ಗ್ರಾ.ಪಂ ನೌಕರರಿಂದ ರಾಜ್ಯಮಟ್ಟದ ಹೋರಾಟ ಮಾಡುವ ಎಚ್ಚರಿಕೆ

0
15
loading...

ಗದಗ : ಗ್ರಾಪಂ ನೌಕರರ ಕನಿಷ್ಠ ವೇತನಕ್ಕೆ ಸಂಬಂಧಿಸಿದ ಪ್ರತ್ಯೇಕ ಅನುದಾನ ನೀಡಬೇಕೆಂಬ ಕಡತವನ್ನು ಸರಕಾರ ಶೀಘ್ರವೇ ಶಿಫಾರಸ್ಸು ಮಾಡಿ ಬೇಡಿಕೆಯನ್ನು ಈ ತಿಂಗಳ ಅಂತ್ಯದೊಳಗೆ ನೀಡದಿದ್ದಲ್ಲಿ ಜನೇವರಿ ತಿಂಗಳಲ್ಲಿ ಈ ಒಂದೇ ಬೇಡಿಕೆಯನ್ನು ಇಟ್ಟುಕೊಂಡು ಬೆಂಗಳೂರ ಚಲೋ ರಾಜ್ಯ ಮಟ್ಟದ ಹೋರಾಟ ಮಾಡಲಾಗುವುದು ಎಂದು ಗ್ರಾಪಂ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಬಿ. ನಾಡಗೌಡ್ರ ಸರಕಾರವನ್ನು ಎಚ್ಚರಿಸಿದ್ದಾರೆ.
ರವಿವಾರ ನಗರದ ಸ್ವಾಮಿ ವಿವೇಕಾನಂದ ಸಭಾ ಭವನದಲ್ಲಿ ಗ್ರಾಪಂ ನೌಕಕರ ಜಿಲ್ಲಾ ಸಂಘ ಹಮ್ಮಿಕೊಂಡ ಗ್ರಾಪಂ ನೌಕರರ 7 ನೇ ಜಿಲ್ಲಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಗ್ರಾಪಂ ನೌಕರರಿಗೆ ಪ್ರತ್ಯಕ ಅನುದಾನವನ್ನು £ೀಡಿ ನೌಕರರ ಹಿತಾಸಕ್ತಿ ಕಾಪಾಡಬೇಕೆಂದು ಆಗ್ರಹಿಸಿದರು.
ಎನ್‍ಆರ್‍ಇಜಿಎ ಹಾಗೂ ಸ್ವಚ್ಚ ಭಾರತ ಸೇರಿದಂತೆ ಮುಂತಾದ ಯೋಜನೆಗಳನ್ನು ಗ್ರಾಮ ಮಟ್ಟದಲ್ಲಿ ಅನುಷ್ಠಾನಗೊಳ್ಳುವಲ್ಲಿ ಗ್ರಾಪಂ ನೌಕರರ ಪಾತ್ರ ಅತ್ಯಂತ ಮಹತ್ವದಾಗಿದೆ. ಗ್ರಾಮ ಮಟ್ಟದಲ್ಲಿ ಗ್ರಾಪಂ ನೌಕರರು ಅಚ್ಚುಕಟ್ಟಾಗಿ ಕಾರ್ಯ £ರ್ವಹಿಸುತ್ತಿರುವ ಪರಿಣಾಮವಾಗಿ ಎಲ್ಲ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತಿವೆ. ಅಂತಹ ನೌಕರರಿಗೆ ಸೂಕ್ತ ವೇತನ, ಸೇವಾ ಭದ್ರತೆ ಸಂಪೂರ್ಣವಾಗಿ £ೀಡಬೇಕೆಂದು ಹೇಳಿ, ಗ್ರಾಪಂ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರಕಾರ ಕಾಲಹರಣ ಮಾಡಿದರೆ ಮುಂದಿನ ದಿನಮಾನಗಳಲ್ಲಿ ಹೋರಾಟ ಸ್ಚರೂಪವನ್ನು ಬದಲಾವಣೆ ಮಾಡಲಾಗುವುದು ಎಂದರು.
