ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಿಂದ ರೈತರಿಗೆ ಅನುಕೂಲ

0
23
loading...

ರಾಯಬಾಗ 29: ಸ ಮತ್ತು ರೈತರ ಅನುಕೂಲಕ್ಕಾಗಿ ಕ್ಷೇತ್ರದ ಎಲ್ಲ ರಾಜ್ಯ ಮತ್ತು ಜಿಲ್ಲಾ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಇದರಿಂದ ರೈತರು ತಾವು ಬೆಳೆದ ಕಬ್ಬನ್ನು ಬೇರೆ ಬೇರೆ ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸಲು ಅನುಕೂಲವಾಗುತ್ತದೆ ಎಂದು ಶಾಸಕ ಡಿ.ಎಮ್‌.ಐಹೊಳೆ ಹೇಳಿದರು. ಲಶನಿವಾರ ಪಟ್ಟಣದ ಹೊರವಲಯದ ಫ್ಯಾಕ್ಟರಿ ಕ್ರಾಸ್‌ದಲ್ಲಿ ಲೋಕೋಪಯೋಗಿ ಇಲಾಖೆಯಡಿ ಮಂಜೂರಾದ 1.25 ಕೋಟಿ ರೂ. ವೆಚ್ಚದಲ್ಲಿ ಹಾರೂಗೇರಿ-ರಾಯಬಾಗ-ನಾಗರಮುನ್ನೋಳಿ ರಸ್ತೆ 2 ಕಿ.ಮೀ ಅಗಲೀಕರಣ ಮತ್ತು ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.ಲರಾಯಬಾಗ ಬಿಜೆಪಿ ಮಂಡಲ ಅಧ್ಯಕ್ಷ ಸದಾನಂದ ಹಳಿಂಗಳಿ, ಕಾರ್ಯಧ್ಯಕ್ಷ ಸದಾಶಿವ ಘೋರ್ಪಡೆ, ಅಣ್ಣಾಸಾಬ ಖೆಮಲಾಪೂರೆ, ಅಂಕುಶ ಜಾಧವ, ಅನೀಲ ಸಾನೆ, ರಮೇಶ ಹಾರೂಗೇರಿ, ತುಕಾರಾಮ ಟೊನ್ನೆ, ಕುಮಾರ ಖೋತ, ಚಂದ್ರಕಾಂತ ಕುಸ್ತಿಗಾರ ಸೇರಿದಂತೆ ಅನೇಕರು ಇದ್ದರು.

loading...