ಅಮರನಾಥ್ ಯಾತ್ರಿಗಳನ್ನು ಹತ್ಯೆಗೈದಿದ್ದ ಉಗ್ರರು ಎನ್‍ಕೌಂಟರ್‍ನಲ್ಲಿ ಫಿನಿಷ್

0
10
loading...

ಶ್ರೀನಗರ: ಅಮರನಾಥ್ ಯಾತ್ರಿಗಳ ಮೇಲೆ ಜುಲೈ ತಿಂಗಳಲ್ಲಿ ದಾಳಿ ಮಾಡಿದ್ದ ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪಾಕ್‍ನ ಇಬ್ಬರು ಸೇರಿದಂತೆ ಲಷ್ಕರ್ ಏ ತೊಯ್ಬಾದ ಮೂವರು ಉಗ್ರರನ್ನು ದಕ್ಷಿಣ ಕಾಶ್ಮೀರದಲ್ಲಿ ಬೇಟೆಯಾಡಿದ್ದೇವೆ. ಈ ಉಗ್ರರು ಅಮರನಾಥ್ ಯಾತ್ರಿಗಳ ಮೇಲಿನ ದಾಳಿಯ ಪ್ರಮುಖ ರೂವಾರಿಗಳು ಎಂದು ಪೊಲೀಸರು ತಿಳಿಸಿದ್ದಾರೆ.ಸ್ಥಳೀಯ ಉಗ್ರ ಯಾವರ್ ಬಸೀರ್, ವಿದೇಶಿ ಉಗ್ರರಾದ ಅಬು ಫರಾನ್, ಅಬು ಮಾವಿಯಾ ಹತ್ಯೆಯಾದವರೆಂದು ಗುರುತಿಸಲಾಗಿದೆ.

ಶ್ರೀನಗರದತ್ತ ತೆರಳುತ್ತಿದ್ದ ಸೇನಾ ವಾಹನದ ಮೇಲೆ ಉಗ್ರರು ಸೋಮವಾರ ಗುಂಡಿನ ದಾಳಿ ಆರಂಭಿಸಿದ್ದರು. ಪರಿಣಾಮವಾಗಿ ಓರ್ವ ಸೈನಿಕ ಹುತಾತ್ಮರಾಗಿದ್ದು, ಮತ್ತೋರ್ವ ಗಾಯಗೊಂಡಿದ್ದಾರೆ. ಈ ವೇಳೆ ಭದ್ರತಾ ಪಡೆ ಪ್ರತ್ಯುತ್ತರವಾಗಿ ಮೂವರು ಉಗ್ರರನ್ನು ಹೊಡೆದುರುಳಿಸಿದೆ. ಜೊತೆಗೆ ಓರ್ವ ಉಗ್ರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಉಗ್ರರು ಜುಲೈ 10 ರಂದು ಅಮರನಾಥ ಯಾತ್ರಿಗಳ ಮೇಲೆ ದಾಳಿ ನಡೆಸಿದ್ದರು. ಪರಿಣಾಮವಾಗಿ 8 ಯಾತ್ರಿಗಳು ಸಾವನ್ನಪ್ಪಿ, 19 ಜನ ಗಾಯಗೊಂಡಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.

loading...