ಗುಡಿಸಲು ಮುಕ್ತ ಮತಕ್ಷೇತ್ರ ನಿರ್ಮಾಣಕ್ಕೆ ಪಣ: ಪ್ರಕಾಶ ಹುಕ್ಕೇರಿ

0
13
loading...

ಚಿಕ್ಕೋಡಿ 18: ಗ್ರಾಮೀಣ ಪ್ರದೇಶಗಳಲ್ಲಿ ಗುಡಿಸಲುಗಳಲ್ಲಿ ವಾಸವಾಗಿರುವ ಪ್ರತಿಯೊಂದು ಕುಟುಂಬಕ್ಕೂ ಪಕ್ಷಾತೀತವಾಗಿ ಮನೆ ಹಂಚಿಕೆ ಮೂಲಕ ಚಿಕ್ಕೋಡಿ-ಸದಲಗಾ ಮತಕ್ಷೇತ್ರವನ್ನು ಗುಡಿಸಲು ಮುಕ್ತವನ್ನಾಗಿಸುವ ಸಂಕಲ್ಪ ಮಾಡಲಾಗಿದೆ ಎಂದು ಸಂಸದ ಪ್ರಕಾಶ ಹುಕ್ಕೇರಿ ಹೇಳಿದರು. ತಾಲೂಕಿನ ಕೋಥಳಿ ಗ್ರಾಮದಲ್ಲಿ ವಸತಿ ಯೋಜನೆಯಡಿ ಆಯ್ಕೆಯಾದ 60 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡುತ್ತ, ಸರಕಾರ ಪ್ರತಿಯೊಂದು ವಸತಿ ಯೋಜನೆ ಫಲಾನುಭವಿಯೂ ಶೌಚಾಲಯ ಹೊಂದುವುದು ಕಡ್ಡಾಯಗೊಳಿಸಿದ್ದು, ಪ್ರತಿಯೊಬ್ಬರು ಶೌಚಾಲಯ ನಿರ್ಮಿಸಿಕೊಳ್ಳಬೇಕೆಂದರು. ಅಲ್ಲದೇ ಗ್ರಾಮದ ತೋಟಪಟ್ಟಿಯಲ್ಲಿ ವಾಸವಾಗಿರುವ ಜನರಿಗೆ ನಿರಂತರ ವಿದ್ಯುತ್‌ ಪೂರೈಸುವ ಸಲುವಾಗಿ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಕ್ಷೇತ್ರದಲ್ಲಿ ನಿರಂತರ ಜ್ಯೋತಿ ಯೋಜನೆ ಜಾರಿಗೊಳಿಸಲಾಗಿದ್ದು, ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು. ಈ ಸಂದರ್ಭದಲ್ಲಿ ವಿದ್ಯಾಧರ ಕಾಗೆ, ತಾಲೂಕಾ ಪಂಚಾಯತ ಸದಸ್ಯ ಸುರೇಶ ನಸಲಾಪೂರೆ, ಗ್ರಾಮ ಪಂಚಾಯತ ಅಧ್ಯಕ್ಷೆ ಅನೀತಾ ಕುಂಬಾರ ಉಪಸ್ಥಿತರಿದ್ದರು.

loading...