ತಾಲೂಕಾ ಕೇಂದ್ರಗಳಿಂದ ಕೈಬಿಟ್ಟಿರುವುದಕ್ಕೆ ನಿಪ್ಪಾಣಿಗರ ಆಕ್ರೋಶ

0
33
loading...

ನಿಪ್ಪಾಣಿ 29: ಜ.1 ರಿಂದ ರಾಜ್ಯದಲ್ಲಿ ಜಾರಿಗೆ ಬರಲಿರುವ ನೂತನ ತಾಲೂಕುಗಳ ಪಟ್ಟಿಯಿಂದ ನಿಪ್ಪಾಣಿಯನ್ನು ‘ಕೈ‘ಬಿಟ್ಟಿರುವುದನ್ನು ಖಂಡಿಸಿ ಶುಕ್ರವಾರದಂದು ಮಧ್ಯಾಹ್ನದವರೆಗೆ ಕರೆ ನೀಡಿದ್ದ ಬಂದ್‌ ಸಂಪೂರ್ಣ ಯಶಸ್ವಿಯಾಯಿತು.ಬಸ್‌ ನಿಲ್ದಾಣದ ಸಂಭಾಜಿ ವೃತ್ತದಿಂದ ವಿಶೇಷ ತಹಸೀಲ್ದಾರ ಕಚೇರಿಯವರೆಗೆ ಬೃಹತ್‌ ಮೌನ ಮೆರವಣಿಗೆ ನಡೆಸಿ ಉಪತಹಸೀಲ್ದಾರ ಎನ್‌.ಬಿ.ಗೆಜ್ಜಿ ಅವರ ಮೂಲಕ ಸಿಎಂ ಅವರಿಗೆ ಮನವಿ ಸಲ್ಲಿಸಲಾಯಿತು.ನಗರಸಭೆ ಅಧ್ಯಕ್ಷ ವಿಲಾಸ ಗಾಡಿವಡ್ಡರ ಅವರ ನೇತೃತ್ವದಲ್ಲಿ ನಡೆಸಲಾದ ಈ ಪ್ರತಿಭಟನಾ ಮೆರವಣಿಗೆಯಲ್ಲಿ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ನೂರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.ಬೆಳಿಗ್ಗೆಯಿಂದಲೇ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್‌ ಆಗಿದ್ದವು.ಕೆಲ ಶಾಲಾ ಕಾಲೇಜುಗಳಿಗೂ ರಜೆ ಘೋಷಿಸಲಾಗಿತ್ತು.ಪಟ್ಟಣದಲ್ಲಿ ಉರುಸ್‌ ಇದ್ದರೂ ವ್ಯಾಪಾರಿಗಳು ಬಂದ್‌ಗೆ ನೀಡಿದ ಬೆಂಬಲ ಅಭೂತಪೂರ್ವ ಆಗಿತ್ತು.ಬಾರ್‌ ಅಸೋಶಿಯೇಶನ್‌ ಕೆಲಸ ಬಂದ್‌ ಇಟ್ಟು ಬಂದ್‌ಗೆ ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅದೇ ರೀತಿ ನಾನಾ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು.ತಹಶೀಲ್ದಾರ ಕಚೇರಿ ಎದುರು ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ವಿಲಾಸ ಗಾಡಿವಡ್ಡರ, ಜಿಲ್ಲೆ ಅರ್ಹತೆವುಳ್ಳ ನಿಪ್ಪಾಣಿಯನ್ನು ತಾಲೂಕನ್ನಾಗಿ ಮಾಡುವಂತೆ ಆಗ್ರಹಿಸಿ ನಾಗರೀಕರು ರಸ್ತೆಗಿಳಿಯಬೇಕಾಗಿದ್ದು ವಿಪರ್ಯಾಸದ ಸಂಗತಿ.ಜ.2 ರವರಗೆ ಸರಕಾರ ನಿಪ್ಪಾಣಿ ತಾಲೂಕನ್ನಾಗಿ ಘೊಷಣೆ ಮಾಡಬೇಕು.ತಪ್ಪಿದ್ದಲ್ಲಿ ಜ.3 ರಂದು ನಿಪ್ಪಾಣಿ ಬಂದ್‌ ಮಾಡಲಾಗುವುದು.ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಲಾಗುವುದು.ಜ. 2 ರಂದು ನಗರಸಭೆಯಲ್ಲಿ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.ಮಾಜಿ ಶಾಸಕ ಸುಭಾಷ ಜೋಶಿ ಮಾತನಾಡಿ,ಜ.15 ರವರೆಗೆ ಸರಕಾರ ತಾಲೂಕು ಘೊಷಣೆ ಮಾಡದೇ ಇದ್ದಲ್ಲಿ ನಾನು ಮತ್ತು ಅಧ್ಯಕ್ಷ ವಿಲಾಸ ಇಬ್ಬರೂ ಅಮರಣ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿದರು.ಚಿಕ್ಕೋಡಿಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಮಾತನಾಡಿ,ಚಿಕ್ಕೋಡಿ ತಾಲೂಕಿನ 5 ಗ್ರಾ.ಪಂ.ಗಳು ಮತ್ತು ಹುಕ್ಕೇರಿ ತಾಲೂಕಿನ ಕೆಲ ಗ್ರಾಮಗಳನ್ನು ಸಮಾವೇಶಗೊಳಿಸಿ ನಿಪ್ಪಾಣಿ ನೂತನ ತಾಲೂಕನ್ನು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.ಹಾಲಸಿದ್ಧನಾಥ ಕಾರಖಾನೆ ನಿರ್ದೇಶಕ ಆರ್‌.ವೈ.ಪಾಟೀಲ ಮಾತನಾಡಿ,ಚಿಕ್ಕೋಡಿ ತಾಲೂಕಿನ ಪಟ್ಟಣಕುಡಿ,ಖಡಕಲಾಟ,ವಾಳಕಿ,ನವಲಿಹಾಳ,ಚಿಕ್ಕಲವಾಳ 5 ಗ್ರಾ.ಪಂ.ಗಳನ್ನು ನಿಪ್ಪಾಣಿ ತಾಲೂಕಿಗೆ ಸೇರಿಸಬೇಕು ಎಂದರು.ನ್ಯಾಯವಾದಿ ಎ.ಎಚ್‌.ಸೂರ್ಯವಂಶಿ,ಪಂಕಜ ಪಾಟೀಲ ಮಾತನಾಡಿದರು.ನಗರಸಭೆ ಉಪಾಧ್ಯಕ್ಷ ಸುನೀಲ ಪಾಟೀಲ,ರಾಜೇಶ ಕದಂ,ಜುಬೇರ ಬಾಗಬಾನ,ಬಾಳಾಸಾಹೇಬ ದೇಸಾಯಿಸರಕಾರ,ರವೀಂದ್ರ ಚಂದ್ರಕುಡೆ,ಅನೀಲ ಶಿಂಧೆ,ಹರ್ಷ ಶೆಟ್ಟಿ,ವಿಜಯ ಮೇತ್ರಾಣಿ,ಶುಭಾಂಗಿ ಜೋಶಿ,ನಮ್ರತಾ ಕಮತೆ,ನೀತಾ ಲಾಟಕರ,ಸುನೀತಾ ಹೊನಕಾಂಬಳೆ ಮತ್ತಿತರರು ಪಾಲ್ಗೊಂಡಿದ್ದರು.

loading...