ಅನಂತಕುಮಾರ ಹೆಗಡೆ ರಾಜೀನಾಮೆಗೆ ಕಾಂಗ್ರೆಸ್‌ ಒತ್ತಾಯ

0
29
loading...

ಚಿಕ್ಕೋಡಿ 28: ಸಂವಿಧಾನ ಬದಲಿ ಮಾಡಲಿಕ್ಕೆ ಅಧಿಕಾರಕ್ಕೆ ಬಂದಿದ್ದೇವೆ ಎಂದಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿಕೆ ಖಂಡಿಸಿ ಕೂಡಲೇ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ನೇತೃತ್ವದಲ್ಲಿ ಉಪವಿಭಾಗಾಧಿಕಾರಿ ಗೀತಾ ಕೌಲಗಿ ಅವರಿಗೆ ಮನವಿ ಸಲ್ಲಿಸಿದರು.ಗುರುವಾರ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ನೇತೃತ್ವದಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿರುದ್ಧ ಪ್ರತಿಭಟನೆ ನಡೆಸಿ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.ಭಾರತೀಯ ಸಂವಿಧಾನವನ್ನು ನಂಬಿಕೊಂಡು ಸೌಹಾರ್ದತೆಯನ್ನು ಕಾಯ್ದುಕೊಂಡು ಬರುವಲ್ಲಿ ಯಶಸ್ವಿಯಾಗಿರುವದರಿಮದ ಸ್ವಾತಂತ್ರ್ಯ ಸಮತೆ ಮತ್ತು ಬಂಧುಭಾವ ಡಾ, ಬಿ.ಆರ್‌.ಅಂಬೇಡ್ಕರ ಆಶಯದಂತೆ ಭಾರತವನ್ನು ಎಕ ಸಂಘ ಮತ್ತು ಸುರಕ್ಷಿತವಾಗಿಡಲು ಯಶಸ್ವಿಯಾಗಿದ್ದೇವೆ. ಆದರೆ ಲೋಕಸಭೆ ಸದಸ್ಯರು ಹಾಗು ಕೇಂದ್ರ ಸರಕಾರದ ಕೌಶಲ್ಯ ಅಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಕೊಪ್ಪಳ ಜಿಲ್ಲೆಯ ಸಾರ್ವಜನಿಕ ಸಭೆಯಲ್ಲಿ ಸಂವಿಧಾನದಲ್ಲಿಯ ಆಶಯ ಬಗ್ಗೆ ಸಂಶಯಾತ್ಮಕ ವಿಧಾನ ಮಾಡಿದ್ದಾರೆ.ಧರ್ಮ ನೀರಪೇಕ್ಷತೆಯನ್ನುವರು ಅಮ್ಮ ಅಪ್ಪ ಗೊತ್ತಿರುವುದಿಲ್ಲ ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಮತ್ತು ಜೊತೆಗೆ ನಾವು ಅಧಿಕಾರಕ್ಕೆ ಬಂದಿರುವುದು ಸಂವಿಧಾನವನ್ನು ಬದಲಿ ಮಾಡಲಿಕ್ಕೆ ಎಂದು ಜಾಹಿರವಾಗಿ ಹೇಳಿದ್ದಾರೆ. ಇದರಿಂದ ಭಾರತೀಯರಿಗೆ ನೋವಾಗಿದೆ. ಸಂವಿಧಾನದ ಮೇಲೆ ಶ್ರದ್ದೆ ವಿಶ್ವಾಸ ನಂಬಿಕೆ ಇಲ್ಲವೊ ಅವರು ದೇಶಬಿಟ್ಟು ಹೋಗಬೇಕು ಮತ್ತು ಅನಂತಕುಮಾರ ಹೆಗಡೆ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿ ಸಂಸದ ಹುದ್ದೆ ರದ್ದು ಮಾಡಬೇಕೆಂದು ಕಾಂಗ್ರೆಸ್‌ ಕಾರ್ಯಕರ್ತರು ಒತ್ತಾಯಿಸಿದರು.ನ್ಯಾಯವಾದಿ ಸತೀಶ ಕುಲಕುರ್ಣಿ, ಎಚ್‌.ಎಸ್‌.ನಸಲಾಪೂರೆ, ಮುದ್ದಸರ ಜಮಾದಾರ, ಗುಲಾಬ ಹುಸೆನ ಬಾಗವಾನ, ಸಾಬೀರ ಜಮಾದಾರ, ರಾಜಶೇಖರ ಮಿರ್ಜೆ, ರವಿ ಮಾಳಿ, ಕಾಶಿಮ ಪತ್ತಾರ ಮುಂತಾದವರು ಉಪಸ್ಥಿತರಿದ್ದರು.

loading...