ಕಾಂಗ್ರೆಸ ಕಚೇರಿಗೆ ಮುತ್ತಿಗೆ ಹಾಕಲು ಯತ್ನ, ಕಾರ್ಯಕರ್ತರ ಬಂಧನ ನಂತರ ಬಿಡುಗಡೆ

0
44
loading...

ಧಾರವಾಡ- ಮಹದಾಯಿ ಕಳಸಾ ಬಂಡೂರಿ ವಿಚಾರವಾಗಿ ಬೆಂಗಳೂರಿನಲ್ಲಿ ಬಿಜೆಪಿ ಕಚೇರಿ ಎದುರಿಗಿನ ಕಾಂಗ್ರೆಸ ಪ್ರತಿಭಟನೆಯನ್ನು ವಿರೋಧಿಸಿ ಧಾರವಾಡ ಶಹರ ಮತ್ತು ಗ್ರಾಮೀಣ ಬಿಜೆಪಿ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಶಹರದ ಕಾಂಗ್ರೆಸ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮುತ್ತಿಗೆ ಹಾಕಲು ಯತ್ನಿಸಿದಾಗ ಪೆÇಲೀಸರು ಕಾರ್ಯಕರ್ತರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.
ಕರ್ನಾಟಕ ರಾಜ್ಯಕ್ಕೆ ಮಹದಾಯಿ ನೀರು ತರುವಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರು ಗೋವಾ ಸಿಎಂ ಪರಿಕ್ಕರ್ ಮನವೊಸಿ, ರೈತರಿಗೆ ಸಿಹಿ ಸುದ್ದಿ ನೀಡಿದ್ದು ಸಹಿಸಿದ ಕಾಂಗ್ರೆಸ್ ಬಿಎಸ್‍ವೈ ಮೇಲೆ ಗೂಭೆ ಕೂಡಿಸುತ್ತಿದೆ. ಸರಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳುವಲ್ಲಿ ಹಿಂದೇಟು ಹಾಕುವುದು ರೈತರಿಗೆÉ ಮಾಡಿದ ಮೋಸ. ಮಹದಾಯಿ ವಿಷಯದಲ್ಲಿ ರಾಜ್ಯ ಸರ್ಕಾರ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ.
ಮಾಜಿ ಶಾಸಕ ಸೀಮಾ ಮಸೂತಿ, ಬಿಜೆಪಿ ರೈತ ಸಂಘದ ರಾಜ್ಯಾಧ್ಯಕ್ಷ ಈಶ್ವರಚಂದ್ರ ಹೊಸಮನಿ, ಪಾಲಿಕೆ ಸದಸ್ಯ ಶಿವು ಹಿರೇಮಠ, ಸಂಜಯ ಕಪಟಕರ, ವಿಜಯಾನಂದ ಶೆಟ್ಟಿ, ಶಂಕರ ಶೇಳಕೆ, ಬಲರಾಮ್ ಕುಸುಗಲ್, ಶಿವಣ್ಣ ಬಡಣ್ಣವರ, ಸ್ಲಂ ಮೋರ್ಚಾ ರಾಜ್ಯ ಉಪಾಧ್ಯಕ್ಷ ಈರೇಶ ಅಂಚಟಗೇರಿ, ಕಾರ್ಯದರ್ಶಿ ರಾಜು ಕೋಟೆನ್ನವರ, ಯಲ್ಲಪ್ಪ ಅರವಳಾದ, ಈರಣ್ಣ ಹಪ್ಪಳಿ, ಮೋಹನ್ ರಾಮದುರ್ಗ, ಶರಣು ಅಂಗಡಿ, ಅನಸೂಯಾ ಹಿರೇಮಠ, ವಾಣಿ ಮೋಟೆಕರ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪೋಟೊ :- 04

loading...