ಅಧುನೀಕರಣದಿಂದ ಭಾರತೀಯ ಸಂಸ್ಕೃತಿ ನಶಿಸುತ್ತಿದೆ: ಶಶಿಕಲಾ ಜೊಲ್ಲೆ ಕಳವಳ

0
32
loading...

ಕನ್ನಡಮ್ಮ ಸುದ್ದಿಚಿಕ್ಕೋಡಿ 26: ದೇಶದ ಸಂಸ್ಕೃತಿ ಹಾಗೂ ಪರಂಪರೆಯ ಮೌಲ್ಯಗಳು ಇಂದಿನ ಬದಲಾಗುತ್ತಿರುವ ಆಧುನೀಕರಣ, ನಗರೀಕರಣ, ಪಾಶ್ಚಾತೀಕರಣ, ಜಾಗತೀಕರಣ ಇತ್ಯಾದಿಗಳ ಬಿರುಗಾಳಿಗೆ ಸಿಕ್ಕು ನಶಿಸಿ ಹೋಗುತ್ತಿವೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಕಳವಳ ವ್ಯಕ್ತಪಡಿಸಿದರು.ಯಕ್ಸಂಬಾದ ಜೊಲ್ಲೆ ಉದ್ಯೋಗ ಸಮೂಹದ ಆಯೋಜಿಸಲಾದ 6 ನೇ ವರ್ಷದ ಪ್ರೇರಣಾ ಉತ್ಸವದ ಅಂಗವಾಗಿ ಸಾಂಪ್ರದಾಯಿಕ ಉಡುಗೆ ತೊಡುಗೆ ಸ್ಪರ್ಧೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾಷೆ, ವೇಷ ಭೂಷಣ, ಮಾತುಕತೆ ಮೊದಲಾದವುಗಳು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಇಂದು ನಮ್ಮ ಸಂಸ್ಕೃತಿ, ಪರಂಪರೆ, ಜಾನಪದ ಸಾಹಿತ್ಯ, ಕಲೆ ಮೊದಲಾದ ಹಳೇ ಕಾಲದ ವೈಭವಯುತ ನಮ್ಮ ಪರಂಪರೆ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸಿ ಸಂರಕ್ಷಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗುವ ಹಾಗೂ ಅವುಗಳ ಬಗೆಗಿರುವ ಮಾಹಿತಿಯನ್ನು ಕಲೆ ಹಾಕಿ ಹೊಸ ಪೀಳಿಗೆಗೆ ಪರಿಚಯಿಸುವ ಒಂದು ಶ್ರೇಷ್ಠ ಪ್ರಯತ್ನವೇ ಸಾಂಪ್ರದಾಯಿಕ ಉಡುಗೆ ತೊಡುಗೆ ಸ್ಪರ್ಧೆಯ ಉದ್ದೇಶ ಎಂದರು.ಹಳೆಯ ಮೌಲ್ಯಯುತ ನಮ್ಮ ಸಂಪ್ರದಾಯಗಳು, ಮೂಲ ಪರಂಪರೆಗಳು ನಮ್ಮ ಶ್ರೇಷ್ಠ ಸಂಸ್ಕೃತಿಯನ್ನು ಉಳಿಸಿದರೆ ಹೊಸ ಸಂಸ್ಕೃತಿ ಹೆಮ್ಮರವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಬದಲಾವಣೆ ಜಗದ ನಿಯಮ, ಅದರಂತೆ ಕಾಲಕ್ಕೆ ತಕ್ಕಂತೆ ಬದಲಾವಣೆ ಬೇಕು ಆದರೆ ಅದು ಹಳೆಯದನ್ನು ಮರೆಮಾಚಿ ಬೆಳೆಯುವುದು ಸೂಕ್ತವಲ್ಲ. ಹಳೆಯ ಬೇರು, ಹೊಸ ಚಿಗುರು ನೋಡುಗರ ಕಣ್ಣಿಗೆ ಸೊಗಸು ಎಂಬಂತೆ ಪಾರಂಪಾರಿಕ ಸಂಸ್ಕೃತಿಯ ಮೌಲ್ಯಗಳತ್ತ ನಮ್ಮ ಯುವಜನತೆ ವಾಲುವುದು ಅಷ್ಟೇ ಪ್ರಸ್ತುತವಾಗಿದೆ ಎಂದರು.ಸಹಕಾರಿ ದುರೀಣ ಅಣ್ಣಾಸಾಹೇಬ ಜೊಲ್ಲೆ, ಬೀರೇಶ್ವರ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾದ ಆರ್‌.ಸಿ. ಚೌಗಲಾ, ಉಪ ಪ್ರಧಾನ ವ್ಯವಸ್ಥಾಪಕರಾದ ಎಂ.ಕೆ. ಮಂಗಾವತೆ ಹಾಗೂ ನಿರ್ದೇಶಕ ಮಂಡಳಿ ಸದಸ್ಯರು, ಸಲಹಾ ಸಮಿತಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

loading...