ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಹಗಲಿರಲು ಶ್ರಮಿಸುವೆ: ಪಿ.ರಾಜೀವ್‌

0
25
loading...

ಹಾರೂಗೇರಿ 10: ದೇಶಕ್ಕೆ ಸ್ವಾತಂತ್ರ ಬಂದು ಏಳು ದಶಕಗಳಾದರೂ ಗ್ರಾಮೀಣ ಭಾಗದ ರಸ್ತೆಗಳು ಇನ್ನು ಅಭಿವೃದ್ಧಿಯನ್ನೇ ಕಂಡಿಲ್ಲಾ, ಗ್ರಾಮಗಳು ಅಭಿವೃದ್ಧಿಯಾಗಿ ದೇಶದ ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ಉತ್ತಮ ರಸ್ತೆಗಳ ನಿರ್ಮಾಣ ಅತ್ಯವಶ್ಯವಾಗಿದೆ, ಆ ನಿಟ್ಟಿನಲ್ಲಿ ಜನಪ್ರತಿನಿಧಿಯಾದವರು ಕ್ಷೇತ್ರದ ಅಭಿವೃದ್ಧಿಗೆ ಹಗಲಿರಲು ಶ್ರಮಿಸಬೇಕೆಂದು ಕುಡಚಿ ಶಾಸಕ ಪಿ.ರಾಜೀವ್‌ ಹೇಳಿದರು. ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ನಬಾರ್ಡ ಯೋಜನೆಯಡಿ ಗಡ್ಡೆ ರಸ್ತೆ ಸುಧಾರಣೆಗೆ ಅಂದಾಜುಮೊತ್ತ ಮೊತ್ತ 50 ಲಕ್ಷ ರೂದಡಿ 0.2 ಕೀಮಿವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುದ್ಧಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು ಕೇವಲ ಚುನಾವಣೆ ಬಂದಾಗ ಮಾತ್ರ ಕ್ಷೇತ್ರದ ಸಮಸ್ಯೆಗಳತ್ತ ಕಣ್ತೆರೆಯದೇ ಪ್ರತಿನಿತ್ಯ ಜನರ ಪ್ರತಿಯೊಂದು ಸಮಸ್ಯೆಗಳಿಗೆ ಸ್ಫಂದಿಸುವವನೇ ನಿಜವಾದ ಜನನಾಯಕನಾಗಲು ಸಾಧ್ಯ, ಕ್ಷೇತ್ರದ ಪ್ರತಿ ಸಮಸ್ಯೆಗಳನ್ನು ಬಗೆಹರಿಸುವುದು ಜನಪ್ರತಿನಿಧಿಯ ಕರ್ತವ್ಯವಾಗಿದ್ದು, ಕಳೆದ ನಾಲಕುವರೆ ವರ್ಷ ಕ್ಷೇತ್ರದ ಒರ್ವ ಶಾಸಕನಾಗಿ ಕ್ಷೇತ್ರದ ಹಾಗೂ ಬಡವರ ಅಭಿವೃದ್ಧಿಗೆ ಪ್ರಮಾಣಿಕವಾಗಿ ಸೇವೆ ಮಾಡಿದ ತೃಪ್ತಿ ನನಗಿದೆ ಎಂದು ಶಾಸಕ ಪಿ.ರಾಜೀವ್‌ ತಿಳಿಸಿದರು. ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಕಿರಿಯ ಇಂಜೀನಿಯರ ಸಜ್ಜನ, ಮೈಶಾಲೆ, ಕೆಲಸ ನಿರಿಕ್ಷಕ ಎ.ಬಿ ಸೊಂದಕರ, ಮಹೇಶ ಗುಡೋಡಗಿ, ಚಿದಾನಂದ ಕೋಳಿ, ಖಹೀಮ ಪಠಾಯಿತ, ಮೈದ್ಧಿನ್‌ಸಾಯ ವಾಠೆ, ಕುರಾಬುದ್ಧಿನ್‌ ಜಿನ್ನಾಬಡೆ, ಸುರಾಬುದ್ಧಿನ್‌ ಜಿನ್ನಾಬಡೆ, ಹಣಮಂತ ಕುರಿ, ಸಹದೇವ ಲಾಳಿ, ಸುಲ್ತಾನ ವಾಠೆ, ಆಸಿರ್ಫ ಪಠಾಯಿತ, ಮಲ್ಲು ಬಾಲೋಜಿ, ಶ್ಯಾಮು ನಾಯಕ, ಸರ್ಪರಾಜ ಕರೀಮಖಾನ, ಶ್ರೀಧರ ಕಂತ್ರಾಟೆ, ಆನಂದ ಸಣ್ಣಕ್ಕಿ, ನಾಮದೇವ ಮದಲೆ, ಹುಸೇನಬಾ ಚಮನಶೇಖ, ನಾನಾ ನಸರದಿ, ಸಂಜು ಗಸ್ತಿ, ಜೌರ ಜಿನ್ನಾಬಡೆ, ಆಶೀಫ್‌ ಸಜ್ಜನ್‌, ಮದ್ಧುಲಾಲ ಜಿನ್ನಾಬಡೆ, ಫರಾಜ್‌ ಬಾಗೆ, ಮೌಲಾಲಿ ವಾಟೆ, ಓಮಣ್ಣ ಲೋಹಾರ, ಮೋಹನ ಲೋಹಾರ, ದತ್ತು ಸಣ್ಣಕ್ಕಿ, ಅಣ್ಣಪ್ಪ ಸುತಾರ, ಬಾಳು ತಳವಾರ, ದೇವಪ್ಪಾ ಚೌಗಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...