ನಿಗಮದ ಸೌಲಭ್ಯ ಸದುಪಯೋಗ ಪಡೆದುಕೊಳ್ಳಿ: ರಾಜು

0
16
loading...

ಕನ್ನಡಮ್ಮ ಸುದ್ದಿ-ವಿಜಯಪುರ: ಮಹಿಳೆಯರು ಕೇವಲ ನಾಲ್ಕು ಗೋಡೆಗಳ ಮಧ್ಯ ಜೀವನ ನಡೆಸುವ ಶೈಲಿಯನ್ನು ಬದಲಿಸಿಕೊಳ್ಳಬೇಕು ಎಂದು ಕರ್ನಾಟಕ ಬಂಜಾರಾ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ರಾಜು ಪವಾರ ಹೇಳಿದರು.
ಬಸವನಬಾಗೇವಾಡಿ ಪ್ರವಾಸಿ ಮಂದಿರದಲ್ಲಿ ಈಚೆಗೆ ನಡೆದ ಕರ್ನಾಟಕ ಬಂಜಾರಾ ರಕ್ಷಣಾ ವೇದಿಕೆ ವತಿಯಿಂದ ಬಸವನಬಾಗೇವಾಡಿ ತಾಲೂಕಾ ಮಹಿಳಾ ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆಯರು ಸಂಘಟನೆಯ ಮೂಲಕ ಇತರರನ್ನು ಮುನ್ನಡೆಸಿಕೊಂಡು ಹೊಗಬೇಕು. ಬಂಜಾರಾ ನಿಗಮದಿಂದ ದೊರೆಯುವ ಸಹಾಯ ಸೌಲಭ್ಯಗಳನ್ನು ದೊರಕಿಸುವ ನಿಟ್ಟಿನಲ್ಲಿ ಸಹಕಾರಿ ಆಗಬೇಕು. ಬಂಜಾರಾ ಸಮಾಜದ ಮಹಿಳೆಯರು ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳುವುದರ ಮೂಲಕ ಆರ್ಥಿಕ ಸದೃಢಹೊಂದಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಸವನಬಾಗೇವಾಡಿ ತಾಲೂಕಾ ಮಹಿಳಾ ಅಧ್ಯಕ್ಷರನ್ನಾಗಿ ಮಂಜುಳಾ ಎ. ರಾಠೋಡ, ಉಪಾಧ್ಯಕ್ಷರಾಗಿ ಶಕುಂತಲಾ ಎಮ್‌. ರಾಠೋಡ, ಪ್ರಧಾನ ಕಾರ್ಯದರ್ಶಿಯಾಗಿ ಸಾವಿತ್ರಿ ಎಸ್‌. ಚವ್ಹಾಣ, ಸಂಘಟನಾ ಕಾರ್ಯದರ್ಶಿಯಾಗಿ ಸೋನಾಬಾಯಿ ಎನ್‌. ಲಮಾಣಿ, ಸಂಚಾಲಕರನ್ನಾಗಿ ಶಾನುಬಾಯಿ ಶಿತು ಲಮಾಣಿ, ಸದಸ್ಯರನ್ನಾಗಿ ಶಾನಾಬಾಯಿ ಡೊಕರು ಲಮಾಣಿ, ಕಸ್ತೂರಿಬಾಯಿ ಎಸ್‌. ಲಮಾಣಿ, ಮೋತಿಬಾಯಿ ಬಿ. ಲಮಾಣಿ, ಲೋಕಿಬಾಯಿ ಜಿ. ಲಮಾಣಿ, ಸುರೇಖಾ ಆರ್‌. ಲಮಾಣೀ ನೇಮಕ ಮಾಡಲಾಯಿತು. ವಿಶ್ವನಾಥ ಬದ್ದು ಚವ್ಹಾಣ, ಸಂಜೀವ ಲಮಾಣಿ, ನೀಲಕಂಠ ಚವ್ಹಾಣ, ರವಿ ರಾಠೋಡ, ಸುಭಾಷ ಲಮಾಣಿ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

loading...