ಕಳ್ಳ ಬಟ್ಟಿ ಸಾಗಿಸುತ್ತಿದ್ದ ಯುವಕನ ಬೆನ್ನಟ್ಟಿದ ಪೊಲೀಸರು ಭಯಬೀತಗೊಂಡು ಬಾವಿಗೆ ಹಾರಿ ಯುವಕ ಸಾವು

0
26
loading...

ಕನ್ನಡಮ್ಮ ಸುದ್ದಿ ಬೆಳಗಾವಿ:
ಕಳ್ಳಬಟ್ಟಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬೆನ್ನಟ್ಟಿದ ಅಬಕಾರಿ ಪೊಲೀಸರು ಭಯಬೀತಗೊಂಡ ವ್ಯಕ್ತಿ ದೇವಗೀರಿ ಗ್ರಾಮದ ಜಮೀನಿನಲ್ಲಿರುವ ಬಾವಿಗೆ ಬಿದ್ದು ಸಾವನ್ನಪ್ಪಿದ‌ ಘಟನೆ ಇಂದು ಬೆಳಗಿನ ಜಾವ ನಡೆದಿದೆ.
ತಾಲೂಕಿನ ಸೊನಟ್ಟಿ ಗ್ರಾಮದ ಅಡೆವೆಪ್ಪ ಸಿದ್ದಪ್ಪ ಮುಚ್ಚಂಡಿ (೨೩) ಮೃತ ಯುವಕ. ಬೆಳಗಿನ ಜಾವ ಕಳ್ಳಬಟ್ಟಿ ಸಾಗಿಸುತ್ತಿದ್ದಾರೆ ಎಂಬ ಮಾಹಿತಿ ಆಧಾರದ ಮೇಲೆ ಅಬಕಾರಿ ಪೊಲೀಸರು ದೇವಗಿರಿ‌ ಗ್ರಾಮದ ಹದ್ದಿಯಿಂದ ಕಳ್ಳಬಟ್ಟಿ ಸಾರಾಯಿ ಕೊಂಡೊಯುತ್ತಿದ್ದ ಈ ವೇಳೆ ಪೊಲೀಸರು ಯುವಕನನ್ನು ಬೆನ್ನಟ್ಟಿದ್ದಾರೆ. ತಪ್ಪಿಸಿಕೊಳ್ಳಲು ಯುವಕ ಓಡೊಡಿ ಹೋಗುವ ವೇಳೆ ಹತ್ತಿರದಲ್ಲಿಯೆ ಇದ್ದ‌ ಬಾವಿಗೆ ಹಾರಿ ಪ್ರಾಣ ಕಳೆದಕೊಂಡಿದ್ದಾನೆ.
ಆಕ್ರೋಶಗೊಂಡ ಮೃತ ಯುವಕನ ತಂದೆತಾಯಿ ಪೊಲೀಸರು ನನ್ನ ಮಗನ ತಲೆಗೆ ಬಲವಾಗಿ ಹೊಡೆದು ಭಾವಿಯಲ್ಲಿ ಎಸೆದುಹೋಗಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ನಂತರ ಗ್ರಾಮಸ್ಥರು ಜಿಲ್ಲಾ ಅಬಕಾರಿ ಕಚೇರಿಗೆ ತೆರಳಿ ವಾಹನ ಮತ್ತು ಪೊಲೀಸರ ಮೇಲೆ ಕಲ್ಲು ತೂರಾಡಿದ್ದರಿಂದ ಓರ್ವ ಪೊಲೀಸನಿಗೆ ಗಾಯ ವಾಹನ ಜಕ್ಕಂ ಗೊಂಡಿದೆ. ತಕ್ಷಣ ಪೊಲೀಸರು ಆಗಮಿಸಿ ಗ್ರಾಸ್ಥರಿಗೆ ತಿಳಿ ಹೇಳಿ ಗಲಬೆಯನ್ನು ನಿಂತ್ರಣ ಮಾಡಿದ್ದಾರೆ.

loading...