ಗದಗ ತಾಪಂ ಇಒ ಎಚ್.ಎಸ್. ಜನಗಿ ಮಾತನಾಡಿ ಗ್ರಾಪಂ ನೌಕರರ ಬೇಡಿಕೆಗಳು ಈಡೇರಬೇಕಾದರೆ ಸಂಘಟನೆ ಅತ್ಯವಶ್ಯ. ಒಗ್ಗಟ್ಟಿನಲ್ಲಿ ಬಲವಿದೆ. ಗ್ರಾಪಂ ನೌಕರರ ಕೆಲಸ ಕಾರ್ಯಗಳು ಮೆಚ್ಚುವಂತಹದ್ದು, ಗ್ರಾಮಗಳಲ್ಲಿ ಗ್ರಾಪಂ ನೌಕರರು ಶಿಸ್ತು, ಸ್ವಾಬಿಮಾನ ಬೆಳಸಿಕೊಂಡು ಗೌರವಯುತವಾದ ಬದುಕು £ಮ್ಮದಾಗಬೇಕು. ಯಾವಾಗಲೂ ನಿಮಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಜೀವ ವಿಮಾ ಪ್ರತಿನಿಧಿಗಳ ಸಂಘದ ರಾಜ್ಯಾಧ್ಯಕ್ಷ ಎಫ್.ಎಸ್. ಸಿಂಧಗಿ ಮಾತನಾಡಿ ಇಂದಿನ ದಿನಮಾನಗಳಲ್ಲಿ ಸಂಘಟನೆಗಳಿಂದ ಹೋರಾಟ ಮಾಡುವ ಮೂಲಕ ಕನಿಷ್ಠ ಬೇಡಿಕೆಗಳನ್ನು ಈಡೇರಿಸಿಕೊಳ್ಳುವಂತಾಗಿದೆ. ನೌಕರರು ಹೆಚ್ಚು ಸಂಘಟಿತರಾಗಬೇಕು. ಆಧುನಿಕರಣದ ತಂತ್ರಜ್ಞಾನದಿಂದಾಗಿ ಎಷ್ಟೋ ನೌಕರರು ಕೆಲಸ ಕಳೆದುಕೊಳ್ಳುವಂತಾಗಿದೆ. ಮಾನವ ಸಂಪನ್ಮೂಲ ಹೆಚ್ಚಾಗಬೇಕೆಂದು ಹೇಳಿದರು.
ಪಿಡಿಒ ಎಸ್.ವೈ. ಕುಂಬಾರ, ಗ್ರಾಪಂ ಕಾರ್ಯದರ್ಶಿ ಎಚ್.ಎಸ್. ಚಟ್ರ ಮಾತನಾಡಿ ಗ್ರಾಪಂ ನೌಕಕರು ಸಿಐಟಿಯುನ್ನು ಅರ್ಥಮಾಡಿಕೊಂಡು ಗ್ರಾಪಂ ನೌಕರರು ಮಾಡುವ ಕೆಲಸ ಕಾರ್ಯಗಳ ಬಗೆಗೆ ತಿಳಿಸಿ ತಮ್ಮ ಅನುಭವಗಳನ್ನು ವೇದಿಕೆಯಲ್ಲಿ ಹಂಚಿಕೊಂಡರು.
ಸಿಐಟಿಯು ಜಿಲ್ಲಾಧ್ಯಕ್ಷ ಮಹೇಶ ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾರುತಿ ಚಿಟಗಿ, ಪಿಡಿಒ ರಾಜಕುಮಾರ ಭಜಂತ್ರಿ ಮಾತನಾಡಿದರು.
ಇದೆ ಸಂಧರ್ಭದಲ್ಲಿ ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾಗಿ ಬಸವರಾಜ ಮಂತೂರ, ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಜಕ್ಕಮ್ಮನವರ, ಖಜಾಂಚಿಯಾಗಿ ತುಕಾರಾಮ ಹುಲಗಣ್ಣವರ ಹಾಗೂ ಜಿಲ್ಲಾ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ವಾಲ್ಮೀಕಿ ಸಮಾಜದ ಮುಖಂಡ ಮೈಲಾರಪ್ಪ ಕಲಕೇರಿ, ಕುಮಾರೇಶ ಸಜ್ಜನರ, ಗ್ರಾಪಂ ಕಾರ್ಯದರ್ಶಿ ಪ್ರದೀಪ ಆಲೂರ ಸೇರಿದಂತೆ ಗ್ರಾಪಂ ನೌಕರರ ಸಂಘದ ಜಿಲ್ಲಾ ಹಾಗೂ ತಾಲೂಕ ಸಮಿತಿಗಳ ಪದಾಧಿಕಾರಿಗಳು ಹಾಗೂ ಜಿಲ್ಲೆಯ 122 ಗ್ರಾಪಂ ನೌಕಕರು ಹಾಗೂ ಮುಂತಾದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

loading...