ಕಾಮುಕರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ

0
18
loading...

ಕನ್ನಡಮ್ಮ ಸುದ್ದಿ-ರಾಮದುರ್ಗ: ದಲಿತರ ಮೇಲಿನ ದೌರ್ಜನ್ಯ ಖಂಡಿಸಿ, ಅಪಾಧಿತರ ಮೇಲೆ ಕ್ರಮ ಜರುಗಿಸಲು ಒತ್ತಾಯಿಸಿ ಇಲ್ಲಿನ ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ವೇದಿಕೆಗಳ ನೇತೃತ್ವದಲ್ಲಿ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಡಿ.20 ರಂದು ವಿಜಯಪುರದಲ್ಲಿ ದಲಿತ ಬಾಲಕಿ ದಾನವ್ವನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು ಮಾನವ ಕುಲಕ್ಕೆ ನಾಚಿಕೆ ತರುವಂತದ್ದು. ಇಡೀ ರಾಜ್ಯದಲಲಿ ಮಹಿಳೆಯರನ್ನು, ವಿದ್ಯಾರ್ಥಿಗಳನ್ನು ಚುಡಾಯಿಸುವದು, ಬಲತ್ಕಾರದಂತಹ ಹೇಯ ಕೃತ್ಯ ನಡೆಯುತ್ತಿದ್ದರೂ ಸರಕಾರ ಮೌನ ವಹಿಸಿದ್ದು ಖಂಡನೀಯ.
ಶಾಲೆ ಬಿಟ್ಟ ನಂತರ ಮನೆಗೆ ತೆರಳುತ್ತಿರುವ ಅಮಾಯಕ ದಲಿತ ಬಾಲಕಿ ದಾನಮ್ಮಳನ್ನು ಎಳೆಎಎಎದುಯ್ದು ಮನೆಯಲ್ಲಿ ಕೂಡಿ ಹಾಕಿ ಸಾಮೂಹಿಕ ಅತ್ಯಾಚಾರ ಮಾಡಿದ್ದು, ಮಾನವ ಕುಲಕ್ಕೆ ಕಳಂಕ ತರುವಂತಾಗಿದೆ. ಕೂಡಲೇ ಈ ಕೃತ್ಯ ನಡೆಸಿದ ಕಾಮಾಂಧರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಕಾಶ ಹಲಗಿ, ಬಸವರಾಜ ಹಲಗಿ, ಲಕ್ಷ್ಮಣ ಖಾನಪೇಠ, ರಮೇಶ ಬಂಡಿವಡ್ಡರ, ರಮೇಶ ಮೇತ್ರಿ, ಮಂಜುನಾಥ ತೊರಗಲ್‌, ರಮೇಶ ರಾಯಬಾಗ, ಮುತ್ತು ಮ್ಯಾಗೇರಿ, ಗಣಪತಿ ದೊಡಮನಿ, ಮುರಗೇಶ ಕಂಬಣ್ಣವರ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

loading...