ಪ್ರಗತಿಪರ ಮುಸ್ಲಿಂ ಸಂಘಟನೆಗಳ ಮನವಿ

0
23
loading...

ಗದಗ, ಡಿ. 15 : ಲವ್ ಜಿಹಾದ್ ಹೆಸರಿನಲ್ಲಿ ರಾಜಸ್ಥಾನ ರಾಜ್ಯದ ರಾಜ್‍ಸಮಂದ ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯ ಮೊಹ್ಮದ್ ಅಪ್ರಾಜುಲ್ ಎಂಬಾತನನ್ನು ಪೈಶಾಚಿಕವಾಗಿ ಕೊಲೆಗೈದಿರುವ ಕ್ರಮವನ್ನು ಹಾಗೂ ಶಿರ್ಶಿಯಲ್ಲಿ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ-ಅನ್ಯಾಯವೆಸಗುತ್ತಿರುವ ಕ್ರಮವನ್ನು ಗದುಗಿನ ಪ್ರಗತಿಪರ ಮುಸ್ಲಿಂ ಸಂಘಟನೆಗಳು ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಗದಗ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದಾರೆ.
ಪಶ್ಚಿಮ ಬಂಗಾಲದ ನಿವಾಸಿಯಾದ ಮಹಮ್ಮದ ಅಪ್ರಾಜುಲ್ ಇತನು ಕೂಲಿ ಕೆಲಸಕ್ಕಾಗಿ ರಾಜಸ್ಥಾನ ರಾಜ್ಯದ ರಾಜ್‍ಸಮಂದ್ ಜಿಲ್ಲೆಯಲ್ಲಿ ದಿನಗೂಲಿ ಕೆಲಸ ಮಾಡುತ್ತಿರುವನ ಮೇಲೆ ‘ಲವ್ ಜಿಹಾದ್’ ಎಂಬ ಹಣೆಪಟ್ಟಿಯನ್ನು ಕಟ್ಟಿ ಅದೇ ಜಿಲ್ಲೆಯವನಾದ ಶಂಬುಲಾಲ್ ಎಂಬಾತನು ಕೊಲೆ ಮಾಡುವ ಉದ್ದೇಶದಿಂದ ಮೊಹಮ್ಮದ ಅಪ್ರಾಜುಲ್‍ನನ್ನು ಮಚ್ಚಿನಿಂದ ಕೊಚ್ಚಿ ಜೀವ ಮರಣ ಸಮಯದಲ್ಲಿ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಕೊಲೆಗೈದು ಸನ್ನಿವೇಶವನ್ನು ವ್ಹಿಡಿಯೋ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಅಲ್ಪಸಂಖ್ಯಾತ ಜನಾಂಗದವರಿಗೆ ಎಚ್ಚರಿಗೆ ನೀಡಿರುತ್ತಾನೆ.
ಬಹುಸಂಸ್ಕøತಿ ಹಾಗೂ ಜಾತ್ಯಾತೀತ ರಾಷ್ಟ್ರವಾಗಿರುವ ಭಾರತದಲ್ಲಿ ಈ ಘಟನೆಯು ದೇಶದಲ್ಲಿಯೇ ಪೈಶಾಚಿಕ ಕೃತ್ಯವಾಗಿರುತ್ತದೆ. ಇದು ದೇಶದಲ್ಲಿ ಮತ್ತು ರಾಜ್ಯದಲ್ಲಿ ಹಿಂದೂ-ಮುಸ್ಲಿಂ ಬಾಂಧವ್ಯವನ್ನು ಬೇರ್ಪಡಿಸುವ ಉದ್ದೇಶ ಹೊಂದಿರುತ್ತದೆ. ಪ್ರಜಾಪ್ರಭುತ್ವದಲ್ಲಿ ಇಂತಹ ಘಟನೆ ನಡೆದಿರುವುದು, ನಿಜಕ್ಕೂ ಅಮಾನವೀಯ ಮತ್ತು ಹೇಯ ಕೃತ್ಯವಾಗಿದೆ.
ಪ್ರಗತಿಪರ ಮುಸ್ಲಿಂ ಸಂಘಟನೆಯಾದ ನಾಗರಿಕ ಹಕ್ಕು ಸಂರಕ್ಷಣಾ ಸಂಘಟನೆ ಗದಗ ಘಟಕ ಅಧ್ಯಕ್ಷ ರಾಜ ಮುನ್ನಾ ಕಲ್ಮನಿ, ಕಾರ್ಯದರ್ಶಿ ಮುಸ್ತಫಾ ಶಿರಹಟ್ಟಿ, ಡಬ್ಲೂ.ಪಿ.ಐ ಧುರೀಣ ಜುನೇದ್ ಅಹ್ಮದ ಉಮಚಗಿ, ಸೋಲಿಡಾರಿಟಿ ಯುಥ್ಸ್ ಮೂವ್‍ಮೆಂಟ್ ಗದಗ ಕಾರ್ಯದರ್ಶಿ ಮುಹಮ್ಮದ ಯುಸೂಫ ಮುಲ್ಲಾ, ರಿಯಾಜ್ ಅಹ್ಮದ ಶೇಖ್, ಜಶೀಮ್ ಖಾಜಿ, ತಾಜುದ್ದಿನ್ ಖಾಜಿ ಮುಂತಾದವರು ಮನವಿ ಅರ್ಪಣೆಯ ಸಂದರ್ಭದಲ್ಲಿದ್ದರು.

loading...