ಕೊಲೆಗೆ ಕೊಲೆಯಿಂದಲೇ ಉತ್ತರ ನೀಡಿ: ವಿವಾದಾತ್ಮಕ ಹೇಳಿಕೆ ನೀಡಿದ ಎಡಕೆ

0
30
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:17 ಹಿಂದೂಗಳ ಕೊಲೆಗೆ ಪ್ರತಿರೋಧವಾಗಿ ಕೊಲೆಯನ್ನೆ ಉತ್ತರವಾಗಿ ನೀಡಬೇಕೆಂದು ಆರ್ ಎಸ್ ಎಸ್ ಮುಖಂಡ ರಾಮಚಂದ್ರ ಎಡಕೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅವರು ರವಿವಾರ ನಗರದಲ್ಲಿ ಹೊನ್ನಾವರದ ಹಿಂದೂ ಯುವಕ ಪರೇಶ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ್ ದಳ, ಬಿಜೆಪಿ ಕಾರ್ಯಕರ್ತರು ಆಯೋಜಿಸಲಾದ ಬೃಹತ್ ಪ್ರತಿಭಟನೆ ನಡೆಸಿ ಚನ್ನಮ್ಮ‌ವೃತ್ತದಲ್ಲಿ ಮಾತನಾಡುತ್ತ, ರಾಜ್ಯದಲ್ಲಿ ಹಿಂದೂಗಳ ಹತ್ಯೆ ಮುಂದೊರೆದಿದೆ. ಹಿಂದೂಗಳು ಹೋರಾಟ ಸತ್ಯಾಗ್ರಹ ನಿಲ್ಲಿಸೋಣಾ.. ಹಿಂದೂಗಳ ಕೊಲೆಗೆ ಕೊಲೆಯೆ ಉತ್ತರವಾಗಿ ನೀಡಲು ಸಿದ್ದರಾಗುವಂತೆ ಕರೆ ನೀಡಿದ್ರು. ಜತೆಗೆ ಪರೇಶ್ ಸಾವಿಗೆ ಸಚಿವ ದೇಶಪಾಂಡೆ ಲಕ್ಷ ರುಪಾಯಿ ಬೆಲೆ ಕಟ್ಟಿದ್ದಾರೆ. ನಿಮ್ಮ ಮಗ ಸತ್ತರೆ ಒಂದು ಲಕ್ಷ  ಹಣ ತೆಗೆದುಕೊಳ್ಳುತ್ತಿದ್ದಿರಾ ಎಂದು ಕಿಡಿಕಾರಿದರು.
ಶಾಸಕ ಸಂಜಯ ಪಾಟೀಲ ಮಾತನಾಡಿ, ಇನ್ನು ಮಲಗಿರುವ ಹಿಂದೂಗಳನ್ನ ಎಬ್ಬಿಸುವ ಕೆಲಸವಾಗಿದೆ. ಹಿಂದೂಗಳು ಎಚ್ಚರಾದರೆ ಶತ್ರುಗಳು ಮಗುವುದನ್ನ ಬಿಡ್ತಾರೆ. ನಾವು ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಪಕ್ಷದವರು ಎಂದು ಸಿಎಂ ಸಿದ್ದರಾಮಯ್ಯನವರಿಗೆ ಎಚ್ಚರಿಕೆ ನೀಡಿದರು.
ಬೆಳಗ್ಗೆ ನಗರದ ಧರ್ಮವೀರ ಸಂಭಾಜಿ ವೃತ್ತದಲ್ಲಿ ಪ್ರತಿಭಟನಾ ಮಾರ್ಗದ ವಿಚಾರವಾಗಿ ಪೊಲೀಸ್ ಅಧಿಕಾರಿಗಳು ಮತ್ತು ಪ್ರತಿಭಟನಾಕಾರರ ಮಧ್ಯೆ ವಾಗ್ವಾದ ನಡೆಯಿತು. ಪೊಲೀಸರು ಸೂಚಿಸಿದ ಮಾರ್ಗವನ್ನ ಧಿಕ್ಕರಿಸಿ ಹಿಂದೂ ಕಾರ್ಯಕರ್ತರು ಪೂರ್ಣ ನಿಯೋಜಿತ ಮಾರ್ಗದಲ್ಲಿ ರ್ಯಾಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪ್ರತಿಭಟನಾ ರ್ಯಾಲಿ ಸಾಗಿ ಬಂದ್ ಮಾರ್ಗದುದ್ದಕ್ಕೂ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಬೀಗಿ ಪೊಲೀಸ್ ಸರ್ಪಗಾವಲಿನಲ್ಲಿ ಪ್ರತಿಭಟನಾ ರ್ಯಾಲಿ ನಡೆಯಿತು.
ಒಟ್ಟಾರೆಯಾಗಿ ಪರೇಶ್ ಸೇರಿ ಹಿಂದೂಗಳ ಹತ್ಯೆಯನ್ನ ಖಂಡಿಸಿ ಬಿಜೆಪಿಯ ನಾಯಕರ ನೇತೃತ್ವದಲ್ಲಿ ಕೇಸರಿ ಸೇನೆ ಕುಂದಾನಗರಿಯಲ್ಲಿ ರಸ್ತೆಗಿಳಿದು ಆಕ್ರೋಶ ವ್ಯಕ್ತಪಡಿಸಿತು. ಎಲ್ಲ ಹಿಂದೂಗಳ ಹತ್ಯೆಯನ್ನ ಸಿಬಿಐ ಒಪ್ಪಿಸುವ ಮೂಲಕ ಹಂತಕರಿಗೆ ಶಿಕ್ಷೆ ಆಗುವಂತೆ ಕ್ರಮವಹಿಸಬೇಕೆಂದು ಆಗ್ರಹಿಸಿದ್ರು.

loading...