ಅಧಿಕಾರಗಳ ನಡೆಗೆ ಜನಪ್ರತಿನಿಧಿಗಳು ಗರಂ

0
20
loading...

ಕನ್ನಡಮ್ಮ ಸುದ್ಧಿ-ಬೈಲಹೊಂಗಲ: ಪರಿಶಿಷ್ಠ ಜಾತಿ, ಪರಿಶಿಷ್ಟ ಪಂಗಡ ಸೌಲಭ್ಯಗಳನ್ನು ಅಧಿಕಾರಿಗಳು ಸಮರ್ಪಕವಾಗಿ ತಲುಪಿಸುತ್ತಿಲ್ಲ. ಕಚೇರಿಗೆ ಅಲೆದಾಡುವಂತಾಗಿದೆ. ನಿರ್ಲಕ್ಷ ಮಾಡುವ ಅಧಿಕಾರಿಗಳ ಮೇಲೆ ನಿರ್ಧಾಕ್ಷೀಣವಾಗಿ ಕ್ರಮ ಜರುಗಬೇಕೆಂದು ದಲಿತ ಸಮಾಜದ ಮುಖಂಡರು ಅಧಿಕಾರಿಗಳ ವಿರುದ್ದ ಹರಿಹಾಯ್ದರು.
ಸೋಮವಾರ ಪಟ್ಟಣದ ತಾ.ಪಂ ಸಭಾಭವನದಲ್ಲಿ ನಡೆದ ತಾಲೂಕಾ ಮಟ್ಟದ ಪರಿಶಿಷ್ಠ ಜಾತಿ, ಪಂಗಡದ ಯೋಗಕ್ಷೇಮ ಹಾಗೂ ಹಿತರಕ್ಷಣಾ ಸಭೆಯಲ್ಲಿ ದಲಿತ ಮುಖಂಡರು ಒಕ್ಕೊರಿಲಿನಿಂದ ಒತ್ತಾಯಿಸಿದರು.
ಎಸ್‌ಸಿ, ಎಸ್‌ಟಿ ಜನಾಂಗದಿಂದ ಬೇನಾಮಿಯಾಗಿ ಖರೀದಿಸಿದ ಜಮೀನುಗಳನ್ನು ಜನಾಂಗಕ್ಕೆ ವಾಪಸ್ಸು ಕೊಡಿಸಬೇಕು. ಮಕ್ಕಳಿಗೆ ಶಿಷ್ಯವೇತನ ಕೊಡಿಸಬೇಕು. ಜನಪ್ರತಿನಿಧಿಗಳಿಗೆ ಅಧಿಕಾರಿಗಳು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲುತ್ತಿಲ್ಲ ಎಂದು ಜಿಪಂ ಸದಸ್ಯ ನಿಂಗಪ್ಪ ಅರಕೇರಿ ಹಾಗೂ ಅನೇಕರು ದೂರಿದರು.
ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಸಮಸ್ಯೆಗಳು ಬೇಗ ಪರಿಹಾರವಾಗುವಂತೆ ನೋಡಿಕೊಳ್ಳಬೇಕು. ವಿವಿಧ ಇಲಾಖೆಯಲ್ಲಿನ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಇಲ್ಲದಿದ್ದರೆ ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಿ ಕಠಿಣ ಕ್ರಮ ಜರುಗಿಸಲಾಗುವದು ಎಂದರು.
ದಲಿತ ಬಾಂಧವರು ಮೊದಲು ಶಿಕ್ಷಣಕ್ಕೆ, ನಂತರ ಸಂಘಟಗೆ ಆಮೇಲೆ ಅನ್ಯಾಯದ ವಿರುದ್ಧ ಹೋರಾಟಕ್ಕೆ ಮುಂದಾದಾಗಬೇಕು. ಪ್ರಸ್ತುತ ದಿನಗಳಲ್ಲಿ ದಲಿತ ಸಮಾಜದ ಮಕ್ಕಳಿಗೆ ಉನ್ನತ ಶಿಕ್ಷಣ ಕಲ್ಪಿಸಬೇಕೆಂದು ಸರಕಾರಗಳು ಅನೇಕ ಯೋಜನೆ, ಸೌಲಭ್ಯಗಳನ್ನು ನೀಡಿವೆ ಅವುಗಳನ್ನು ಸದ್ಬಳಕೆ ಮಾಡಿಕೊಂಡು ಉನ್ನತ ಅಧಿಕಾರಿಗಳಾಗಬೇಕೆಂದು ಕರೆ ನೀಡಿದರು.
ಬೆಳಗಾವಿಯ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎನ್‌.ಮುನಿರಾಜು ಮಾತನಾಡಿ, ಸಭೆಯಲ್ಲಿ ದಲಿತ ಬಾಂಧವರ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ನಡೆದಾಗ ಮಾತ್ರ ಸಭೆ ಸಾರ್ಥಕವಾಗುತ್ತದೆಂದರು. ದಲಿತ ಬಾಂಧವರಿಗೆ ಸರಿಯಾಗಿ ಸೌಲಭ್ಯ ಒದಗಿಸದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವ ನಿಯಮವಿದೆ ಎಂದರು.
ನ್ಯಾಯವಾದಿ ಎಂ.ಎಂ.ಸೋಪಿನ್‌ ಉಪನ್ಯಾಸ ನೀಡಿದರು. ತಹಶೀಲ್ದಾರ ಪ್ರಕಾಶ ಗಾಯಕವಾಡ, ಡಿವೈಎಸ್ಪಿ ಕರುಣಾಕರ ಶೆಟ್ಟಿ, ಪುರಸಭೆ ಅಧ್ಯಕ್ಷ ರಾಜಶೇಖರ ಮೂಗಿ, ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವಿ.ಜಿ. ಹಿತ್ತಲಮನಿ, ಸಹಾಯಕ್‌ ನಿರ್ದೇಶಕ ಸುಭಾಸ ಸಂಪಗಾಂವಿ, ದಲಿತ ಮುಖಂಡರಾದ ರಮೇಶ ರಾಯಪ್ಪಗೋಳ, ರುದ್ರಪ್ಪ ನಿಂಗನ್ನವರ, ಸುರೇಶ ರಾಯಪ್ಪಗೋಳ, ದಲಿತ ಸಮಾಜ ಬಾಂಧವರು, ಅಧಿಕಾರಿಗಳು ಇದ್ದರು.
ಮೆಟ್ರಿಕ್‌ ಪೂರ್ವ ಬಾಲಕಿಯರ ಶಾಲೆ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ತಹಶೀಲ್ದಾರ ಪ್ರಕಾಶ ಗಾಯಕವಾಡ ಸ್ವಾಗತಿಸಿದರು. ಮಂಜುನಾಥ ಮಕ್ಕರವಳ್ಳಿ ನಿರೂಪಿಸಿದರು. ಸಮಾಜ ಕಲ್ಯಾಣಾಧಿಕಾರಿ ಎ.ವಸಂತ ವಂದಿಸಿದರು.

loading...