲ್ಲ ಅಂಗಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಸಲಹಾ ಸಮಿತಿ ಸದಸ್ಯರು ಸಹಕಾರ ಶಿಕ್ಷಣ ಮತ್ತು ಸಮಾಜಸೇವಾ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಗಣ್ಯಮಾನ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

loading...