ದಾನಮ್ಮ ಅತ್ಯಾಚಾರಿಗಳಿಗೆ  ಗಲ್ಲು ಶಿಕ್ಷೆಗೆ ಆಗ್ರಹಿಸಿ ಹೆಬ್ಬಾಳದಲ್ಲಿ ಪ್ರತಿಭಟನೆ

0
19
loading...

ದಾನಮ್ಮ ಅತ್ಯಾಚಾರಿಗಳಿಗೆ  ಗಲ್ಲು ಶಿಕ್ಷೆಗೆ ಆಗ್ರಹಿಸಿ ಹೆಬ್ಬಾಳದಲ್ಲಿ ಪ್ರತಿಭಟನೆ .

ಕನ್ನಡಮ್ಮ ಸುದ್ದಿ

ಸಂಕೇಶ್ವರ 30:ವಿಜಯಪುರದ ಬಾಲಕಿ ದಾನಮ್ಮನ್ನ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಆರೋಪಿಗಳಿಗೆ ಬಹಿರಂಗ ಗಲ್ಲು ಶಿಕ್ಷೆ ನೀಡಬೇಕೆಂದು ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತ್ತು.

ಶನಿವಾರ ಹೆಬ್ಬಾಳ ಗ್ರಾಮದ ಅಂಬೇಡ್ಕರ ನಗರದಲ್ಲಿ ಜಮಾಯಿಸಿದ ದಲಿತ ಪರ ಸಂಘಟನೆ ಮತ್ತು ಗ್ರಾಮದ ವಿವಿಧ ಸಂಘಟನೆ ಕಾರ್ಯಕರ್ತರು ಗ್ರಾಮದ ಪ್ರಮುಖ ಓಣಿಗಳಲ್ಲಿ ಪ್ರತಿಭಟನೆ ನಡೆಸುತ್ತಾ ಬಾಲಕಿ ದಾನಮ್ಮ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಆರೋಪಿಗಳಿಗೆ ಬಹಿರಂಗವಾಗಿ ಗಲ್ಲಿಗೆ ಹಾಕಬೇಕೆಂದು ಪ್ರತಿಭಟನಾಕಾರರು ಘೋಷಣೆ ಕೂಗಿ ಅತ್ಯಾಚಾರಿಗಳ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದರು .
ಗ್ರಾಮದ ಡಿ.ಎಲ್‌.ಖೋತ ಹೈಸ್ಕೂಲ್ ಮೈದಾನದಲ್ಲಿ ದಾನಮ್ಮ ಬಾಲಕಿಗೆ ಮೌನಾಚಾರಣೆ ಸಲ್ಲಿಸಲಾಯಿತು .ನಂತರ ಮನವಿಯನ್ನು ಉಪ ತಹಶಿಲ್ದಾರರ ಅವರ ಮುಖಾಂತರ ರಾಜ್ಯಪಾಲರಿಗೆ ಸಲ್ಲಿಸಲಾಯಿತ್ತು .

ಪ್ರತಿಭಟನೆಯ ಅಂಗವಾಗಿ ಗ್ರಾಮದ ಅಂಗಡಿ ಮುಂಗಟ್ಟುಗಳನ್ನ ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿತ್ತು .

ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರಾದ ಚೇತನ ಪಾಟೀಲ, ವಿಧ್ಯಾಧರ ಹುಲ್ಲೋಳಿ,ದೀಪಕ ವೀರಮುಖ,ಪುನೀತ ಚೌವಾಣ,ಸದಾಶಿವ ತಳವಾರ,ದೇವರಾಜ ಚೌಗಲಾ,ಮಹೇಶ ತಳವಾರ ಹಾಗೂ ಗ್ರಾಮದ ದಲಿತ ಪರ ಸಂಘಟನೆಗಳು,ಮತ್ತು ವಿವಿಧ ಸಂಘಟನೆಗಳು ಮಹಿಳೆಯರು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು .

loading...