ಗೊಡಚಿಯಲ್ಲಿ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದ ಶಾಸಕ ಪಟ್ಟಣ

0
23
loading...

ಕನ್ನಡಮ್ಮ ಸುದ್ದಿ-ರಾಮದುರ್ಗ: ಉತ್ತರ ಕರ್ನಾಟಕದ ಕಾಶಿ ಎಂದು ಹೆಸರುವಾಸಿಯಾದ ಗೊಡಚಿ ವೀರಭದ್ರೇಶ್ವರ ಜಾತ್ರೆಯು ಅತ್ಯಂತ ವಿಜ್ರಂಭನೆಯಿಂದ ನಡೆಯುತ್ತಿರುವುದು ತುಂಬಾ ಸಂತೋಷ ಭಕ್ತಾಧಿಗಳು ಜಾತ್ರೆಯಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು ಹಾಗೂ ವಸ್ತು ಪ್ರದರ್ಶನದ ಲಾಭ ಪಡದುಕೊಳ್ಳಬೇಕೆಂದು ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ತಿಳಿಸಿದರು.
ತಾಲೂಕಿನ ಸುಕ್ಷೇತ್ರ ಗೊಡಚಿ ವೀರಭದ್ರೇಶ್ವರ ಜಾತ್ರೆ ನಿಮಿತ್ಯ ಗ್ರಾಪಂ ಆವರಣದಲ್ಲಿ ಭಾನುವಾರ ಏರ್ಪಡಿಸಿದ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,
ಮಠದ ಚನ್ನಮಲ್ಲ ಸೀವಾಚಾರ್ಯ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ತಹಶೀಲ್ದಾರ ಆರ್‌ ವಿ. ಕಟ್ಟಿ ಜಿಪಂ ಸದಸ್ಯ ಜಾಹೂರ ಹಾಜಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಿದ್ಲಿಂಗಪ್ಪ ಶಿಂಗಾರಗೊಪ್ಪ, ರಾಮದುರ್ಗ ವೀರಭದ್ರೇಶ್ವರ ಟ್ರಸ್ಟ್‌ ಕಮಿಟಿಯ ಧರ್ಮಾಧಿಕಾರಿ ಸಂಗ್ರಾಮಸಿಂಹ ಶಿಂಧೆ, ಗ್ರಾಮದ ಪತ್ರೆಪ್ಪ ಮಲ್ಲಾಪೂರ ಗ್ರಾಪಂ ಅಧ್ಯಕ್ಷೆ ಕಮಲವ್ವ ಪಾಟೀಲ, ಉಪಾಧ್ಯಕ್ಷ ಈರಣ್ಣ ಕಾಮನ್ನವರ, ತಾಪಂ ಸದಸ್ಯೆ ಗಂಗವ್ವ ಕನಕನ್ನವರ, ಡಾ. ಆರ್‌ ಎಸ್‌. ಬಂತಿ, ಸಹಾಯಕ ಕೃಷಿ ನಿರ್ದೇಶಕ ಆರ್‌ ಟಿ. ಕಟಗಲ್ಲ, ಬಿಇಒ ಆರ್‌ ಟಿ. ಬಳಿಗಾರ, ಪಿಎಸ್‌ಐ ರಾಮನಗೌಡ ಸಂಕನಾಳ. ಸುನಿಲಕುಮಾರ ಲಮಾಣಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಪಿ ಜಿ. ಉಜ್ಜನಕೊಪ್ಪ ಸ್ವಾಗತಿಸಿದರು. ಎಸ್‌ ಎಂ. ಕಲ್ಲೂರ ವಂದಿಸಿದರು.

loading...