ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಖಚಿತ – ನಾಯಿಕ

0
35
loading...

 

ಕನ್ನಡಮ್ಮ ಸುದ್ಧಿ- ಕೋಹಳ್ಳಿ : ಗುಜರಾತ ರಾಜ್ಯದಲ್ಲಿ ಕಾಂಗ್ರೇಸ್‌ ಪಕ್ಷವು ಬಲವರ್ದನೆಯಾಗಿದ್ದು, ಮೋದಿಯವರ ಜನಪ್ರೀಯತೆಯ ಇಳಿಮುಖ ಶುರುವಾಗಿದೆ. ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಖಚಿತ ಎಂದು ಕೆಪಿಸಿಸಿ ಉಸ್ತುವಾರಿ ಕಾರ್ಯದರ್ಶಿ ಕಾಂತಾ ನಾಯಿಕ ಹೇಳಿದರು.
ಸೋಮವಾರ ಸಂಜೆ ಗ್ರಾಮದಲ್ಲಿ ನಡೆದ ಐಗಳಿ ಜಿಲ್ಲಾ ಪಂಚಾಯತ ಕ್ಷೇತ್ರದ ಬೂತಮಟ್ಟದ ಕಾಂಗ್ರೇಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಬೂತಮಟ್ಟದ ಸಮಿತಿಯಿಂದ ಪ್ರತಿಯೊಂದು ಕಾರ್ಯಗಳು ಶಿಸ್ತು, ಬದ್ದವಾಗಿ ನಡೆಯಬೇಕು. ಬೂತಮಟ್ಟದಲ್ಲಿ ನೇಮಕಗೊಂಡ ಸಮಿತಿಯವರು ಕಾಂಗ್ರೇಸ್‌ ಪಕ್ಷದ ಸಾಧನೆಗಳನ್ನು ಪ್ರತಿಯೊಂದು ಮನೆಗೆ ತಲುಪಿಸಿ ಬೂತಮಟ್ಟದಲ್ಲಿ ಕಾಂಗ್ರೇಸ್‌ ಪಕ್ಷಕ್ಕೆ ಮತ ಹಾಕಿಸಿ, ಗೆಲ್ಲಿಸುವುದು ನಮ್ಮ ಗುರಿಯಾಗಬೇಕು ಎಂದು ಹೇಳಿದರು.
ಅಥಣಿ ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ಮಾತನಾಡಿ, ಕಾಂಗ್ರೆಸ್‌ ಪಕ್ಷದ ಸಾಧನೆಗಳನ್ನು ಮನೆ-ಮನೆಗೆ ತಿಳಿಸಲು ಬೂತಮಟ್ಟದಲ್ಲಿ 13 ಜನರ ಸಮಿತಿಯನ್ನು ರಚಿಸಿದ್ದು, ಈ ಸಮಿತಿಯೂ ತಮ್ಮ ಬೂತನಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬಲಪಡಿಸಬೇಕು. 2018 ರ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ವಿಧಾನಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷ ಗೆಲವು ಸಾಧಿಸಲಿದೆ ಎಂದು ಹೇಳಿದರು.
ಸಭೆಯಲ್ಲಿ ಕಾಂಗ್ರೇಸ್‌ ಮುಖಂಡರಾದ ಮಹೇಶ ಕುಮಠಳ್ಳಿ, ಸದಾಶಿವ ಬುಟಾಳಿ, ಎಸ್‌ ಎಂ ನಾಯಿಕ, ಗಜಾನನ ಮಂಗಸೂಳಿ, ಬಸವರಾಜ ಬುಟಾಳಿ, ಅಡಿವೆಪ್ಪ ಕೆಂಚಣ್ಣವರ, ತಾಪಂ ಸದಸ್ಯ ಜೈವಂತ ದೇಸಾಯಿ, ಶಿವಾಜಿ ಕೋಕಳೆ, ಸದಾಶಿವ ಹರಪಾಳೆ, ಅಥಣಿ ಕಾಂಗ್ರೇಸ್‌ ಯುವ ಘಟಕದ ಅಧ್ಯಕ್ಷ ನಿಂಗಪ್ಪ ನಂದೇಶ್ವರ, ಶೌಖತಲಿ ಡೊಂಗರಗಾಂವ, ಸತ್ಯಪ್ಪ ಸನದಿ, ಮೋಹನ ಸೂರ್ಯವಂಶಿ, ರಾಮು ಕೋಳಿ, ಮಹಾದೇವ ಪಾಟೀಲ, ತುಕಾರಾಮ ಫಡತಾರೆ, ಮೈಬೂಬ ಪಡಸಲಗಿ, ಕುತ್ಬುದ್ದಿನ್‌ ಪಡಸಲಗಿ, ಹಣಮಂತ ನಾಯಿಕ, ಅಪ್ಪು ತಾಂವಶಿ, ಬಸವಂತ ಗುಡ್ಡಾಪೂರ ಸೇರಿದಂತೆ ಐಗಳಿ ಜಿಲ್ಲಾ ಪಂಚಾಯತ ಕ್ಷೇತ್ರದ ಎಲ್ಲ ಕಾಂಗ್ರಸ್‌ ಕಾರ್ಯಕರ್ತರಿದ್ದು ಗೂಳಪ್ಪ ಕೋಳಿ ಸ್ವಾಗತಿಸಿ, ವಂದಿಸಿದರು.

loading...