ಏಜೆಂಟ್‍ರ ಹಾವಳಿ ನಿಲ್ಲಿಸುವಂತೆ ಒತ್ತಾಯ

0
25
loading...

ಚಿಕ್ಕೋಡಿ 19: ಸರಕಾರದಿಂದ ಮಂಜೂರಾಗುವ ವೃದ್ಧಾಪ್ಯವೇತನ, ವಿಕಲಚೇತನ ಮತ್ತು ವಿಧವಾ ಮಾಶಾಸನ ಮಂಜೂರಾತಿ ಆದೇಶ ಪತ್ರಗಳನ್ನು ಏಜೆಂಟರ ಕೈಗೆ ಕೊಡದೆ ಕಂದಾಯ ಇಲಾಖೆಯಿಂದ ನೇರವಾಗಿ ಫಲಾನುಭವಿಗಳಿಗೆ ತಲುಪಿಸುವಂತೆ ಒತ್ತಾಯಿಸಿ ಮಂಗಳವಾರ ಭಜರಂಗ ದಳ, ಶ್ರೀರಾಮ ಸೇನೆ ಮತ್ತು ಬಿಜೆಪಿ ಕಾರ್ಯಕರ್ತರು ತಹಶೀಲ್ದಾರ ಸಿ.ಎಸ್.ಕುಲಕರ್ಣಿಯವರಿಗೆ ಮನವಿ ಸಲ್ಲಿಸಿದರು.

ಶ್ರೀರಾಮ ಸೇನೆ ಮತ್ತು ಭಜರಂಗ ದಳ ಮುಖಂಡ ವಿಕ್ರಮ ಬನಗೆ ನೇತೃತ್ವದಲ್ಲಿ ಮಿನಿವಿಧಾನ ಸೌಧದೆದುರು ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.ಬಸವರಾಜ ಕಲ್ಯಾಣಿ, ಜಗದೀಶ ಮಾಯನ್ನವರ, ಶಿವುಕುಮಾರ ದ್ರಾಕ್ಷೆ, ವಿನಾಯಕ ತಂಗಡೆ, ರಾಹುಲ ಕಟ್ಟಿಮನಿ, ಭಗವಂತ ಹಜಾರೆ, ಕಿರಣ ದೇವಡಕರ, ಮೌಲಾ ಮಾಂಜರೇಕರ, ಅಜೀತ ಲೋಕರೆ, ನೇಹಲ ಹೊಸಮನಿ ಮುಂತಾದವರು ಉಪಸ್ಥಿತರಿದ್ದರು.

loading...