ಪರಿವರ್ತನಾ ಬೈಕ್ ರ್ಯಾಲಿಯಲ್ಲಿ ಹಣ ಹಂಚಿಕೆ-ವಿಡಿಯೋ ವೈರಲ್

0
21
loading...

ವಿಜಯಪುರ: ಸಿಂದಗಿ ಪಟ್ಟಣದಲ್ಲಿ ಭಾನುವಾರ ನಡೆದ ಪರಿವರ್ತನಾ ಯಾತ್ರೆಗೆ ಭಾಒಗವಹಿಸಿದ್ದ ಬೈಕ್ ರ್ಯಾಲಿ ಸವಾರರಿಗೆ, ಬಿಜೆಪಿ ಶಾಸಕ ರಮೇಶ ಭೂಸನೂರ ಬೆಂಬಲಿಗರು ಪ್ರತಿಯೊಬ್ಬರಿಗೆ 5 ನೂರು ರೂ. ನೋಟನ್ನು ಜೇಬಿಗೆ ಇಡುವ ವಿಡಿಯೋ ಕ್ಲಿಪ್ಪಿಂಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಡುತ್ತಿದೆ.
ಸಿಂದಗಿ ಪಟ್ಟಣದಲ್ಲಿರುವ ಪೆಟ್ರೋಲ್ ಪಂಪ್ ಒಂದರ ಬಳಿ ಸರತಿಯಲ್ಲಿ ಬೈಕ್‍ಗಳನ್ನು ನಿಲ್ಲಿಸಿಕೊಂಡು, ಪ್ರತಿ ಬೈಕಿಗೆ ಕಮಲದ ಚಿಹ್ನೆಯ ಜತೆ ಶಾಸಕ ಭೂಸನೂರು ಭಾವಚಿತ್ರ ಇವರು ಚಿಕ್ಕ ಪೋಸ್ಟರ್ ಅಂಟಿಸಿ, ಬೈಕ ಸವಾರನ ಜೇಬಿಗೆ ಐದು ನೂರು ನೋಟು ಇಡುತ್ತಿರುವ ಚಿತ್ರಣದ ವಿಡಿಯೋ ಕ್ಲಿಪ್ಪಿಂಗ್‍ನಲ್ಲಿ ದಾಖಲಾಗಿದೆ. ಈ ವಿಡಿಯೋ ಕ್ಲಿಪ್ಪಿಂಗ್ 2.15 ನಿಮಿಷವಿದೆ.
ಪರಿವರ್ತನಾ ರ್ಯಾಲಿಯಲ್ಲಿ ಸ್ವಯಂ ಪ್ರೇರಣೆಯಿಂದ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಯಾರು ನನ್ನ ಬೆಂಬಲಿಗರು ಹಣ ನೀಡಿಲ್ಲ. ಈ ಆರೋಪವನ್ನು ಸಾಬೀತುಪಡಿಸಿ ