ಚನ್ನಮ್ಮ ಕಿತ್ತೂರು : ಬೈಕ್ ನಡುವೆ ಡಿಕ್ಕಿ ಓರ್ವ ಸಾವು. ಓರ್ವನಿಗೆ ಗಂಭೀರಗಾಯ

loading...

ಕನ್ನಡಮ್ಮ ಸುದ್ದಿ ಚನ್ನಮ್ಮ ಕಿತ್ತೂರು.

ಪಟ್ಟಣದ ಬಿಡಿ ಕ್ರಾಸ್ ಹತ್ತಿರ ರಾಜ್ಯ ಹೆದ್ದಾರಿಯಲ್ಲಿ ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಓರ್ವ ಮೃತ ಪಟ್ಟಿದಾನೆ. ಓರ್ವನ ಸ್ಥಿತಿ ಗಂಭೀರವಾಗಿದೆ.
ತಿಗಡೊಳ್ಳಿ ಗ್ರಾಮದ ನಿವಾಸಿ ಯಲ್ಲಪ್ಪ ಹಿತ್ತಲಕ್ಕಿ (22) ಮೃತ ದುರ್ದೈವಿ. ಹುಣಶಿಕಟ್ಟಿ ಗ್ರಾಮದ ನಿವಾಸಿ ವಿಜಯಕುಮಾರ ಬಸರಕೋಡ ತೀವೃ ಗಾಯಗಳಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದಾನೆ. ಕಿತ್ತೂರು ಸಮುದಾಯ ಆರೋಗ್ಯ ಕೇಂದ್ರದಿಂದ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ವೇಗವಾಗಿ ಇಬ್ಬರು ಬೈಕ್ ಸವಾರರು ವಾಹನ ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ರಸ್ತೆಯ ತಿರಿವಿನಲ್ಲಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಗಳು ನಜ್ಜುಗುಜ್ಜಾಗಿವೆ.
ಕಿತ್ತೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಕಿತ್ತೂರು ಪಿಎಸೈ ಮಲ್ಲಿಕಾರ್ಜುನ ಕುಲಕರ್ಣಿ ಬೇಟಿ ನೀಡಿ ಪರಿಶೀಲಣೆ ನಡೆಸಿದರು.

loading...