ದಿ.25 ರಂದು ಅಂತರಾಷ್ಟ್ರೀಯ ಸಾಂಸ್ಕøತಿಕ ವೈಭವ ಕಾರ್ಯಕ್ರಮ.

ಅಂತರಾಷ್ಟ್ರೀಯ ಮಟ್ಟದ ಸಾಂಸ್ಕøತಿಕ ವೈಭವ ಕಾರ್ಯಕ್ರಮದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿರುವ ಸಿ.ಆರ್.ಪಾಟೀಲ.
loading...

 

ಅಂತರಾಷ್ಟ್ರೀಯ ಮಟ್ಟದ ಸಾಂಸ್ಕøತಿಕ ವೈಭವ ಕಾರ್ಯಕ್ರಮದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿರುವ ಸಿ.ಆರ್.ಪಾಟೀಲ.

ಕನ್ನಡ ಸುದ್ದಿ ಚನ್ನಮ್ಮ ಕಿತ್ತೂರು.
ಭಾರತದ ವೈಭವ, ಸಂಪ್ರದಾಯ ಬಿಂಬಿಸುವ ಕಲೆ ಉಳಿಸಿ ಬೆಳೆಸುವ ಉದ್ದೇಶದಿಂದ ರಾಜ್ಯಾಧ್ಯಂತ ಕಾರ್ಯಕ್ರಮ ಪ್ರಸ್ತೂತ ಪಡಿಸುವ ಮೂಲಕ ಹಲವು ವರ್ಷಗಳಿಂದ ಆಳ್ವಾಸ್ ಶಿಕ್ಷಣ ಸಂಸ್ಥೆ ಮಾಡುತ್ತಲೆ ಬರುತ್ತಿದೆ. ಅದರಲ್ಲೂ ಹೆಚ್ಚು ಗ್ರಾಮೀಣ ಕಲೆಗಳಿಗೆ ಆಧ್ಯತೆ ನೀಡುತ್ತ ಬರುತ್ತಿದೆ ಎಂದು ಬೈಲಹೊಂಗಲ ಎಪಿಎಂಸಿ ಮಾಜಿ ಅಧ್ಯಕ್ಷ ಕಾರ್ಯಕ್ರಮದ ರೂವಾರಿ .ಸಿ.. ಪಾಟೀಲ ಹೇಳಿದರು.
ಇವರು ಪಟ್ಟಣದ ಶ್ರೀ ಕಲ್ಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಸಿ.ಆರ್.ಪಾಟೀಲ ಅಭಿಮಾನಿಗಳ ಬಳಗ ಹಾಗು ಆಳ್ವಾಸ್ ನುಡಿಸಿರಿ ವಿರಸತ್ ಎಂ.ಕೆ.ಹುಬ್ಬಳ್ಳಿ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಕಿತ್ತೂರು ತಾಲೂಕಿನಲ್ಲಿ ಪ್ರಪ್ರಥಮ ಭಾರಿಗೆ ಅಂತರಾಷ್ಟ್ರೀಯ ಮಟ್ಟದ ಸಾಂಸ್ಕøತಿಕ ವೈಭವ ಕಾರ್ಯಕ್ರಮದ ಪತ್ರಿಕಾ ಗೋಷ್ಠಿ ಕರೆದು ಮಾತನಾಡಿದ ಇವರು ಕಾರ್ಯಕ್ರಮ ವಿಕ್ಷಿಸಲು 15 ಸಾವಿರ ಆಸನ ವ್ಯವಸ್ಥೆ ಕಲ್ಪ್ಪಿಸಲಾಗಿದೆ. ಕಾರ್ಯಕ್ರಮ ಡಿ 25 ರಂದು ಸರಿಯಾಗಿ ಸಂಜೆ 5 ಗಂಟೆಗೆ ಪಟ್ಟಣದ ಶ್ರೀ ಕಲ್ಮೇಶ್ವರ ಕಾಲೇಜು ಪಕ್ಕದಲ್ಲಿ ಇರುವ ಗಾಣಿಗೇರ ಮೈದಾನದಲ್ಲಿ ಪ್ರಾರಂಭವಾಗುವುದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲೆ ಪ್ರದರ್ಶಿಸುವ ಮಕ್ಕಳನ್ನು ಪ್ರೊತ್ಸಾಹಿಸಿ ಎಂದರು.
