ಅಮಾಯಕರ ಬಂಧನ ಖಂಡಿಸಿ ಪ್ರತಿಭಟನೆ

0
31
loading...

ಕನ್ನಡಮ್ಮ ಸುದ್ದಿ-ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಪೊಲೀಸ್‌ ದೌರ್ಜನ್ಯ ಹಾಗೂ ಅಮಾಯಕರ ಬಂಧನ ಖಂಡಿಸಿ ಮುಂಡಗೋಡ ತಾಲೂಕಿನ ಬಿಜೆಪಿ ಮುಖಂಡರು ಪಟ್ಟಣದಲ್ಲಿ ಪ್ರತಿಭಟನೆ ಹಾಗೂ ಮಿನಿವಿಧಾನಸೌದ ಎದುರು ಕೆಲ ಕಾಲ ಧರಣಿ ಸತ್ಯಾಗ್ರಹ ನಡೆಸಿ ತಹಸೀಲ್ದಾರÀ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪರೇಶ ಮೆಸ್ತಾ ಕೊಲೆ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಿ ಆತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ರಾಜ್ಯ ನಾಯಕಿ ಶೋಭಾ ಕರಂದ್ಲಾಜೆ ಮೇಲೆ ದಾಖಲಿಸಿರುವ ಕೇಸನ್ನು ವಾಪಸ್ಸು ಪಡೆಯಬೇಕು. ಅಮಾಯಕರನ್ನು ಬಂಧಿಸಿ 307ರ ಕಲಂ ದಾಖಲಿಸುವುದನ್ನು ಕೈಬಿಡಬೇಕು. ಹತ್ಯೆಗೈದ ದಿನದಂದು ಮಾರಕಾಸ್ತ್ರ ಹಿಡಿದು ತಿರುಗಾಡುತ್ತಿದ್ದ ಇನ್ನೂ ನಾಲ್ವರನ್ನು ಬಂಧಿಸಬೇಕು. ಹಂತಕರಿಗೆ ಸಹಾಯ ಮಾಡಿದ ಸಿ.ಪಿ.ಐ ಕುಮಾರಸ್ವಾಮಿಯನ್ನು ಕೂಡಲೇ ಅಮಾನತ್ತು ಮಾಡಬೇಕು. ಶಿರಸಿಯಲ್ಲಿ ಪ್ರತಿಭಟನಾಕಾರರ ಮೇಲೆ ಮತ್ತು ನಾಗಾಂಜನೇಯ ದೇವಸ್ಥಾನದ ಮೆಲೆ ಪೊಲೀಸರ ಜೊತೆಗೂಡಿ ಕಲ್ಲು ತೂರಾಟ ನಡೆಸಿದ ಮುಸ್ಲಿಂ ಜಿಹಾದಿ ಯುವಕರನ್ನು ತಕ್ಷಣ ಬಂಧಿಸಬೇಕು. ಶಿರಸಿಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ವಾಹನ ಜಖಂಗೊಳಿಸಿದ ಪೊಲೀಸರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಭಟ್ಕಳದಲ್ಲಿ ಅಂಗಡಿ ಮಳಿಗೆ ಹಂಚಿಕೆಯಲ್ಲಿ ಹಿಂದಿನಿಂದ ಅಂಗಡಿ ನಡೆಸಿಕೊಂಡು ಬಂದವರಿಗೆ ಕಾನೂನು ತಿದ್ದುಪಡಿ ಮಾಡಿ ಅಂಗಡಿ ನೀಡಬೇಕು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಗುಡ್ಡಪ್ಪ ಕಾತೂರ, ಮಾಜಿ ಶಾಸಕ ವಿ.ಎಸ್‌.ಪಾಟೀಲ್‌, ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್‌.ಟಿ.ಪಾಟೀಲ್‌, ನಾಗಭೂಷಣ ಹಾವಣಗಿ, ಉಮೇಶ ಬಿಜಾಪುರ, ಡಿ.ಜೆ.ಕುಲಕರ್ಣಿ, ಅಶೋಕ ಚಲವಾದಿ, ನಾಗರಾಜ ಕುನ್ನೂರ, ಗುರುರಾಜ ಕಾಮತ, ಪಿ.ಜಿ.ತಂಗಚ್ಚನ್‌, ವಾಯ್‌.ಪಿ.ಪಾಟೀಲ್‌, ಕೆಂಜೋಡಿ ಗಲಬಿ, ಮಲ್ಲಿಕಾರ್ಜುನ ಗೌಳಿ ಚನ್ನಪ್ಪಾ ಹಿರೇಮಠ, ಇದ್ದರು.

loading...