ಗುಣಮಟ್ಟದ ಕಾಮಗಾರಿಗಾಗಿ ಆಗ್ರಹ

0
14
loading...

ಕನ್ನಡಮ್ಮ ಸುದ್ದಿ-ಮುಂಡಗೋಡ: 7 ವರ್ಷದಿಂದ ನಿರ್ಮಾಣವಾಗುತ್ತಿರುವ ತಾಲೂಕಿನ ನಂದಿಕಟ್ಟಾ ಗ್ರಾ.ಪಂ ವ್ಯಾಪ್ತಿಯ ಹುಲಿಹೊಂಡ ಗ್ರಾಮದ ಆಂಜನೇಯ ದೇವಾಲಯ ಕಟ್ಟಡ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ.
ಅದು ಕೂಡ ಪೂರ್ಣಗೊಳಿಸದೆ ಅರ್ದಕ್ಕೆ ನಿಲ್ಲಿಸಿ ಕಟ್ಟಡವನ್ನು ಹಾಳುಗೆಡವಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು. ಮಾಜಿ ಶಾಸಕರ ಅವಧಿಯಲ್ಲಿ 2 ಲಕ್ಷ ಹಾಗೂ ಹಾಲಿ ಶಾಸಕರಿಂದ 5 ಲಕ್ಷ ಸೇರಿದಂತೆ ಒಟ್ಟು 7 ಲಕ್ಷ ರೂಪಾಯಿ ಅನುದಾನದಲ್ಲಿ ನಡೆಯುತ್ತಿರುವ ಈ ಕಾಮಗಾರಿ ಸುಮಾರು 7 ವರ್ಷ ಕಳೆದರೂ ಪೂರ್ಣಗೊಳಿಸಲಾಗಿಲ್ಲ. ಅರ್ದಕ್ಕೆ ನಿಲ್ಲಿಸಿ ಕಟ್ಟಡವನ್ನು ಹಾಳುಗೆಡವಲಾಗಿರುವುದರಿಂದ ದೇವರು ನೆಲೆಸಬೇಕಾದ ಇಲ್ಲಿ ಬೀದಿ ನಾಯಿ, ಬಿಡಾಡಿ ದನಗಳು ವಾಸ ಮಾಡುತ್ತಿದ್ದು, ಕಟ್ಟಡ ಈಗ ಕೊಂಡವಾಡದಂತೆ ಬಾಸವಾಗುತ್ತಿದೆ. ಕಟ್ಟಡಕ್ಕೆ ಕಳಪೆ ಗುಣಮಟ್ಟದ ಇಟ್ಟಿಗೆಯನ್ನು ಬಳಸಲಾಗಿದ್ದು, ಮಳೆಗೆ ಇಟ್ಟಿಗೆಗಳೆಲ್ಲ ಕರಗಿ ಗೋಡೆಗಳಲ್ಲಿ ರಂದ್ರಗಳು ಕಾಣಿಸಿಕೊಂಡಿವೆ. ದೇವಾಲಯದ ಹೆಸರಿನಲ್ಲಿ ಲಕ್ಷಾಂತರ ಹಣ ವೆಚ್ಚ ಮಾಡಲಾಗಿದೆಯಾದರೂ ಗುಣಮಟ್ಟ ಕಟ್ಟಡ ನಿರ್ಮಾಣ ಮಾಡದೆ ಗ್ರಾಮದ ಜನರಿಗೆ ತೀವ್ರ ಮೋಸ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಗ್ರಾಮವನ್ನು ಅಭಿವೃದ್ದಿಯಿಂದ ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.
ಈ ಯೋಜನೆಗಳು ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದ್ದು, ಕಾರ್ಯಗತವಾಗಿಲ್ಲ. ಗ್ರಾಮದಲ್ಲಿ ಕುಡಿಯಲು ಸಮರ್ಪಕ ನೀರು ಸಿಗದೆ ಜನ ಪರದಾಡುವಂತಾಗಿದ್ದು, ರೈತರ ಕೃಷಿ ಭೂಮಿಯ ಬೋರವೆಲ್‌ ನಿಂದ ನೀರು ಪಡೆದು ಜೀವನ ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗ್ರಾಮಕ್ಕೆ ಪರ್ಯಾಯವಾಗಿ ಟ್ಯಾಂಕರ್‌ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ ಗ್ರಾಮಸ್ಥರು, ಕಳಪೆ ಗುಣಮಟ್ಟದಿಂದ ನಿರ್ಮಾಣವಾಗಿ ಅರ್ಧಕ್ಕೆ ನಿಂತಿರುವ ದೇವಾಲಯ ಕಟ್ಟಡ ಕಾಮಗಾರಿ ಗುಣಮಟ್ಟದ್ದಾಗಿ ಪೂರ್ಣಗೊಳಿಸಿಕೊಡಬೇಕೆಂದು ಆಗ್ರಹಿಸಿದರು. ಅಭಿವೃದ್ದಿ ಬಗ್ಗೆ ಹೆಚ್ಚಿನ ಕಾಳಜಿಹೊಂದಿರುವ ಶಾಸಕರು ಇತ್ತ ಗಮನಹರಿಸಿ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು. ದುರೀಣರಾದ ಲೋಕೇಶ ಕಬ್ಬೇರ, ಮುಸ್ತಾಕ ಹುಲಗೂರ, ಗ್ರಾಮದ ಹಿರಿಯರಾದ ನಾಗಪ್ಪ ನೀಲಿ, ರಾಜು ಸಪ್ಪಣ್ಣವರ, ಕಲ್ಲನಗೌಡ ಪಾಟೀಲ, ನಾಗಪ್ಪ ಅಲ್ಲಾಪುರ, ಉಳವಪ್ಪ ಅಲ್ಲಾಪುರ, ಪರಶುರಾಮ ಕಲಗುದ್ರಿ, ಬಸವರಾಜ ಅಂಬಿಗೇರ, ಮಂಜುನಾಥ ಗೌಡಣ್ಣವರ, ಕುಮಾರ ಬೆಸ್ತರ, ಮೌಲಾಲಿ ವಾಲಿಕಾರ, ನಾಗಪ್ಪ ತಳವಾರ, ದಾನಪ್ಪ ಕೋಟಿ, ಈಶ್ವರ ಅಲ್ಲಾಪುರ, ಹನ್ಮಂತ ಅಲ್ಲಾಪುರ, ಮಾನಪ್ಪ ಬಡಿಗೇರ, ಶಿವಾಜಿ ಬೆಸ್ತರ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

loading...