ಅಮಾಯಕರ ಮೇಲೆ ಸುಳ್ಳು ಪ್ರಕರಣ ದಾಖಲು: ನಾಯ್ಕ ಆರೋಪ

0
7
loading...

ಕನ್ನಡಮ್ಮ ಸುದ್ದಿ-ಕಾರವಾರ: ಪರೇಶ ಮೇಸ್ತಾ ಕುಟುಂಂಬಕ್ಕೆ ಸರಕಾರ ಸೂಕ್ತ ಪರಿಹಾರ ನೀಡದೆ ಅಮಾಯಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಆ ಮೂಲಕ ಹಿಂದೂಗಳ ವಿರುದ್ಧ ಷಡ್ಯಂತ್ರ ರೂಪಿಸುತ್ತಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ. ನಾಯಕ ಆರೋಪಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊನ್ನಾವರದ ಪರೇಶ ಮೇಸ್ತಾನನ್ನು ಮುಸ್ಲೀಂ ಜಿಹಾದಿಗಳು ಹತ್ಯೆ ಮಾಡಿರುವುದರ ಬಗ್ಗೆ ಸಾರ್ವಜನಿಕರು ಸೇರಿದಂತೆ ಎಲ್ಲರಿಂದಲೂ ಕೇಳಿಬರುತ್ತಿದೆ. ಕೋಮುವಾದದಿಂದ ಹತರಾದವರಿಗೆ ಸರಕಾರ ಈ ಹಿಂದೆ ಪರಿಹಾರ ನೀಡಿದ ಉದಾಹರಣೆಗಳಿದೆ. ಆದರೆ ಈ ಪ್ರಕರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸರಕಾರದಿಂದ ಸೂಕ್ತ ಪರಿಹಾರ ಕೊಡಿಸುವುದನ್ನು ಬಿಟ್ಟು ವಯಕ್ತಿವಾಗಿ ಹಣ ನೀಡುವುದರ ಮೂಲಕ ಪರೇಶನ ಸಾವಿಗೆ ಬೆಲೆಕಟ್ಟುತ್ತಿದ್ದಾರೆ ಎಂದು ಆರೋಪಿಸಿದರು.
ಚಂದಾವರದಲ್ಲಿ ನಡೆದ ಗಲಭೆಯನ್ನು ಪೊಲೀಸರು ಹತ್ತಿಕ್ಕುವಲ್ಲಿ ವಿಫಲರಾಗಿದ್ದರು. ಅಲ್ಲದೆ ಹೊನ್ನಾವರದ ಸಿಪಿಐ ಕುಮಾರಸ್ವಾಮಿ ಕಣ್ಣೆದುರೇ ಅನ್ಯ ಕೋಮಿನವರು ಗಲಭೆ ನಡೆಯುತ್ತಿದ್ದರು ಅದನ್ನು ತಡೆಯುವಲ್ಲಿ ವಿಫಲರಾಗಿದ್ದರು. ಇಷ್ಟಾದರೂ ಪೊಲೀಸರು ಹಿಂದೂಗಳನ್ನು ಬಂಧಿಸಿದ್ದಾರೆ. ಸಂಸದೇ ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ದೂರಿದರು.
ಪರೇಶ ಮೇಸ್ತಾ ಸಾವಿನ ಬಳಿಕ ಜಿಲ್ಲೆಯಲ್ಲಿ ನಡೆದ ಗಲಭೆಗಳಿಗೆ ಸರಕಾರವೇ ನೇರ ಹೊಣೆಯಾಗಿದೆ. ಪ್ರಕರಣದಲ್ಲಿ ಪರೇಶ ಮೇಸ್ತಾ ಮರಣೋತ್ತರ ವರದಿ ಬರದೇ ಇದ್ದರು ಪ್ರಶ್ನೋತ್ತರ ವರದಿಯನ್ನಿಟ್ಟುಕೊಂಡು ಸುಳ್ಳು ಹೇಳಿ ಹಿಂದೂಗಳನ್ನು ರೊಚ್ಚಿಗೆಳಿಸುವಂತೆ ಮಾಡಿದೆ. ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾಗ ಮುಸ್ಲಿಂ ಕೋಮಿನವರು ಕಲ್ಲು ಎಸೆದು ಗಲಭೆ ಸೃಷ್ಟಿಸಿದಾಗ ಅವರನ್ನು ಬಂಧಿಸದೇ ಕೇವಲ ಅಮಾಯಕ ಹಿಂದೂಗಳನ್ನು ಬಂಧಿಸಲಾಗಿದೆ ಎಂದು ಆರೋಪಿಸಿದರು.
ಒಂದೊಮ್ಮೆ ಸರಕಾರ ಇದಾವುದನ್ನು ಈಡೇರಿಸದೆ ಇದ್ದಲ್ಲಿ ಡಿ. 29ರಂದು ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನಾ ಸಭೆ ನಡೆಸಲಾಗುವುದು. ಆಗಲೂ ಸಾಧ್ಯವಾಗದೇ ಇದ್ದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ವಿ.ಎಸ್‌ ಪಾಟೀಲ್‌, ಜೆಡಿ ನಾಯ್ಕ, ಜಿಲ್ಲಾ ವಕ್ತಾರ ರಾಜೇಶ ನಾಯ್ಕ, ಬಿಜೆಪಿ ಮಹಿಳಾ ಮುಖಂಡೆ ರೂಪಾಲಿ ನಾಯ್ಕ, ಮನೋಜ ಭಟ್‌, ಗಣಪತಿ ಉಳ್ವೇಕರ್‌ ಇತರರು ಇದ್ದರು.

loading...