ಜಾನ ಪದ ಸಂಸ್ಕೃತಿಯನ್ನು ಉಳಿಸಿ ಬೆಳಸುವ ಪ್ರಯತ್ನ ಎಲ್ಲರು ಮಾಡಬೇಕು

0
37
loading...

ಜಾನ ಪದ ಸಂಸ್ಕೃತಿಯನ್ನು ಉಳಿಸಿ ಬೆಳಸುವ ಪ್ರಯತ್ನ ಎಲ್ಲರು ಮಾಡಬೇಕು.

ಕನ್ನಡಮ್ಮ ಸುದ್ದಿ

ಸಂಕೇಶ್ವರ 03: ಇಂದಿನ ಆಧುನಿಕ ದಿನಗಳಲ್ಲಿ ಕನ್ನಡ ಜಾನ ಪದ ಸಂಸ್ಕೃತಿಯನ್ನು ಉಳಿಸಿ ಬೆಳಸುವ ಪ್ರಯತ್ನ ಎಲ್ಲರು ಮಾಡಬೇಕು ಎಂದು ಸಿರಿಗ್ನಡ  ವೇದಿಕೆ ಮಹಿಳಾ ಘಟಕದ ತಾಲ್ಲೂಕಾ ಅಧ್ಯಕ್ಷರಾದ ಹಮೀದಾ ಬೇಗಂ ದೇಸಾಯಿ ಹೇಳಿದರು.

ಇತ್ತಿಚಿಗೆ ಪಟ್ಟಣದ ಇಲ್ಲಿನ ಕ್ವಳ್ಳಿ ಪ್ಲಾಟನ ಕಸ್ತೂರಿ ಪಾಟೀಲ ಅವರ ಮನೆಯಲ್ಲಿ ಏರ್ಪಡಿಸಿದ ‘ಜಾನ ಪದ ಸಿರಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಆಧುನಿಕ ಬರಾಟೆಯಲ್ಲಿ ಮಹಿಳೆಯರು ನಮ್ಮ ಪುರಾತನ ಸಂಸ್ಕೃತಿಯನ್ನು ಮರೆಯುತ್ತಿದು ಈಗಿನ ಕಾಲತಕ್ಕಂತೆ ನಮ್ಮ ಸಂಸ್ಕೃತಿಯನ್ನು ಉಳಿಸಲು ಮಹಿಳೆಯರು ಕೈ ಜೋಡಿಸ ಬೇಕು ಎಂದರು. ಸಿರಿಗನ್ನಡ ವೇದಿಕೆಯ ರಾಜ್ಯದ ಮಹಿಳಾ ಘಟಕದ ಉಪಾಧ್ಯಕ್ಷರಾದ ರಜನಿ ಜಿರಗ್ಯಾಳ  ಜಾನಪದ ಸಾಹಿತ್ಯದ ಬಗ್ಗೆ ಮಾತನಾಡದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಜನಪದ ಕಲೆ ಬಿಸುವ ಕಲ್ಲು, ಬಿಸುವ ಮೂಲಕ ಉದ್ಘಾಟಿಸಲಾಯಿತ್ತು .
ಈ ಸಂಧರ್ಭದಲ್ಲಿ ಸಿರಿಗನ್ನಡ ವೇದಿಕೆಯ ತಾಲೂಕಾ ಉಪಾಧ್ಯಕ್ಷರಾದ ಶೋಭಾ ದೇಸಾಯಿ, ಹೇಮಾ ವಾಲಿ, ವೈಶಾಲಿ ಭರಭರಿ, ಹಾಗೂ ವೇದಿಕೆ ಸರ್ವ ಸದ್ಯಸರು ಇದ್ದರು. ಈ ವೇಳೆ ಸ್ವ ಉದ್ಯೋಗದಲ್ಲಿ ತೊಡಗಿದ ಕಸ್ತೂರಿ ಪಾಟೀಲ ಅವರನ್ನು ವೇದಿಕೆ ಪರವಾಗಿ ಸನ್ಮಾನಿಸಲಾಗಿತ್ತು. ಶಾಂತಾ ತುಂಬದ ಪ್ರಾರ್ಥಿಸಿ ಶ್ರೀಮತಿ ದೊಡಿಹಾಳಮಠ ಸ್ವಾಗತಿಸಿ, ವಂದಿಸಿದರು.

loading...