ದೇಶದ ಅಭಿವೃದ್ಧಿಗೆ ವಾಜಪೇಯಿ ಕೊಡುಗೆ ಅಪಾರ

0
25
loading...

ಕನ್ನಡಮ್ಮ ಸುದ್ದಿ
ಬೆಳಗಾವಿ : ದೇಶದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಿಂದ ಹಿಡಿದು ಭಾರತದ ಮೂಲೆ-ಮೂಲೆಗಳನ್ನು ಚತುಷ್ಪತ ಹೆದ್ದಾರಿಗಳನ್ನು ನಿರ್ಮಿಸಿ ರೈತರಿಗೆ ಹಳ್ಳಿಯಿಂದ ದೆಹಲಿ ಸಂಪರ್ಕಿಸುವಂತೆ ರಸ್ತೆಗಳ ನಿರ್ಮಾಣ ಮಾಡಿದವರು ವಾಜಪೇಯಿ ಅವರು ಎಂದು ಶಾಸಕ ಸಂಜಯ ಪಾಟೀಲ ಹೇಳಿದರು.
ಅವರು ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮೀಣ ಘಟಕದ ವತಿಯಿಂದ ಏರ್ಪಡಿಸಿದ ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 93 ನೇ ಜನ್ಮದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಅಜಾತಶತ್ರು, ಸರಳ ಸಜ್ಜನಿಕೆಯ ವ್ಯಕ್ತಿತ್ವ, ಸಹೃದಯ ಕವಿ,ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು, ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಹೆಸರನ್ನು ಉತ್ತುಂಗಕ್ಕೇರಿಸಿದ ಮಹಾನ್ ಮೇಧಾವಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿ, ಮೊಬೈಲ್ ಟೆಲಿಫೋನ್ ಅಗ್ಗ, ಬಡತನ ನಿರ್ಮೂಲನೆಗೆ ಆದ್ಯತೆ ನೀಡಿದರು. ಇಂಥ ದೇಶಪ್ರೇಮಿಯ ಆದರ್ಶಗಳನ್ನು ಇಂದಿನ ಯುವಕರು ಅಳವಡಿಸಕೊಂಡು ದೇಶಕ್ಕಾಗಿ ಉತ್ತಮವಾದ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ತಿಳಿಸಿದರು.
ಯುವಮೋರ್ಚಾದ ಕಾರ್ಯಕಾರಣಿ ಸದಸ್ಯ ಯುವರಾಜ ಜಾಧವ, ಪ್ರಧಾನ ಕಾರ್ಯದರ್ಶಿ ರವಿ ಕೊಟಬಾಗಿ, ವೀರಭದ್ರ ಪೂಜಾರಿ, ವೀರಭದ್ರ ನೇಸರಗಿ, ಆಕಾಶ ಶೆಟ್ಟಿ, ಅಭಯ ಅವಲಕ್ಕಿ, ಬಾಪು ಪಾಟೀಲ, ಅಶೋಕ ತಳವಾರ, ಪ್ರಕಾಶ ತಳವಾರ, ಬಸವರಾಜ ಗಡಗಿ, ಬಸವರಾಜ ಮರಗಿ, ರಮೇಶ ಸರವದೆ, ಸಾಗರ ಕೋಲಕಾರ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

loading...