ನಿವೃತ್ತ ನೌಕರರ ಪಂಚಣಿ ನೀಡಲು ಮುಖ್ಯಮಂತ್ರಿಗಳಿಗೆ ಮನವಿ

0
18
loading...

ಸಾರಿಗೆ ನೌಕರರನ್ನು ರಾಜ್ಯ ಸರಕಾರದ ನೌಕರರೆಂದು ಪರಿಗಣಿಸಿ

ಗದಗ, ಡಿ. 26 : ರಾಜ್ಯ ಸಾರಿಗೆ ನೌಕರರನ್ನು ರಾಜ್ಯ ಸರಕಾರದ ನೌಕರರೆಂದು ಪರಿಗಣಿಸಿ ನಿವೃತ್ತ ನೌಕರರ ಪಂಚಣಿಯನ್ನು ನೀಡಬೇಕೆಂದು ಆಗ್ರಹಿಸಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗದಗ ವಿಭಾಗದ ಪರಿಶಿಷ್ಠ ಜಾತಿ/ವರ್ಗಗಳ ನೌಕರರ ಸಂಘವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ಸೋಮವಾರ ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳಿಗೆ ನೌಕರರ ಸಂಘದ ನಿಯೋಗವು ಮನವಿ ಸಲ್ಲಿಸಿ ಬರಲಿರುವ ಬಜೆಟ್‍ದಲ್ಲಿ ರಸ್ತೆ ಸಾರಿಗೆ ನಿಗಮಕ್ಕೆ ವಿಶೇಷವಾಗಿ ವಾಯುವ್ಯ ನಿಗಮಕ್ಕೆ ಪ್ರತ್ಯೇಕವಾಗಿ ಸುಗಮ ಸಂಚಾರ ಸೇವಾ ವ್ಯವಸ್ಥೆಗೆ ಅನುಕೂಲವಾ ಕಲ್ಪಿಸಲು ಕಾರ್ಮಿಕರ ಹಿತದೃಷ್ಠಿಯಿಂದ ಹೆಚ್ಚಿನ ಅನುದಾನ ನೀಡಿ ಸಂಸ್ಥೆಯನ್ನು ಪುನಶ್ಛೇತನಗೊಳಿಸಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.
ವಾಯುವ್ಯ ನಿಗಮದಲ್ಲಿ ಬಾಕಿ ಉಳಿದಿರುವ ಕಾರ್ಮಿಕರ ಬಿಲ್ಲುಗಳಿಗೆ ಹಣ ಸಂದಾಯ ಮಾಡಲು ಆರ್ಥಿಕ ಕೊರತಗೆಯಿಂದ ಹಿಂದುಳಿದಿರುವ ವಾಯುವ್ಯ ನಿಗಮಕ್ಕೆ ವಿಶೇಷ ಅನುದಾನ ನೀಡಿ ನಿಗಮದ ಬಲವರ್ಧನೆಗೆ ಅವಕಾಶ ಕಲ್ಪಿಸಬೇಕೆಂದು ಮನವಿಯಲ್ಲಿ ವಿವರಿಸಲಾಗಿದೆ.
ಮನವಿ ಅರ್ಪಣೆಯ ನಿಯೋಗದಲ್ಲಿ ಸಂಘದ ಅಧ್ಯಕ್ಷ ಎಸ್.ಬಿ.ಪಡಸಾಲಿ, ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕೊಪ್ಪಳ, ಗೌರವ ಅಧ್ಯಕ್ಷ ಆರ್.ಪಿ.ಕೆಂಗಾರ, ಬಿ.ಎನ್.ಕರಬಸಪ್ಪನವರ, ಶ್ರೀಕಾಂತ ಹಳ್ಳಿಕೇರಿ, ಎಂ.ಎಂ.ಕಳ್ಳಿ, ಮುತ್ತಣ್ಣ ಮೂಶಪ್ಪನವರ, ಚಂದ್ರು ಹೊಸಮನಿ ಮುಂತಾದವರಿದ್ದರು.

loading...