ಚಿಕ್ಕೋಡಿ ಸಂಸದ ಹುಕ್ಕೇರಿ ಕಾರು ಅಪಘಾತ

0
28
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ಅವರ ಕಾರು ಅಪಘಾತಕ್ಕೀಡಾಗಿದೆ. ಶುಕ್ರವಾರ ತಡರಾತ್ರಿ ಅಪಘಾತ ಸಂಭವಿಸಿದ್ದು, ಇದು ತಡವಾಗಿ ಬೆಳಕಿಗೆ ಬಂದಿದೆ.
ಶುಕ್ರವಾರ ರಾತ್ರಿ ಪಕ್ಕದ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಮಂಗಳಗಡ ಬಳಿ ಅಪಘಾತ ಘಟನೆ ಸಂಭವಿಸಿದೆ. ಈ ಸಮಯದಲ್ಲಿ ಸಂಸದ ಪ್ರಕಾಶ ಹುಕ್ಕೇರಿ ಹಾಗೂ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ರೆ, ಸಂಸದರ ಗನ್‌ಮ್ಯಾನ್‌ ಪವನ್‌ಕುಮಾರ್‌ ಎಂಬುವರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತ ನಂತರ ಸಂಸದ ಪ್ರಕಾಶ ಹುಕ್ಕೇರಿ ಸೇರಿದಂತೆ ಎಲ್ಲರಿಗೂ ಸೊಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಪ್ರಶಾಂತ ಎಂಬ ಚಾಲಕ ಇತ್ತಿಚೆಯಷ್ಟೇ ಹೊಸದಾಗಿ ಸಂಸದರ ಕಾರು ಚಾಲನೆಗಾಗಿ ಬಂದಿದ್ದ. ಈ ಹಿಂದೆ ಸಂಸದರ ಕಾರು ಚಾಲಕ ಮಹೇಶ ರಜೆಯ ಮೇಲಿದ್ದ ಸಂದರ್ಭದಲ್ಲಿ ಪ್ರಶಾಂತ ಎಂಬುವರು ಸಂಸದರ ಜೊತೆಗೆ ಸೊಲ್ಲಾಪುರದಲ್ಲಿ ಸ್ವಾಮೀಜಿಯೊಬ್ಬರ ಅಂತ್ಯಕ್ರಿಯೆಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

loading...