ಗೃಹಿಣಿಯರ ಆರೋಗ್ಯ ರಕ್ಷಣೆಗೆ ಪ್ರಥಮ ಆದ್ಯತೆ: ಪಿ.ರಾಜೀವ್‌ 

0
28
loading...

ಹಾರೂಗೇರಿ 30: ಪ್ರತಿಯೊಂದು ಹೆಣ್ಣು ತಮ್ಮ ಕುಟುಂಬ ನಿರ್ವಹಣೆಯಲ್ಲಿ ತನ್ನದೇ ಆದ ಪ್ರಮುಖ ಕಾರ್ಯ ನಿರ್ವಹಿಸುತ್ತಾಳೆ, ಅಂತಹ ಗೃಹಿಣಿಯರು ಸುರಕ್ಷಿತವಾಗಿ ಕುಟುಂಬ ನಿರ್ವಹಿಸಲು ಹಾಗೂ ಅವರ ಆರೋಗ್ಯದ ರಕ್ಷಣೆಯ ಸಲುವಾಗಿ ಇಂದು ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತವಾಗಿ ಗ್ಯಾಸ್‌ ಸಿಲೆಂಡರಗಳನ್ನು ವಿತರಿಸಲಾಗುತ್ತಿದೆ ಎಂದು ಕುಡಚಿ ಶಾಸಕ ಪಿ.ರಾಜೀವ್‌ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ ಅಲಕನೂರ ಗ್ರಾಮದ ಚಿಂಚಲಿಚೌಕಿ ಬಳಿ ಇರುವ ಶಾಸಕರ ಕಚೇರಿಯಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಗೃಹಿಣಿಯರಿಗೆ ಹಾರೂಗೇರಿಯ ಶಿವಲೀಲಾ ಇಂಡೇನ್‌ ಗ್ಯಾಸ್‌ ಅವರ ಮೂಲಕ ಉಚಿತವಾಗಿ ಒಟ್ಟು 79 ಗ್ಯಾಸ್‌ ಸಿಲೆಂಡರ್‌ಗಳನ್ನು ವಿತರಿಸಿ ಮಾತನಾಡಿದ ಅವರು ಭಾರತ ದೇಶ ಬಡತನ ಮುಕ್ತ ದೇಶವಾಗಿ ಹೊರಹೊಮ್ಮಲು ದೇಶದ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ಧು, ಅದರಲ್ಲಿ ಬಡವರಿಗೆ ಪ್ರಧಾನಮಂತ್ರಿ ಉಜ್ವಲ ಯೋಜನೆ ಕೂಡಾ ಒಂದಾಗಿದೆ, ಪ್ರತಿಯೊಂದು ಬಡ ಕುಟುಂಬದ ನೆಮ್ಮದಿ ಬದುಕು ಹಾಗೂ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸಲು ಬಡವರಿಗೆ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ನೇರವಾಗಿ ಈ ಯೋಜನೆಯನ್ನು ತಲುಪಿಸಲಾಗುತ್ತಿದ್ಧು, ಮುಂಬರುವ ದಿನಗಳಲ್ಲಿ ಭಾರತ ದೇಶ ಪ್ರಧಾನಿ ನರೇಂದ್ರಮೋದಿ ಅವರ ಆಡಳಿತದಲ್ಲಿ ಬಡತನ ಮುಕ್ತ ದೇಶವಾಗಿ ಹೊರಹೊಮ್ಮಲಿದೆ ಎಂದು ಶಾಸಕ ಪಿ.ರಾಜೀವ್‌ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಸಕ ಪಿ.ರಾಜೀವ್‌ ಅವರ ತಂದೆಯಾದ ಪಾಂಡಪ್ಪಾ ಲಮಾಣಿ, ಶ್ರೀಮತಿ, ಶಾಂತಮ್ಮಾ, ಪುರಸಭೆ ಸದಸ್ಯ ಬಸವರಾಜ ಠಕ್ಕಣ್ಣವರ, ರಾಮಣ್ಣಾ ಕುರಿ, ಸಂತೋಷ ಶಿಂಗಾಡಿ, ಶಿವಾನಂದ ದಳವಾಯಿ, ಹುಸೇನಸಾಬ ಜಮಾದರ, ಹಣಮಂತ ಕುರಿ, ವಿಠ್ಠಲ ದೌಡತೆ, ಸಹದೇವ ಲಾಳಿ, ಬಸವರಾಜ ಖೋತ, ಸಾವಂತ ಹಸರೆ, ಸದಾಶಿವ ಪೂಜೇರಿ, ಕುಮಾರ ಹಿರೇಮಠ, ವಿಠ್ಠಲ ಬಡಿಗೇರ, ರಾಜು ಐತವಾಡೆ, ಮಾರುತಿ ಕಲ್ಯಾಣಕರ, ಅಜ್ಜಪ್ಪ ಹಸರೆ, ಮಲ್ಲು ಮರೆಪ್ಪಾ ಕಾಂಬಳೆ, ಜ್ಷಾನೇಶ್ವರ ಕಾಂಬಳೆ, ಶಿವಾನಂದ ಜಂಬಗಿ, ಕಲ್ಲಪ್ಪ ಹಳಬರ, ಸಣ್ಣಪ್ಪ ಅರಕೇರಿ, ಮಹೇಶ ಕಟ್ಟಿ, ತಿಪ್ಪಣ್ಣ ಕುಳ್ಳೊಳ್ಳಿ, ಪ್ರೀತಂ ಸಣ್ಣಕ್ಕಿ, ಅಶೋಕ ನಾಯಿಕ, ಪರಶುರಾಮ ಬೈರಿ, ಕರೆಪ್ಪಾ ದಳವಾಯಿ, ಲಗಮಣ್ಣಾ ಚೌಗಲಾ, ಸತ್ಯಪ್ಪಾ ಪಾತ್ರೋಟ, ಅಪ್ಪು ಪಾಟೀಲ, ಅಜ್ಜಪ್ಪಾ ದುಲ್ಹಾರಿ, ಕರೆಪ್ಪಾ ದಳವಾಯಿ, ಹಣಮಂತ ಗದಗ, ನಂಜುಂಡಿ ಮಾಂಜರಿ, ಮುತ್ತುರಾಜ ಗೋಳಸಂಗಿ, ದತ್ತು ಸಣ್ಣಕ್ಕಿ, ಇಮ್ತಿಯಾಜ್‌ ಮುಲ್ಲಾ, ರಾಘವೇಂದ್ರ ನೂಲಿ, ರಾಜುಕುಮಾರ ದಾನೊಳ್ಳಿ, ಕುಮಾರ ಹರಿಜನ, ಸಹದೇವ ಅರಕೇರಿ, ಮಹಾಂತೇಶ ಕಾಂಬಳೆ, ಮಹಾವೀರ ದೊಡಮನಿ, ಸಚೀನ ಕುಳ್ಳೊಳ್ಳಿ, ಅನೀಲ ಕುಳ್ಳೋಳ್ಳಿ ಸೇರಿದಂತೆ ಫಲಾನುಭವಿ ಮಹಿಳೆಯರು ಉಪಸ್ಥಿತರಿದ್ದರು.

loading...