ಅಮಿತ ಶಾ ಜವಾಬ್ದಾರಿಯಿಂದ ನಡೆದುಕೊಳ್ಳಲಿ: ಸಚಿವ ರಾಮಲಿಂಗಾ ರೆಡ್ಡಿ

0
93
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:6 ಅಮಿತ ಷಾ ಕೇಂದ್ರ ಆಡಳಿತ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಅವರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಅವರು ಬುಧವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತ, ಮೈಸೂರು ಜಿಲ್ಲೆಯ ಹುಣಸುರನಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದ ಸಂಸದ ಪ್ರತಾಪ್ ಸಿಂಹ್ ಅವರ ಮಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ಅವರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಇಂಥ ಬೇಜವಾಬ್ದಾರಿ ಹೇಳಿಕೆ ನೀಡಬಾರದು ಎಂದು ಎಚ್ಚರಿಕೆ‌ ನೀಡಿದರು.
ಬಿಜೆಪಿ ಪಕ್ಷದವರು ತಮ್ಮ ನಡುವಳಿಕೆಯನ್ನು ತಿದ್ದಿಕೊಳ್ಳಬೇಕು.ಬಿಜೆಪಿಯವರು ಮತಕ್ಕಾಗಿ ಹನುಮಜಯಂತಿ, ದತ್ತ ಜಯಂತಿಯನ್ನು ಗುತ್ತಿಗೆ ಪಡೆದುಕೊಂಡಿದ್ದಾರಾ ? ದೇವರಲ್ಲಿ ನಮಗೂ‌ಭಕ್ತಿ ಇದೆ. ಮತಕ್ಕಾಗಿ ಓತಿಕಾಟದ ಬಣ್ಣ ಬದಲಿಸುವುದು ಸೂಕ್ತವಲ್ಲ ಎಂದು ಹೇಳಿದರು.
ಮೈಸೂರು ಎಸ್ಪಿ ರವಿ ಚನ್ನಣ್ಣನವರ ತಮ್ಮ ಕರ್ತವ್ಯವನ್ನು ‌ನಿರ್ವಹಿಸಿದ್ದಾರೆ. ಸಂಸದ ಪ್ರತಾಪ್ ಸಿಂಹ್ ಬ್ಯಾರಿಕ್ಯಾಡ ಮೇಲೆ ಕಾರು ಹತ್ತಿಸಿ ಕಾನೂನನ್ನು ಮುರಿದಿಲ್ಲವೆ. ಹೀಗಾಗಿ ಗಲಾಟೆಯನ್ನು ತಡೆಯಲು ಎಸ್ಪಿ ತಮ್ಮ ಕರ್ತವ್ಯ ‌ನಿಭಾಯಿಸಿದ್ದಾರೆ ಎಂದರು.

loading...