ಪದ್ಮಾವತಿ ಚಿತ್ರ ಪ್ರದರ್ಶನವಾಗಬಾರದೆಂದು ಒತ್ತಾಯ

0
17
loading...

ಕನ್ನಡಮ್ಮ ಸುದ್ದಿ
ಬೆಳಗಾವಿ : ಹಿಂದುಸ್ಥಾನದ ಚರಿತ್ರೆಯ ವಿರುದ್ಧ ಚಿತ್ರಿಕರಿಸಲಾಗಿರುವ ಹಿಂದಿ ಚಲನ ಚಿತ್ರ ಪದ್ಮಾವತಿ ಚಿತ್ರ ಪದರ್ಶನಕ್ಕೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಸೋಮವಾರ ಶ್ರೀ ಶಿವಪ್ರತಿಷ್ಠಾನ ಹಿಂದುಸ್ಥಾನ ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸಂಜಯಲೀಲಾ ಬನ್ಸಾಲಿ ನಿರ್ದೇಶನದ ಹಿಂದಿ ಚಲನ ಚಿತ್ರ ಪದ್ಮಾವತಿಯಲ್ಲಿ ಹಿಂದುಸ್ಥಾನದ ಮೇಲೆ ಅಕ್ರಮನ ಮಾಡಿದ ಅಲ್ಲಾವುದ್ದೀನ ಖಿಲ್ಲಜಿಯನ್ನು ಹಿರೋವನ್ನಾಗಿ ಚಿತ್ರಿಕರಿಸಲಾಗಿದೆ. ಇದು ಸಮಾಜದ ಸ್ವಾಸ್ಥ ಹದಗೆಡಿಸುವ ಕಾರ್ಯವಾಗಿದೆ ಈ ಚಿತ್ರ ಪ್ರದರ್ಶನವಾಗದಂತೆ ತಡೆ ಹಿಡಿಯಲೂ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.
ಶಿವಪ್ರತಿಷ್ಠಾನ ಅಧ್ಯಕ್ಷ ಕಿರಣ ಗಾವಡೆ ಸೇರಿದಂತೆ ಮುಂತಾದ ಸಂಘಟನೆಯ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

loading...