ಏಕಾಗ್ರತೆಯಿಂದ ಅಧ್ಯಾಯನ ಮಾಡಿದರೆ ಉನ್ನತ ಹುದ್ದೆ ಪಡೆಯಲು ಸಾಧ್ಯ: ಶ್ರೀಗಳು

0
28
loading...

ಕನ್ನಡಮ್ಮ ಸುದ್ದಿ-ರಾಮದುರ್ಗ: ಸ್ಪರ್ಧಾತ್ಮಾಕ ಯುಗದಲ್ಲಿ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಧ್ಯಾಯನ ಶೀಲರಾದಾಗ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನಕ್ಕೆರಲು ಸಾಧ್ಯವಾಗುತ್ತದೆ. ಅನೇಕ ಸಾಧಕರ ಮಾಡಿದ ಸಾಧನೆಗಳನ್ನು ನೋಡಿ ತಾವು ಅಂದುಕೊಂಡ ಗುರಿ ತಲಪಲು ಸಾಧ್ಯ ಎಂದು ಮುನವಳ್ಳಿ ಸೋಮಶೇಖರ ಮಠದ ಮುರಘರಾಜೇಂದ್ರ ಸ್ವಾಮೀಜಿ ಹೇಳಿದರು.
ಗುರುವಾರ ತಾಲೂಕಿನ ಚಂದರಗಿಯ ಕ್ರೀಡಾ ವಸತಿ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪಾಲಕರ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು. ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಶಾರೀರಿಕ, ಮಾನಸಿಕ ಹಾಗೂ ನೈತಿಕ ಶಿಕ್ಷಣದ ಅಗತ್ಯವಿದೆ. ಚಂದರಗಿಯ ಈ ಕ್ರೀಡಾ ಶಾಲೆಯು ಹೆಮ್ಮೆಯ ಸಂಸ್ಥೆಯಾಗಿದ್ದು, ರಾಷ್ಟ್ರ ಮತ್ತು ಅಂತಾರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ತಯಾರು ಮಾಡಿದ ಕೀರ್ತಿ ಈ ಸಂಸ್ಥೆಗೆ ಸಲ್ಲುತ್ತದೆ. ಈ ಕಾರ್ಯ ಶಾಲೆಯಲ್ಲಿ ನಿರಂತರ ನಡೆಯಬೇಕೆಂದು ಹೇಳಿದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಎಚ್‌ ಬಿ. ಅಸೂಟಿ ಮಾತನಾಡಿ, ಮಂತ್ರಾಲಯದಲ್ಲಿ ಕಣ್ಣು ಮುಚ್ಚಿ ಕುಳಿತುಕೊಳ್ಳುವುದಕ್ಕಿಂತ ಗ್ರಂಥಾಲಯದಲ್ಲಿ ಕಣ್ಣು ತೆರೆದುಕೊಳ್ಳುವುದು ಉತ್ತಮ. ಹಣ, ಸಂಪತನ್ನು ಕಳೆದುಕೊಳ್ಳಬಹುದು ಆದರೆ ವಿದ್ಯೆಯನ್ನು ಯಾರು ಕಿತ್ತುಕೊಳ್ಳುವದಿಲ್ಲ. ಗುರು ಶಿಷ್ಯ ಪರಂಪರೆಯಲ್ಲಿ ಹಿಂದಿನ ಗುರುಕುಲವನ್ನು ಹೋಲುವ ಈ ಶಾಲೆ ನಿಜಕ್ಕೂ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.
ಸ್ಪೋಕೋ ಸಂಸ್ಥೆಯ ಅಧ್ಯಕ್ಷ ಆರ್‌ ಎ. ಪಾಟೀಲ (ಮುರಕೀಭಾಂವಿ) ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಕೆ ಎಸ್‌. ಉಮರಾಣಿ, ನಿರ್ದೇಶಕ ಎಂ ಎಸ್‌. ಮನೋಳಿ, ಎಂ ಜೆ. ತೇರಣೇಕರ, ಎಸ್‌ ಆರ್‌. ನವರಕ್ಕಿ, ಎಸ್‌ ಜಿ. ಮಡಿವಾಳರ(ದೇಸಾಯಿ), ಆರ್‌ ಸಿ. ಯಕ್ಕುಂಡಿ, ಬಿ ಎಸ್‌. ಕಾಕತಕರ, ಬಿ ಜಿ. ಮರನೂರ, ಎಸ್‌ ಆರ್‌. ಮೇತ್ರಿ, ರಾಜೇಶ್ವರಿ ಯಾದವಾಡ ಉಪಸ್ಥಿತರಿದ್ದರು.
ಪ್ರಾಚಾರ್ಯ ಎ ಎನ್‌. ಮೊದಗಿ ಸ್ವಾಗತಿಸಿದರು. ವಿ ಎನ್‌. ಶಿವಸ್ವಾಮಿ ವಾರ್ಷಿಕ ವರದಿ ವಾಚನ ಮಾಡಿದರು. ಎಸ್‌ ಎ. ಹಿರೇಮಠ ನಿರೂಪಿಸಿದರು. ಎಸ್‌ ಎಂ. ಪಾಟೀಲ ವಂದಿಸಿದರು.

loading...