ಗಡಿನಾಡು ಕಾರದಗಾದಲ್ಲಿ 2ನೇ ಕನ್ನಡ ಸಮಾವೇಶ

0
25
loading...

ಶಿವಾನಂದ ಪದ್ಮಣ್ಣವರ
ಚಿಕ್ಕೋಡಿ 22: ಗಡಿಯಲ್ಲಿ ಕನ್ನಡ ನಾಡು-ನುಡಿ ಬೆಳೆಸುವ ಉದ್ದೇಶದಿಂದ ಚಿಕ್ಕೋಡಿ ತಾಲೂಕಿನ ಪುಟ್ಟ ಹಳ್ಳಿ ಕಾರದಗಾ ಗ್ರಾಮದಲ್ಲಿ ಕನ್ನಡ ಬಳಗ ಸತತ ಎರಡನೇ ಬಾರಿಗೆ ಕನ್ನಡ ಸಮಾವೇಶವನ್ನು ಡಿ.24ರಂದು ಹಮ್ಮಿಕೊಂಡಿದೆ.

ಕನ್ನಡ ಬಳಗದ ವತಿಯಿಂದ ಕಾರದಗಾ ಗ್ರಾಮದ ಗ್ರಾಮದ ಡಿ.ಎಸ್.ನಾಡಗೆ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಆವರಣದಲ್ಲಿ ಜರುಗಲಿರುವ 2ನೇ ಕನ್ನಡ ಸಮಾವೇಶದ ಸರ್ವಾಧ್ಯಕ್ಷರಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು, ಖ್ಯಾತ ಚಿತ್ರನಟ ಮುಖ್ಯಮಂತ್ರಿ ಚಂದ್ರು ಆಯ್ಕೆಯಾಗಿದ್ದು, ಕಳೆದ ಬಾರಿ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಸರ್ವಾಧ್ಯಕ್ಷರಾಗಿ ಕನ್ನಡದ ಕಂಪು ಸೂಸಿದ್ದರು.
ಸರಕಾರದ ನೆರವಿಲ್ಲದೇ ಸಾಹಿತಿ ಹಾಗೂ ಬುದ್ಧಿಜೀವಿಗಳ ಸಲಹೆ ಪಡೆದು ಕನ್ನಡದ ಜೀವಿಗಳೇ ಸಂಘಟಿಸಿರುವ ಈ ಸಮಾವೇಶವನ್ನು ಕನ್ನಡದ ಜಾತ್ರೆಯಾಗಿ ಗ್ರಾಮದ ಜನ ಆಚರಿಸಲು ಮುಂದಾಗಿದ್ದಾರೆ. ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಆಸ್ತಕಿ ತೋರುತ್ತಲಿರುವ ರಾಜು ಕಿಚಡೆ ಅವರೊಂದಿಗೆ ಸಮ್ಮೇಳನ ಸಮಿತಿ ಅಧ್ಯಕ್ಷ ವಿರೇಂದ್ರ ಖೋತ, ಸೋಮರಾಯಾ ಗಾವಡೆ, ಕಿರಣ ಸದಲಗೆ, ಬಾಬಾಸೋ ಅರಭಾವಿ ಸೇರಿದಂತೆ ಅನೇಕ ಕನ್ನಡಾಭಿಮಾನಿಗಳು ಹುಮ್ಮಸ್ಸಿನಿಂದ ಕೆಲಸ ಕಾರ್ಯಗಳಲ್ಲಿ ತೊಡಗುವ ಮೂಲಕ ಕಳೆದ ಬಾರಿಗಿಂತಲೂ ಹೆಚ್ಚಿನ ಯಶಸ್ಸು ಕಂಡುಕೊಳ್ಳಲು ಮುಂದಾಗಿದ್ದಾರೆ.

ಗಡಿನಾಡಲ್ಲಿ ಕನ್ನಡ ಜೀವಿಗಳು ಒಗ್ಗೂಡಿ ನಡೆಸುತ್ತಿರುವ ಸಮಾವೇಶ ಕಾರದಗಾ ಗ್ರಾಮದ ಜನರಿಗೆ ಹಬ್ಬದ ವಾತಾವರಣ ಸೃಷ್ಟಿಸುವ ಮೂಲಕ ಕನ್ನಡದ ಕಲರವಕ್ಕೆ ಸಾಕ್ಷಿಯಾಗಿದ್ದಾರೆ.