ಆಳ್ವಾಸ್ ಶಿಕ್ಷಣ ಸಂಸ್ಥೆ ಉಪನ್ಯಾಸಕ ನಾಗರಾಜ ಶೆಟ್ಟಿ ಮತನಾಡಿ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ 26 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಕಲೆ, ಕ್ರೀಡೆ, ಶಿಕ್ಷಣ ಇನ್ನು ಅನೇಕ ವಿಭಾಗದಲ್ಲೂ ಸಹ ತಮ್ಮ ಮೇಲೂ ಗೈ ಸಾಧಿಸುವಂತೆ ಮಕ್ಕಳಿಗೆ ಸಂಸ್ಥೆ ತರಬೇತಿ ನೀಡುತ್ತಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆ ಹಲವು ವರ್ಷಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನೀಡುತ್ತಲೇ ಬರುತ್ತಿದೆ. ಈ ವರ್ಷ ರಾಜ್ಯಾದ್ಯಂತ ಸುಮಾರು 80 ಕ್ಕೂ ಹೆಚ್ಚು ಕಾರ್ಯಕ್ರಮ ನೀಡಿದ್ದಾರೆ.
ಆಳ್ವಾಸ್‍ನ ಶಿಕ್ಷಣ ಸಂಸ್ಥೆಯ 400 ವಿದ್ಯಾರ್ಥಿಗಳು ರಾಜ್ಯ, ಅಂತರ ರಾಜ್ಯ, ಹಾಗು ರಾಷ್ಟ್ರಗಳ ಅಲ್ಲಿನ ಪ್ರಮುಖ ಕಲಾ ಪ್ರಕಾರವನ್ನು ಸುಮಾರು 3 ಗಂಟೆಗೂ ಅಧಿಕ ಅವದಿ ಕಣ್ಣಿಗೆ ಮುದ ನೀಡುವಂತೆ ಪ್ರಸ್ತೂತ ಪಡಿಸಲು ಎಂ.ಕೆ.ಹುಬ್ಬಳ್ಳಿ ಪಟ್ಟಣಕ್ಕೆ ಆಗಮಿಸಲಿದ್ದಾರೆ.
ಕಳೆದ ಒಂದು ವರ್ಷದಿಂದ ಸಿ.ಆರ್.ಪಾಟೀಲ ಗೆಳೆಯರ ಬಳಗದವರು ಪ್ರಯತ್ನ ಪಟ್ಟು ಈ ಕಾರ್ಯಕ್ರಮ ಪಟ್ಟಣಕ್ಕೆ ಕರೆತರಲು ಶ್ರಮಿಸಿದ್ದಾರೆ ಈ ಎಲ್ಲ ಶ್ರೇಯಸ್ಸು ಪಾಟೀಲ ಗೆಳೆಯರ ಬಳಗಕ್ಕೆ ಸಲ್ಲುವುದು ಎಂದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಶಾಕೆಯನ್ನು ಬೇರೆ ಬೇರೆ ಜಿಲ್ಲೆಗಳಲ್ಲೂ ಸ್ಥಾಪಿಸುತ್ತಿಲ್ಲ ಏಕೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಬೇರೆ ಬೇರೆ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆ ಪ್ರಾರಂಭಿಸುವುದರಿಂದ ಆಡಳಿತಾತ್ಮಕ ಶಿಸ್ತು ಕಾಯ್ದುಕೊಳ್ಳಲಾಗುವುದಿಲ್ಲ ಎಂದರು.
ಈ ವೇಳೆ ಆಳ್ವಾಸ್ ಕಲಾ ವಿಭಾಗದ ಮುಖ್ಯಸ್ಥ ಲೀಲಾಧರ ಕರಕೇರಾ, ಕಿತ್ತೂರು ಬಿಜೆಪಿ ಬ್ಲಾಕ್ ಅಧ್ಯಕ್ಷ ಚಿನ್ನಪ್ಪ ಮುತ್ನಾಳÀ, ಪಪಂ ಸದಸ್ಯ ಬಸವರಾಜ ಡೂಗನವರ, ವೆಂಕಣ್ಣಾ ತೋರಗಲ್, ಲಕ್ಷ್ಮಣ ಗೋಕಾರ, ಗುರಪ್ಪ ದಡ್ಡಿ, ಬಸಪ್ಪ ಕರವಿನಕೊಪ್ಪ, ಅರುಣ ರಾಹುತ, ರುದ್ರಪ್ಪ ಕರವಿನಕೊಪ್ಪ, ರುದ್ರಪ್ಪ ತೋರಗಲ್ ಸಚೀನ ಪಾಟೀಲ, ರಾಜು ಬೆಂಡಿಗೇರಿ, ಮಾಹಾಂತೇಶ ಗಾಣಿಗೇರ ಇನ್ನು ಅನೇಕರು ಇದ್ದರು.

 

 

loading...