ನಿಪ್ಪಾಣಿ ನಗರಸಭೆಯಿಂದ ಹೈಟೆಕ್‌ ವಾಹನ: ವಿಲಾಸ

0
21
loading...

ನಿಪ್ಪಾಣಿ 11: ಸ್ಥಳೀಯ ನಗರಸಭೆ ವತಿಯಿಂದ ನಾಗರೀಕರ ಸೇವೆಗಾಗಿ ನೂತನ ಹೈಟೆಕ್‌ ಶವವಾಹಿಕೆ(ವೈಕುಂಠ ರಥ) ವಾಹನ ಲಭ್ಯಗೊಳಿಸಲಾಗಿದೆ. ಸೋಮವಾರದಂದು ನಗರಸಭೆ ಎದುರು ನಗರಸಭೆ ಅಧ್ಯಕ್ಷ ವಿಲಾಸ ಗಾಡಿವಡ್ಡರ ಮತ್ತು ನಗರಸಭೆ ಸದಸ್ಯರು ಶವವಾಹಿಕೆ ವಾಹನಕ್ಕೆ ಪೂಜೆ ಸಲ್ಲಿಸಿ ನಾಗರೀಕರ ಸೌಲಭ್ಯಗಕ್ಕಾಗಿ ಸಮರ್ಪಣಗೊಳಿಸಿದರು.ಸ್ವತಃ ಅಧ್ಯಕ್ಷರು ಶವವಾಹಿಕೆ ವಾಹನ ಡ್ರೈವ್‌ ಮಾಡಿ ನಗರ ಪ್ರದಕ್ಷೀಣೆ ಹಾಕಿ ಗಮನ ಸೆಳೆದರು. ಬಳಿಕ ಮಾತನಾಡಿದ ಅಧ್ಯಕ್ಷ ವಿಲಾಸ ಗಾಡಿವಡ್ಡರ,ನಗರಸಭೆ 2016-17ನೇ ಸಾಲಿನ 14ನೇ ಹಣಕಾಸು ಆಯೋಗದಡಿ 12.05 ಲಕ್ಷ ರೂ.,2017-18ನೇ ಸಾಲಿನ 14ನೇ ಹಣಕಾಸು ಆಯೋಗದಡಿ 3.18 ಲಕ್ಷ ರೂ.,ಮತ್ತು ನಗರಸಭೆ ಸಾಮಾನ್ಯ ನಿಧಿಯಿಂದ 1.18 ಲಕ್ಷ ರೂ., ಹೀಗೆ ಒಟ್ಟು 16.83 ಲಕ್ಷ ರೂ.ಗಳ ನಿಧಿಯಲ್ಲಿ ಈ ನೂತನ ಹೈಟೆಕ್‌ ಶವವಾಹಿಕೆ ವಾಹನ ಖರೀದಿಸಲಾಗಿದೆ.

ನಗರಸಭೆ ಉಪಾಧ್ಯಕ್ಷ ಸುನೀಲ ಪಾಟೀಲ,ಸ್ಥಾಯಿ ಸಮಿತಿ ಅಧ್ಯಕ್ಷೆ ನಜಹತ್‌ಪರ್ವೀನ್‌ ಮುಜಾವರ,ಸದಸ್ಯರಾದ ಬಾಳಾಸಾಹೇಬ ದೇಸಾಯಿ,ರಾಜೇಂದ್ರ ಚವ್ಹಾಣ,ರವೀಂದ್ರ ಚಂದ್ರಕುಡೆ,ಧನಾಜಿ ನಿರ್ಮಳೆ,ಮುನ್ನಾ ಕಾಜಿ,ದಿಲೀಪ ಪಠಾಡೆ,ನಮ್ರತಾ ಕಮತೆ,ನೀತಾ ಲಾಟಕರ,ಸುಜಾತಾ ಕೊಕರೆ,ವಿಜಯ ಶೇಟಕೆ,ಡಾ.ನಂದಕಿಶೋರ ಕುಂಭಾರ,ಪೌರಾಯುಕ್ತ ಡಿ.ಎಸ್‌.ಹರದಿ,ಅಭಿಯಂತ ಪಿ.ಜಿ.ಶೆಂಡೂರೆ,ವಿದ್ಯಾಭಾರತಿ ದಂಡಗಿ,ವಿವೇಕ ಬನ್ನೆ ಮತ್ತಿತರರು ಉಪಸ್ಥಿತರಿದ್ದರು.

loading...