ಚುನಾವಣೆಯಲ್ಲಿ ಬಿಜೆಪಿ ಗೆಲುವು… ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ..!!

0
25
loading...


ವಿಜಯಪುರ: ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಪಕ್ಷ ಸ್ಪಷ್ಟ ಬಹುಮತ ಪಡೆದ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ನಗರದ ಶ್ರೀ ಸಿದ್ದೇಶ್ವರ ದೇವಾಲಯದ ಮುಂಭಾಗದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಸಂಭ್ರಮಿಸಿದರು.
ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಮಾತನಾಡಿ, ಬಿಜೆಪಿ ಪಕ್ಷ ವಿಕಾಸದ ಆಧಾರದ ಮೇಲೆ ಚುನಾವಣೆಯನ್ನು ಮಾಡಿ ವಿಜಯ ಸಾಧಿಸುವಲ್ಲಿ ಯಶಸ್ವಿ ಆಗಿದ್ದೇವೆ. ಈ ಒಂದು ಎಚ್ಚರಿಕೆಯ ಘಂಟೆಯ ರಾಜ್ಯದಲ್ಲಿ ಅಧಿಕಾರದಲ್ಲಿರುವ ಭ್ರಷ್ಟ ಹಾಗೂ ಕೊಲೆಗಡುಕ ಸರ್ಕಾರ ತಿಳಿದುಕೊಂಡು ಜಾತಿವಾದದ ವಿಷ ಬೀಜವನ್ನು ಬಿತ್ತುವುದನ್ನು ಬಿಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ವಿಠ್ಠಲ ಕಟಕದೊಂಡ ಮಾತನಾಡಿ, ದೇಶದ 2 ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಜನರು ನಮ್ಮ ಪಕ್ಷದ ಮೇಲೆ ವಿಶ್ವಾಸವನ್ನು ಇಟ್ಟು ಮತ ಚಲಾಯಿಸಿ ಮತ್ತೆ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಇಂದಿರಿಂದ ಬಿಜೆಪಿಗೆ ಜನತೆ ಬೆಂಬಲಿಸುತ್ತಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಎರಡು ರಾಜ್ಯಗಳಲ್ಲಿ ಬಿಜೆಪಿ ಜಯಬೇರಿ ಭಾರಿಸಿದ್ದು ಕಾಂಗ್ರೆಸ್ ನಾಯಕರಲ್ಲಿ ನಡುಕ ಹುಟ್ಟಿಸಿದಂತಾಗಿದೆ. ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ಹೊಸ್ತಿನಲ್ಲಿರುವ ಸಂದರ್ಭದಲ್ಲಿಯೇ ಬಿಜೆಪಿ ಪರ ಜನರು ಒಲವು ತೋರಿದ್ದು ವಿಶೇಷವಾಗಿದೆ. ರಾಜ್ಯದಲ್ಲಿಯೂ ಮುಂಬರುವ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದರು.

ನಗರ ಘಟಕದ ಅಧ್ಯಕ್ಷ ಶಿವರುದ್ರ ಬಾಗಲಕೋಟ, ರಾಜ್ಯ ಕಾರ್ಯಕಾರಣಿ ಸದಸ್ಯ ಚಂದ್ರಶೇಖರ ಕವಟಗಿ, ಡಾ.ಸುರೇಶ ಬಿರಾದಾರ, ಈರಣ್ಣ ಪಟ್ಟಣಶೆಟ್ಟಿ, ಭೀಮಾಶಂಕರ ಹದನೂರ, ಚಿದಾನಂದ ಚಲವಾದಿ, ಡಾ. ಬಾಬು ನಾಗುರ, ಪ್ರಕಾಶ ಅಕ್ಕಲಕೊಟ, ವಿವೇಕ ಡಬ್ಬಿ, ಸಂಗರಾಜ ದೇಸಾಯಿ, ರವಿಕಾಂತ ಬಗಲಿ, ಅಶೋಕ ನ್ಯಾಮಗೊಂಡ, ಬಸವರಾಜ ಬೈಚಬಾಳ, ಶಾರದಾ ಹೀರೆಮಠ, ಮಂಚಾಲೇಶ್ವರಿ ತೋನಶ್ಯಾಳ, ಅನುಸುಯಾ ಜಾಧವ, ಗೀತಾ ಕುಗೂನರ, ಮಂಜುಳಾ ಅಂಗಡಿ, ಕೃಷ್ಣ ಗುನ್ನಾಳಕರ, ರಾಜು ಬಿರಾದರ, ರಮೇಶ ಪಡಸಲಗಿ, ಪಾಲಿಕೆ ಸದಸ್ಯರಾದ ರಾಜು ಮಗಿಮಠ, ರಾಹುಲ ಜಾಧವ, ಶಿವಾನಂದ ಭುಯ್ಯಾರ, ರಾಜೇಶ ತವಸೆ, ವಿಜಯ ಜೋಶಿ, ಗುರುರಾಜ ರಾವ್ ಮೊದಲಾದವರು ಪಾಲ್ಗೊಂಡಿದ್ದರು.

loading...