ಟೆಂಡರ್ ರದ್ದು ಪಡಿಸುವಂತೆ ಒತ್ತಾಯ

0
11
loading...

ಕನ್ನಡಮ್ಮ ಸುದ್ದಿ
ಬೆಳಗಾವಿ : ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ಜಿಲ್ಲೆಯ ಪುರಸಭೆ ಹಾಗೂ ಪಟ್ಟಣ ಪಂಚಾಯತಿಗಳಲ್ಲಿನ ಕಾಮಗಾರಿಗಳಿಗೆ ಕರೆದಿರುವ ಟೆಂಡರ್ ಪ್ರಕ್ರಿಯೆಯನ್ನು ರದ್ದು ಪಡಿಸುವಂತೆ ಒತ್ತಾಯಿಸಿ ಸೋಮವಾರ ಕ್ರಾಂತಿಸೇನಾದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ಇತ್ತಿಚೆಗೆ ಕನ್ನಡ ದಿನಪತ್ರಿಕೆಯೊಂದರಲ್ಲಿ ಕರೆದಿರುವ ಟೆಂಡರ್ ಪ್ರಕಟಣೆಯಲ್ಲಿ ಸರಕಾರದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಂಡ ಮೀಸಲಾತಿ ಟೆಂಡರ್‍ಗಳ ನಿಯಮ ಪಾಳನೆ ಮಾಡದೇ ಅಧಿಕಾರಿಗಳು ತಮ್ಮ ಮನಬಂದಂತೆ ಪ್ಯಾಕೇಜ್ ಕಾಮಗಾರಿಗಳನ್ನು ಮಾಡಿ ಟೆಂಡರ್ ಕರೆದಿರುತ್ತಾರೆ ಈ ಟೆಂಡರ್ ಪ್ರಕ್ರಿಯೇಯನ್ನು ರದ್ದು ಪಡಿಸಬೇಕು ಎಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಸಲ್ಲಿಸಿದರುವ ಮನವಿಯಲ್ಲಿ ತಿಳಿಸಿದ್ದಾರೆ.
ಸಿಂಧೂರಲಕ್ಷ್ಮಣ ವಲ್ಲೇಪುರಕರ, ಸಾಗರ ಅಷ್ಟೇಕರ, ಹನುಮಂತ ಬುಚಡಿ, ಬಾಬು ದೋತ್ರೆ, ಕವಿತಾ ಅಲಕುಂಟೆ, ಮೋಹನ ಸಿಂಗಾಡಿ, ಬಸ್ಸು ಬುಗ್ಗರಿ, ಚೇತನ ಬುಚಡಿ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

loading...