ಕ್ಷೇತ್ರದ ಸಂಪೂರ್ಣ ನೀರಾವರಿಗೆ ಪಣ: ದುರ್ಯೋಧನ ಐಹೊಳೆ

0
31
loading...

ರಾಯಬಾಗ 22: ಮತಕ್ಷೇತ್ರದಲ್ಲಿ ಸಾಕಷ್ಟು ಅನುದಾನವನ್ನು ತಂದು ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಅನುದಾನವನ್ನು ತಂದು ಈ ಭಾಗವನ್ನು ಸಂಪೂರ್ಣ ನೀರಾವರಿಯನ್ನಾಗಿ ಮಾಡಲಾಗುವುದು ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.

ತಾಲೂಕಿನ ನಿಪನಾಳ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ಟಿಎಸ್‍ಪಿ ಯೋಜನೆಯಡಿ ಮಂಜೂರಾದ 17.56 ಲಕ್ಷ ರೂ. ವೆಚ್ಚದಲ್ಲಿ ನಿಪನಾಳ ಗ್ರಾಮ ನಂದಿ ತೋಟದ ಹತ್ತಿರ ನಿಪನಾಳ ಗ್ರಾಮದಿಂದ-ತುಕ್ಕಾನಟ್ಟಿ ರಸ್ತೆ ವರೆಗೆ ಹಾಗೂ ಎಸ್‍ಸಿಪಿ ಯೋಜನೆಯಡಿ ಮಂಜೂರಾದ 15 ಲಕ್ಷ ರೂ. ವೆಚ್ಚದಲ್ಲಿ ನಿಪನಾಳ ಮುಖ್ಯ ಕೆನಾಲ ಸರ್ವಿಸ್ ರಸ್ತೆಯಿಂದ ಅಬ್ಬನಗೋಳ ತೋಟದ ವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾ.ಪಂ.ಉಪಾಧ್ಯಕ್ಷ ರಾಜು ಹಳಬರ, ನ್ಯಾಯವಾದಿ ಎಲ್.ಆರ್.ಪಡತರೆ, ಅಪ್ಪಾಸಾಬ ಬ್ಯಾಕೂಡೆ, ಮಾಳಪ್ಪ ಅಬ್ಬನ್ನವರ, ರಾಮಣ್ಣ ನಂದಿ, ನಿಂಗಪ್ಪ ಅಬ್ಬನಗೋಳ, ಯಮನಪ್ಪ ಗುಡೆನ್ನವರ, ಸಂಜು ಕುರಣೆ, ಮಾರುತಿ ನಂದಿ, ಗೋವಿಂದ ನಾಯಿಕ, ಸತ್ಯಪ್ಪ ನಂದಿ, ಲಕ್ಷ್ಮಣ ಅಬ್ಬನಗೋಳ, ಬಾಳೇಶ ಕುರಬೆಟ್ಟ, ಶಂಕರ ಕುರಬೇಟ್ಟ, ಲಕ್ಷ್ಮಣ ಕುರಣೆ, ಲೋಕೋಪಯೋಗಿ ಇಲಾಖೆ ಇಂಜನೀಯರುಗಳಾದ ಬಿ.ಬಿ.ಬೇಡಕಿಹಾಳೆ, ಆರ್.ಬಿ.ಮನವಡ್ಡರ, ಎಮ್.ಜಿ.ಉಪ್ಪಾರ ಸೇರಿದಂತೆ ಅನೇಕರು ಇದ್ದರು

loading...