ಕುವೆಂಪು ಅವರ ಸಾಹಿತ್ಯ ಎಲ್ಲರಿಗೂ ಬೆಳಕಾಗಿದೆ -ಸಚಿವ ರುದ್ರಪ್ಪ

0
33
loading...

ಹಾವೇರಿ: ಡಿ.29: ಕವಿಗಳಲ್ಲಿ ಕುವೆಂಪುರವರು ಪ್ರಮುಖರಾಗಿದ್ದಾರೆ ಹಾಗೂ ಅವರ ಸಾಹಿತ್ಯ ಎಲ್ಲರಿಗೂ ಬೆಳಕಾಗಿದೆ. ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ರಾಷ್ಟ್ರಕವಿ ಎಂದು ಜವಳಿ, ಮುಜರಾಯಿ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ರುದ್ರಪ್ಪ ಲಮಾಣಿ ಅವರು ಹೇಳಿದರು.
ಅವರು ಇಂದು ನಗರದ ಡಿ.ದೇವರಾಜ ಅರಸು ಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿಶ್ವ ಮಾನವ ದಿನಾಚರಣೆ (ರಾಷ್ಟ್ರ ಕವಿ ಕುವೆಂಪು ಜನ್ಮದಿನ) ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕುವೆಂಪು ಅವರು ನಾಡಿನ ಸುಪುತ್ರರು, ನಾಡಿಗೆ ಅವರ ಕೊಡುಗೆ ಅಪಾರವಾಗಿದೆ. ಮಲೆನಾಡಿನಲ್ಲಿ ಹುಟ್ಟಿಬೆಳೆದ ಅವರು, ಮಲೆನಾಡಿನ ಸೊಬಗನ್ನು ಎಳೆಎಳೆಯಾಗಿ ತಮ್ಮ ಕಾವ್ಯಗಳಲ್ಲಿ, ಕವಿತೆಗಳಲ್ಲಿ ಅಗಾಧವಾಗಿ ಬಣ್ಣಿಸಿದ್ದಾರೆ. ನಾಟಕಗಳನ್ನು, ಕವನ ಸಂಕಲನ, ಕಾದಂಬರಿ, ಮಹಾಕಾವ್ಯ, ಲೇಖನಗಳನ್ನು ಸಹ ರಚಿಸಿದ್ದರು. ಅವರು ಬರೆದ ನಾಡಗೀತೆಯನ್ನು ಪ್ರತಿ ಕಾರ್ಯಕ್ರಮದಲ್ಲಿ ಹಾಡಲಾಗುತ್ತಿದೆ ಎಂದರು.
ಕುವೆಂಪುರವರು ಕನ್ನಡ ಸಾಹಿತ್ಯವನ್ನು ಮೇರು ಶಿಖಕರಕ್ಕೇರಿಸಿದ ಮಹಾನ್ ಚೇತನ ಹಾಗೂ ಅವರು ಸಾಹಿತ್ಯದಲ್ಲಿ ಮಾನವೀಯತೆ ಮೆರೆದಿದ್ದರು. ಕುವೆಂಪು ಅವರು ಒಬ್ಬ ವಿಶ್ವಮಾನವ, ಅವರ ವಿಚಾರಧಾರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ರಾಷ್ಟ್ರ ಕವಿ ಕುವೆಂಪು ಅವರ ಜನ್ಮ ದಿನಾಚರಣೆಯನ್ನು ವಿಶ್ವ ಮಾನವ ದಿನಾಚರಣೆ ಎಂದು ಸರ್ಕಾರದಿಂದ ಆಚರಿಸಲಾಗುತ್ತಿದೆ.
ಉಪನ್ಯಾಸಕರಾಗಿ ಭಾಗವಹಿಸಿದ ಸವಣೂರು ಮೊರಾರ್ಜಿ ದೇಸಾಯಿ ಸವತಿ ಶಾಲೆ ಪ್ರಾಚಾರ್ಯರಾದ ಮಂಜುನಾಥ ಮರಿತಮ್ಮನವರ ಅವರು ಕುವೆಂಪುರವರ ವಿಚಾರಧಾರೆಗಳ ಕುರಿತು ಸವಿಸ್ತಾರವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ.ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ನಗರಸಭೆ ಅಧ್ಯಕ್ಷೆ ಪಾರ್ವತೆಮ್ಮ ಹಲಗಣ್ಣನವರ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಸಂಜೀವಕುಮಾರ ನೀರಲಗಿ, ತಹಶೀಲ್ದಾರ ಜಗದೀಶ ಮಜ್ಜಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಎಂ.ಎನ್.ಮಾಳಗೇರ, ಸಾಹಿತಿ ಸತೀಶ ಕುಲಕರ್ಣಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಅಶೋಕ ಹಳ್ಳಿಯವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಕೆ.ನಾಗರಾಜ ಅವರು ಸ್ವಾಗತಿಸಿದರು. ವಸಂತಕುಮಾರ ಕಡತಿ ವಂದಿಸಿದರು.

loading...