ದೇಶದಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ನಂಬರ್ 1 ಆಗಿದೆ: ಸಚಿವ ರಾಮಲಿಂಗಾ ರೆಡ್ಡಿ

0
26
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:6 ದೇಶದಲ್ಲಿ ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ನಂಬರ್ ಒನ್ ಆಗಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಅವರು ಬುಧವಾರ ನಗರದ ಎಪಿಎಮ್ ಸಿ ಪೊಲೀಸ್ ಠಾಣೆಯ ಎದುರಿನ ಕೆಎಸ್ಆರಪಿ ತರಬೇತಿ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾದ ಕರ್ನಾಟಕ ರಾಜ್ಯ ಮಿಸಲು ಪೊಲೀಸ್ ಮಹಿಳಾ ಮತ್ತು ಪುರುಷ ಸ್ಪೆಷಲ್ ರಿಸರ್ವ್ ಪೊಲೀಸ್ ಕಾನ್ ಸ್ಟೇಬಲ್ ಪ್ರಶಿಕ್ಷರ್ಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಮಾತನಾಡುತ್ತ, ಒಂದೊಂದು ರಾಜ್ಯಕ್ಕೆ ತನ್ನದೆಯಾದ ಕಾನೂನು‌, ಕಾಯ್ದೆಗಳನ್ನು ತೆಗೆದು ಒಂದೇ ಮಾಡಿಕೊಂಡಿದ್ದು ಇತಿಹಾಸ. ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಇದ್ದಾರೆ. ರಾಜ್ಯದ ಕಾನೂನು‌ ಸುವ್ಯವಸ್ಥೆ ಕಾಪಾಡಿಕೊಂಡು ಬಂದಿದ್ದಾರೆ ಎಂದರು.
ಜನಸಂಖ್ಯೆ ಹೆಚ್ಚಾಗುತ್ತಿದೆ. ಅದರಂತೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ.ಸೈಬರ್ ಕ್ರೈಂ ಸೇರಿದಂತೆ ವಿವಿಧ ಅಪರಾಧಗಳ ತಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ನಾಲ್ಕುವರೆ ವರ್ಷದಲ್ಲಿ 11 ಸಾವಿರ ಮನೆಗಳನ್ನು ಪೊಲೀಸ್ ಸಿಬ್ಬಂದಿಗಳಿಗೆ ಮನೆಗಳನ್ನು‌ ನಿರ್ಮಾಣ ಮಾಡಿದೆ. 2020ಯಲ್ಲಿ ಇನ್ನೂ 4 ಸಾವಿರ ಮನೆಗಳನ್ನು ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಪೊಲೀಸ್ ಸಿಬ್ಬಂದಿಗಳಿಗೆ ಇನ್ನೂ ಸಾಕಷ್ಟು ಮೂಲಭೂತ ಸೌಕರ್ಯಗಳನ್ನು ನೀಡುವುದಾಗಿ ಅವರು‌ ಭರವಸೆ ನೀಡಿದರು.
1963ರಲ್ಲಿ ಕೆಎಸ್ ಆರ್ ಪಿ ಅಸ್ಥಿತ್ವಕ್ಕೆ ಬಂದಿತ್ತು. ಸದ್ಯ ಅದರಲ್ಲಿ 9 ಸಾವಿರ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. 344 ಜನರಲ್ಲಿ 200 ಜನರು ಪದವಿದರರಿರುವುದು ಹೆಮ್ಮೆಯ ಸಂಗತಿ ಎಂದರು.
ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಮಾತನಾಡಿ, ಪೊಲೀಸ್ ಪ್ರಶಿಕ್ಷಣಾ ಶಿಬಿರದಲ್ಲಿ ಒಟ್ಟು 344 ಜನರು ತರಬೇತಿ ಪಡೆದಿದ್ದಾರೆ‌.ಪ್ರತಿ ಆರು ತಿಂಗಳಿಗೊಮ್ಮೆ ಪುನರಾವರ್ತನೆಗೊಳಿಸಲಾಗುವುದು. ಅವರು ಕರ್ತವ್ಯದಲ್ಲಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವಂತೆ ಶುಭ ಹಾರೈಸಿದರು.
ಕೆಎಸ್ ಆರ್ ಪಿ ಎಡಿಜಿಪಿ ಭಾಸ್ಕರರಾವ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಐಜಿಪಿ ಚರಣ ರೆಡ್ಡಿ, ಐಜಿಪಿ ರಾಮಚಂದ್ರರಾವ್, ಡಿಸಿಪಿಗಳಾದ ಸೀಮಾ ಲಾಟ್ಕರ, ಅಮರನಾಥ ರೆಡ್ಡಿ, ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ, ಜಿಲ್ಲಾಧಿಕಾರಿ ಜಿಯಾವುಲ್ಲಾ ಎಸ್. ಜಿಪಂ ಸಿಇಒ ರಾಮಚಂದ್ರನ್, ಡಿಎಫ್ಒ ಬಸವರಾಜ ಪಾಟೀಲ, ಎಸ್ಪಿ ಡಾ. ರವಿಕಾಂತೇಗೌಡಾ ಸೇರಿದಂತೆ ಮೊದಲಾದವರು ಹಾಜರಿದ್ದರು.

loading...