ದಾಂಡೇಲಿಯಲ್ಲಿ ಬಿ.ಜೆ.ಪಿ.ಯಿಂದ ಪ್ರತಿಭಟನೆ

0
18
loading...

ದಾಂಡೇಲಿ: ಉ.ಕ ಜಿಲ್ಲೆಯ ಹೊನ್ನಾವರ ಪಟ್ಟಣದ ಹಿಂದೂ ಯುವಕ ಪರೇಶ ಮೇಸ್ತ ಹತ್ಯೆಯನ್ನು ಖಂಡಿಸಿ ನಗರದಲ್ಲಿ ಬಿಜೆಪಿ ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ಹತ್ಯೆಯಲ್ಲಿ ಭಾಗಿಯಾದವರನ್ನು ಬಂಧಿಸಿ ನ್ಯಾಯಾಂಗ ತನಿಖೆ ನಡೆಸಬೇಕೆಂದು ರಾಜ್ಯಪಾಲರಿಗೆ ಬರೆದ ಮನವಿಯನ್ನು ಸ್ಥಳೀಯ ಕಂದಾಯ ಇಲಾಖೆಯ ಅಧಿಕಾರಿ ಮಹೇಶ ಮೈತ್ರಿಯವರ ಮುಖಾಂತರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿಯ ಅಧ್ಯಕ್ಷ ಬಸವರಾಜ ಕಲಶೆಟ್ಟಿ ಹಿರಿಯ ಮುಖಂಡರಾದ ಅಶೋಕ ಪಾಟೀಲ, ರೋಶನ ನೇತ್ರಾವಳಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಸಮಾಜದ ಕೆಲವು ಸಂಘಟನೆಗಳಾದ ಪ್ಯಾಪುಲರ್‌ ಫ್ರಂಟ್‌ ಆಫ್‌ ಇಂಡಿಯಾ(ಪಿ.ಎಫ್‌.ಐ), ಸೋಸಿಯಲ್‌ ಡೆಮೊಕ್ರೊಟಿಕ್‌ ಫ್ರಂಟ್‌ ಆಫ್‌ ಇಂಡಿಯಾ(ಎಸ್‌.ಡಿ.ಪಿ.ಐ) ಇಂತಹ ಸಂಘಟನೆಗಳು ಮುಸ್ಲಿಂ ಸಮಾಜದ ಯುವಕರಲ್ಲಿ ದ್ವೇಷದ ಭಾವನೆಯನ್ನು ಹರಡಿಸುತ್ತೀವೆ ಎಂದು ಆರೋಪಿಸಿದರು.
ಇಂತಹ ಸಂಘಟನೆಗಳು ಹಿಂದೂ ಸಂಘಟನೆಗಳ, ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಹತ್ಯೆಗೆ ಕುಮ್ಮಕು ಕೊಡುತ್ತಾ ಕರಾವಳಿಯಲ್ಲಿ ಅಶಾಂತಿಗೆ ಕಾರಣವಾಗುತ್ತಿವೆ. ಪ್ರಾರಂಭದಲ್ಲಿಯೆ ಇಂತಹ ಅರಕ್ಷ ಇಲಾಖೆ ಮುಂಜಾಗ್ರತೆಯ ಕ್ರಮ ಕೈಕೊಂಡು ತಪ್ಪಿತಸ್ಥರ ವಿರುದ್ಧ ನ್ಯಾಯಾಂಗ ತನಿಖೆ ನಡೆಸಿ ಗಲಬೆಗಳು ಆಗದಂತೆ ಎಚ್ಚರಿಕೆ ವಹಿಸಬೇಕೆಂದರು. ಬಿಜೆಪಿಯ ಸುಧಾಕರ ರೆಡ್ಡಿ, ಗುರು ಮಠಪತಿ, ಚಂದ್ರಕಾಂತ ಕ್ಷೀರಸಾಗರ, ಪ್ರಶಾಂತ ಬಸೂತೆಕರ್‌ ಇತರ ಪದಾಧಿಕಾರಿಗಳು ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

loading...