ಗುಜರಾತನಲ್ಲಿ‌ ಮೋದಿ ಹವಾ… ಬೆಳಗಾವಿಯಲ್ಲಿ ಬಿಜೆಪಿ ಸಂಭ್ರಮದ ಅಲೆ

0
40
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:18 ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ ಷಾ ನೇತೃತ್ವದಲ್ಲಿ ಗುಜರಾತ ಮತ್ತು ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ವಿಜಯ ಸಾಧಿಸಿದೆ ಎಂದು ನಗರ ಜಿಲ್ಲಾಧ್ಯಕ್ಷ ರಾಜೇಂದ್ರ ಹರಕುಣಿ ಹೇಳಿದರು.
ಸೋಮವಾರ ನಗರದ ಚನ್ನಮ್ಮ ವೃತ್ತದಲ್ಲಿ ಗುಜರಾತ ಹಾಗೂ ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಸಾಧಿಸಿದ ಹಿನ್ನಲೆಯಲ್ಲಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿ‌ ಮಾತನಾಡಿ, ಗುಜರಾತ ಹಾಗೂ ಹಿಮಾಚಲ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ ಷಾ ಜೋಡಿ ಕಮಾಲ ಮಾಡಿದೆ. ಅದೇ ರೀತಿ ಕರ್ನಾಟಕದಲ್ಲಿನ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತಮಾಡಿ ಯಡಿಯೂರಪ್ಪನವರನ್ನು ಸಿಎಂ ಮಾಡುವುದೇ ನಮ್ಮ ಗುರಿ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ರಾಜಕುಮಾರ ಟೋಪಣ್ಣವರ, ದೀಪಕ ಜಮಖಂಡಿ, ಗೂಳಪ್ಪ ಹೊಸಮನಿ, ಬಿಜೆಪಿ‌ ಮುಖಂಡರಾದ ಅನಿಲ ಬೆನಕೆ, ಪಾಂಡುರಂಗ ದೋತ್ರೆ, ಸದಾನಂದ ಗುಂಟೇಪ್ಪನವರ, ಲೀನಾ ಟೋಪಣ್ಣವರ, ಭಾರತಿ ಕಡೇಮನಿ,ದೀಪಾ ಕುಡುಚಿ, ರೇಖಾ ಮುಚ್ಚಂಡಿ, ಸಾರಿಕಾ ಪಾಟೀ, ಡಾ.ಶಿಲ್ಪಾ ಕೇಕರೆ, ಸವಿತಾ ಕರಡಿ, ಪ್ರಜ್ಞಾ ಶಿಂಧೆ ಸೇರಿದಂತೆ ಮೊದಲಾದವರು ಹಾಜರಿದ್ದರು.

loading...