ಕುಮಟಾ: ಶಾಂತಿಯುತ ವಾತಾವರಣ ನಿರ್ಮಾಣ

0
16
loading...

ಕನ್ನಡಮ್ಮ ಸುದ್ದಿ-ಕುಮಟಾ: ತಾಲೂಕಿನಾದ್ಯಂತ ಶಾಂತಿಯುತ ವಾತಾವರಣ ನಿರ್ಮಾಣವಾಗಿದ್ದು ಬುಧವಾರದಿಂದ ಶಾಲಾ ಕಾಲೇಜುಗಳು ಪ್ರಾರಂಭವಾಗಿ ಯಥಾಸ್ಥಿತಿಗೆ ಬರಲಿದ್ದು, ಸಾರ್ವಜನಿಕರು ಯಾವುದೇ ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಉಪವಿಭಾಗಾಧಿಕಾರಿ ಲಕ್ಷ್ಮೀಪ್ರೀಯಾ ತಿಳಿಸಿದರು.
ಅವರು ಮಂಗಳವಾರ ಪ್ರವಾಸಿ ಮಂದಿರದಲ್ಲಿ ವಿವಿಧ ಸಂಘಗಳ ಪ್ರಮುಖರನ್ನು ಕರೆದು ಸಭೆ ನಡೆಸಿ ಚರ್ಚಿಸಿದರು. ಬುಧವಾರದಿಂದ ಎಲ್ಲಾ ಅಂಗಡಿಗಳನ್ನು ತೆರೆಯಬಹುದಾಗಿದ್ದು, ಸಾರ್ವಜನಿಕರು ಭಯ ಪಡುವ ಅವಶ್ಯಕತೆಯಿಲ್ಲ. ಬಸ್‌, ರಿಕ್ಷಾ, ಟೆಂಪೋ ಮತ್ತಿತರ ಎಲ್ಲಾ ವಾಹನಗಳು ಎಂದಿನಂತೆ ಸಂಚಾರ ಪ್ರಾರಂಭಿಸಲಿದೆ ಎಂದರು.
ಎಡಿಶನಲ್‌ ಎಸ್‌ ಪಿ ಗೋಪಾಲ ಮಾತನಾಡಿ, ಕುಮಟಾದಲ್ಲಿ ಬಂದ್‌ ಪ್ರತಿಭಟನೆ ಮಾಡದಂತೆ ಸಂಘಟಿಸಿದ ಪ್ರಮುಕರಿಗೆ ಸೂಚನೆ ನೀಡಿz್ದೇವು. ಏನಾದರೂ ಅಹಿತಕತ ಘಟನೆ ನಡೆದರೆ ನೀವೆ ಜವಬ್ದಾರರಾಗುತ್ತೇವೆಂದು ಎಚ್ಚರಿಸಿz್ದೇವು. ಆದರೂ ಪ್ರತಿಭಟನೆ ನಡೆಸಿ, ಅನಾಹುತ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋ ಪೂಟೇಜ್‌ಗಳನ್ನು ವೀಕ್ಷಿಸಿ, ದುಷ್ಕೃತ್ಯ ವೆಸಗಿದವರನ್ನು ಗುರುತಿಸಿ, ಸುಮಾರು 600 ಜನರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದೇವೆ. ಈ ಪ್ರತಿಭಟನೆ ಸಂಘಟಿಸಿದ ಪ್ರಮುಖರು ಸೇರಿದಂತೆ 72 ಜನರನ್ನು ಗುರುತಿಸಿರುವುದರಿಂದ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಅದರಲ್ಲಿ ಈಗಾಗಲೇ 25 ಜನರನ್ನು ಬಂಧಿಸಲಾಗಿದೆ. ಉಳಿದವರನ್ನು ಶೀಘ್ರದಲ್ಲಿ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಕೆಲವು ವಾಟ್ಸಅಫ್‌ ಗ್ರುಪ್‌ಗಳಲ್ಲಿ ಹಾಗೂ ಫೇಸ್‌ಬುಕ್‌ಗಳಲ್ಲಿ ರವಾನಿಸುತ್ತಿರುವ ಸಂದೇಶಗಳನ್ನು ವೀಕ್ಷಣೆ ಮಾಡಲಾಗುತ್ತಿದೆ. ಯಾವುದೇ ತಪ್ಪು ಸಂದೇಶಗಳು ಬಂದರೆ ಆ ಕುರಿತು ಕಾನೂನು ಕ್ರಮ ಜರುಗಿಸಲಾಗುವುದು. ಅಲ್ಲ ಸಲ್ಲದ ಸಂದೇಶಗಳಿಗೆ ಯಾರೂ ಕಿವಿಗೊಡಬಾರದು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಮೇಘರಾಜ ನಾಯ್ಕ, ರಿಕ್ಷಾ ಸಂಘದ ಅಧ್ಯಕ್ಷ ನ್ಯಾಯವಾದಿ ಆರ್‌ ಜಿ ನಾಯ್ಕ, ಔಷಧ ಅಂಗಡಿ ಅಸೊಸಿಯೇಶನ್‌ ಅಧ್ಯಕ್ಷ ಗಣೇಶ ಎಂ ಕಾಮತ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

loading...