ಅನುಮಾನಾಸ್ಪದವಾಗಿ ವ್ಯಕ್ತಿ ಸಾವು

0
17
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಎಂ. ಕೆ ಹುಬ್ಬಳ್ಳಿ ಕಡೆಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದ ವ್ಯಕ್ತಿ ಕಮಕಾರಟ್ಟಿ ಹದ್ದಿಯ ಕಲ್ಲಹಳ್ಳದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.
ತಾಲೂಕಿನ ಕೊಂಡಸಕೊಪ್ಪ ಗ್ರಾಮದ ಭೀಮಸೇನ ರಾಮಾ ಕರಗುಪ್ಪಿ (48) ಮೃತ ವ್ಯಕ್ತಿ. 6 ರಂದು ಮನೆಯಿಂದ ಬೆಳಿಗ್ಗೆ ಎಂ ಕೆ ಹುಬ್ಬಳಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಸಂಜೆಯಾದರು ಬಾರದಿದ್ದನ್ನು ಕಂಡು ಮನೆಯಲ್ಲಿ 7 ರಂದು ಹುಡುಕುತ್ತಾ ಹೋದ ವೇಳೆ ಕಮಕಾರಟ್ಟಿ ಹತ್ತಿರ ಶವವಾಗಿ ಬಿದ್ದಿದ್ದಾನೆ. ಮೃತ ಸಂಬಂಧಿಗಳು ತಕ್ಷಣ ಹಿರೇ ಬಾಗೇವಾಡಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ತನಿಖೆ ಚಾಲ್ತಿಯಲ್ಲಿದೆ.

loading...