ಚಿಕ್ಕೋಡಿ ಭಾಗದಲ್ಲಿ ಉತ್ತರ ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

0
24
loading...

ಕನ್ನಡಮ್ಮ ಸುದ್ದಿ-ಚಿಕ್ಕೋಡಿ/ಅಥಣಿ 28: ಮಹಾದಾಯಿ ಹಾಗೂ ಕಳಸಾ ಬಂಡೂರಿ ಹೋರಾಟ ಕೈಕೊಳ್ಳು ಸಲುವಾಗಿ ರೈತಪರ ಸಂಘಟನೆಗಳು ಕರೆಕೊಟ್ಟಿದ್ದ ಬಂದ್‌ ಕರೆ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಮಿಶ್ರ ಪ್ರತಿಕ್ರಿಯೆ
ವ್ಯಕ್ತವಾಗಿದೆ. ಕಳೆದ ಎರಡು ದಿನಗಳ ಹಿಂದೆ ಚಿಕ್ಕೋಡಿಯಲ್ಲಿ ರೈತಪರ ಸಂಘಟನೆಗಳು ಚಿಕ್ಕೋಡಿಯಲ್ಲಿ ಪ್ರತಿಭಟನೆ
ನಡೆಸಿದ್ದರಿಂದ ಇಂದು ಯಾವುದೇ ತರಹದ ಪ್ರತಿಭಟನೆಯಾಗಲಿ ಅಥವಾ ಬಂದ್‌ ಬಿಸಿಯಾಗಲಿ ಪಟ್ಟಣದ ಜನರಿಗೆ ತಟ್ಟಲಿಲ್ಲ. ಇತ್ತೀಚಿಗೆಯಷ್ಟೇ ಎರಡು ದಿನಗಳ ಬಂದ್‌ ಆಚರಿಸಿ
ಲಕ್ಷಾಂತರ ನಷ್ಟ ಅನುಭವಿಸಿದ್ದ ವ್ಯಾಪಾರಸ್ಥರು ಇಂದು ಎಂದಿನಂತೆ ವ್ಯಾಪಾರ ವಹಿವಾಟು
ನಡೆಸಿದವು. ಅಥಣಿಯಲ್ಲಿ ಕಳಸಾ ಬಂಡೂರಿ ಯೋಜನೆ ಜಾರಿಗೆ ¨ರಲೇಬೇಕೆಂದು ಘೋಷಣೆಗಳನ್ನು ಕೂಗುತ್ತಾ ಡಾ. ಅಂಬೇಡ್ಕರ
ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಬಸ್‌ ಸಂಚಾರ, ಖಾಸಗಿ ವಾಹನಗಳು, ಎಂದಿನಂತೆ
ಕಾರ್ಯನಿರ್ವಹಿಸಿದವು. ಅಂಗಡಿಗಳು, ಶಾಲಾ ಕಾಲೆಜುಗಳು ಹಾಗೂ ಬ್ಯಾಂಕ್‌ಗಳು ತಮ್ಮ
ತಮ್ಮ ದೈನಂದಿನ ಕಾರ್ಯ, ಪ್ರವೃತ್ತವಾಗಿದ್ದವು.ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮತ್ತು ಕನ್ನಡಪರ ಸಂಘಟನೆಗಳ
ಪದಾಧಿಕಾರಿಗಳು ಪಟ್ಟಣದ ಶಿವಯೋಗಿ ವೃತ್ತದಿಂದ ಅರೆಬೆತ್ತಲೆ ಮೆರವಣಿಗೆ ಮತ್ತು
ರೈತ ಮಹಿಳೆಯರ ಖಾಲಿ ಕೊಡ ಪ್ರದರ್ಶನದೊಂದಿಗೆ ಹೊರಾಟ ಮೆರವಣಿಗೆ ಅಂಬೇಡ್ಕರ
ವೃತ್ತದಲ್ಲಿ ಸಮಾವೇಶಗೊಂಡಿತು. ಜೇವರಿಗಿ- ಸಂಕೇಶ್ವರ ರಾಜ್ಯ ಹೆದ್ದಾರಿ ಸಂಚಾರ
ತಡೆದು ಪ್ರತಿಭಟನೆ ನಡೆಸಿದರು. ಉಪ ತಹಸೀಲ್ದಾರ್‌ ರಾಜು ಬುರ್ಲಿ ಮೂಲಕ ರಾಜ್ಯಪಾಲರಿಗೆ
ಮನವಿ ಸಲ್ಲಿಸಲಾಯಿತು ರೈತ ಸಂಘ ಕರವೇ ಸಾಂಸ್ಕೃತಿಕ ಸಂಘಗಳ ಪದಾಧಿಕಾರಿಗಳಾದ ಮಹಾದೇವ ಮಡಿವಾಳ,
ವಿಜಯ ಹುದ್ದಾರ, ಸಿದ್ದಾರ್ಥ ಸಿಂಗೆ, ಅಣ್ಣಪ್ಪ ಉದ್ದಾನಗೋಳ, ಎಂ.ಜಿ. ಕನಶೆಟ್ಟಿ, ಎ.ಎಸ್‌.ತೆಲಸಂಗ
ಮಾತನಾಡಿದರು. , ಪ್ರಕಾಶ ಪೂಜಾರಿ, ವಿಜಯ ಸೇನೆಯ ಜಿದಾನಂದ ಶೇಗುಣಿಸಿ, ಶ್ರೀಶೈಲ
ಬಿರಾದಾರ, ಮುರಿಗೆಪ್ಪ ಗಡದೆ ಗಜಾನನ ಕಾಂಬಳೆ, ತಮ್ಮಣ್ಣ ಸಂಕಪಾಳ, ಇತರರು
ಪಾಲ್ಗೊಂಡಿದ್ದರು.

loading...