ಡಿ. 24 ರಂದು ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ, ಭುವನೇಶ್ವರಿ ಪೂಜೆ ಹಾಗೂ ಗ್ರಂಥಗಳ ಮೆರವಣಿಗೆ, ಜನಪದ ಕಲಾ ತಂಡಗಳ ಪ್ರದರ್ಶನ ನಡೆಯಲಿದೆ. ಗ್ರಾ.ಪಂ.ಉಪಾಧ್ಯಕ್ಷ ಭರತ ಬಾಗಾಜಿ ಧ್ವಜಾರೋಹಣ ನೆರವೇರಿಸುವರು. ನಾರಾಯಣ ಜಾಧವ ಭುವನೇಶ್ವರಿ ಪೂಜೆ ನೆರವೇರಿಸುವರು. ಕುಂಭ ಮೇಳಕ್ಕೆ ಅಪ್ಪಾಸಾಬ ಪೂಜೇರಿ ಮತ್ತು ಕಲಾ ತಂಡಗಳ ಪ್ರದರ್ಶನಕ್ಕೆ ಪ್ರಮೋದ ಜಾಧವ, ನಿತೀಶ ಖೋತ ಗ್ರಂಥ ಪೂಜೆ ಹಾಗೂ ಪ್ರಕಾಶ ಧನಗರ ಮೆರವಣಿಗೆಗೆ ಚಾಲನೆ ನೀಡುವರು. ಜೀತೇಂದ್ರ ಖೋತ ವೇದಿಕೆ ಉದ್ಘಾಟಿಸುವರು.
ಸಮಾವೇಶದ ಉದ್ಘಾಟನೆ

ಡಿ.24 ರಂದು ಬೆಳಗ್ಗೆ 10-30ಕ್ಕೆ ಸಮಾವೇಶದ ಉದ್ಘಾಟನೆ ನೆರವೇರಲಿದೆ. ಚಿಂಚಣಿಯ ಅಲ್ಲಮಪ್ರಭು ಮಹಾಸ್ವಾಮಿಗಳು, ಕವಲಗುಡ್ಡದ ಸಿದ್ದಯೋಗಿ ಅಮರೇಶ್ವರ ಮಹಾಸ್ವಾಮಿಗಳು, ಚಿಕ್ಕೋಡಿಯ ಸಂಪಾದನಾ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಸಮ್ಮೇಳನಕ್ಕೆ ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಎಸ್ಪಿ ಡಾ. ಬಿ.ಆರ್.ರವಿಕಾಂತೇಗೌಡಾ, ಗ್ರಾ.ಪಂ.ಅಧ್ಯಕ್ಷೆ ಶಿವುಬಾಯಿ ಗಾವಡೆ, ಶಾಸಕರಾದ ಗಣೇಶ ಹುಕ್ಕೇರಿ, ಮಹಾಂತೇಶ ಕವಟಗಿಮಠ, ಮಾಜಿ ಶಾಸಕರಾದ ವಿರಕುಮಾರ ಪಾಟೀಲ, ಕಾಕಾಸಾಹೇಬ ಪಾಟೀಲ, ಗಣಪತರಾವ ಪಾಟೀಲ, ಸ್ವರೂಪ ಮಹಾಡಿಕ, ಲಕ್ಷ್ಮಣರಾವ ಚಿಂಗಳೆ, ಅಣ್ಣಾಸಾಬ ಹವಲೆ, ಪ್ರದೀಪ ಜಾಧವ, ಪವನ ಪಾಟೀಲ, ಬಿ.ಎ.ಪೂಜಾರಿ, ಡಾ. ದಯಾನಂದ ನೂಲಿ, ಸುಮಿತ್ರಾ ಉಗಳೆ, ದಾದಾಸೋ ನರಗಟ್ಟಿ, ಎ.ಎಸ್,ಬುರ್ಗೆ, ಆರ್.ಆರ್.ಪಾಟೀಲ, ಪ್ರಕಾಶ ಬಾಗಾಯಿ, ಸದಾಶಿವ ಹುಕ್ಕೇರಿ ಆಗಮಿಸುವರು. ಆಗಮಿಸುವರು. ಇದೇ ಸಂದರ್ಭದಲ್ಲಿ ಸಂಸದ ಪ್ರಕಾಶ ಹುಕ್ಕೇರಿ, ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಶಾಸಕ ಸುಭಾಷ ಜೋಶಿ, ಡಾ. ಅಭಿನಂದನ ಮುರಾಬಟ್ಟೆ, ರಣಜೀತ ಸಂಗ್ರೋಳಿಯವರ ಸತ್ಕಾರ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ವಿಚಾರಗೋಷ್ಠಿ

ಮಧ್ಯಾಹ್ನ 1-30ಕ್ಕೆ ಜನಪದ ಸಾಹಿತ್ಯದಲ್ಲಿ ತಾಯಿ-ತವರು ಕುರಿತು ಬೆಳಗಾವಿ ಲಿಂಗರಾಜ ಕಾಲೇಜಿನ ಪ್ರಾಧ್ಯಾಪಕಿ ಡಾ. ಗುರುದೇವಿ ಹುಲೆಪ್ಪನವರಮಠ, ಕನ್ನಡ ಸಂಸ್ಕøತಿ ಹಿರಿಮೆ ಕುರಿತು ಡಾ.ಎಂ.ವೈ.ಯಾಕೋಳ್ಳಿ ಉಪನ್ಯಾಸ ನೀಡುವರು. ತಾಲೂಕಾ ಕಸಾಪ ಅಧ್ಯಕ್ಷ ಶ್ರೀಪಾದ ಕುಂಬಾರ ಅಧ್ಯಕ್ಷತೆ ವಹಿಸುವರು. ಪ್ರಭಾಕರ ಖೋತ ಗೋಷ್ಠಿಗೆ ಚಾಲನೆ ನೀಡುವರು. ಅತಿಥಿಗಳಾಗಿ ಮಹಾವೀರ ಪಾಟೀಲ, ಅಶೋಕ ಕಿಲ್ಲೇದಾರ, ಸೋಮರಾಯ ಗಾವಡೆ ಆಗಮಿಸುವರು.
ಕವಿಗೋಷ್ಠಿ

ಮಧ್ಯಾಹ್ನ 3-30ಕ್ಕೆ ಡಾ. ನೀಲಗಂಗಾ ಚರಂತಿಮಠ ಅಧ್ಯಕ್ಷತೆ ವಹಿಸುವರು. ಗೋಷ್ಠಿಗೆ ಹಮೀದಾಬೇಗಂ ದೇಸಾಯಿ ಚಾಲನೆ ನೀಡುವರು. ಅತಿಥಿಗಳಾಗಿ ವಿರೇಶ ಪಾಟೀಲ, ಹಜರತಲಿ ದೇಗಿನಾಳ, ರಾಜೇಂದ್ರ ಖೋತ, ಜೆ.ಬಿ.ಜನವಾಡ, ಮಹಾದೇವಿ ಖೋತ ಆಗಮಿಸುವರು. ಹಲವು ಕವಿಗಳು ಭಾಗವಹಿಸುವರು ಎಂದು ಹೇಳಿದರು.
ಸಂಜೆ 5 ಗಂಟೆಗೆ ಸಮಾರೇಪ ಸಮಾರಂಭ ನಡೆಯಲಿದೆ. ಸಾನಿಧ್ಯವನ್ನು ಚಿಂಚಣಿಯ ಅಲ್ಲಮಪ್ರಭು ಮಹಾಸ್ವಾಮಿಗಳು, ಕವಲಗುಡ್ಡದ ಸಿದ್ದಯೋಗಿ ಅಮರೇಶ್ವರ ಮಹಾಸ್ವಾಮಿಗಳು, ಚಿಕ್ಕೋಡಿ ಸಂಪಾದನಾ ಮಹಾಸ್ವಾಮಿಗಳು, ಈಶ್ವರಿ ವಿದ್ಯಾಲಯದ ಶಾಂತಾ ಅಕ್ಕನವರು ವಹಿಸುವರು. ಖ್ಯಾತ ಚಲನಚಿತ್ರ ನಟ ಮತ್ತು ಸಮ್ಮೇಳನದ ಸರ್ವಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರಿಂದ ಸಮಾರೋಪ ನುಡಿ, ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ಎಸಿ ಗೀತಾ ಕೌಲಗಿ, ತಹಸೀಲ್ದಾರ ಸಿ.ಎಸ್.ಕುಲಕರ್ಣಿ, ಡಿಡಿಪಿಯು ಪಿ.ಕೆ.ಅದ್ದುಕೆ, ಡಿಡಿಪಿಐ ರಾಜೀವ ನಾಯಿಕ, ಬಿಇಓ ವಿ.ಕೆ.ಸನಮುರಿ, ಸಾಹಿತಿ ಎಸ್.ವೈ.ಹಂಜಿ, ಡಾ. ಪಿ.ಜಿ.ಕೆಂಪಣ್ಣವರ, ಎಂ.ಎ.ಘೋಸರವಾಡೆ, ರಮೇಶ ತವನಕ್ಕೆ, ಸಂಗೀತಾ ಖುಬ್ಬನವರ, ಸಂಜಯ ಗಾವಡೆ ಆಗಮಿಸುವರು.

ಸಾಂಸ್ಕøತಿಕ ಸಂಜೆ
ಸಂಜೆ 6-30ಕ್ಕೆ ಸಾಂಸ್ಕøತಿಕ ಸಂಜೆ ಕಾರ್ಯಕ್ರಮ ಜರುಗಲಿದೆ. ಸುಭಾಸ ಠಕಾಣೆ ಮತ್ತು ಇಲಾಯಿ ಅತ್ತಾರ ಕಾರ್ಯಕ್ರಮ ಉದ್ಘಾಟಿಸುವರು. ಹಳ್ಳಿ ಮೇಸ್ಟ್ರು ಚಿತ್ರದ ಹಾಸ್ಯನಟ ಪಕೀರಪ್ಪಾ ದೊಡಮನಿ, ಎಸ್.ಆರ್.ಡೊಂಗರೆ, ಸಂಗೀತ ಕಲಾವಿದ ಸುಭಾಷ ಸಂಕಪಾಳ, ಮಲ್ಲಿಕಾರ್ಜುನ ಬಳ್ಳೋಳಿ ಅವರಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ

 

loading...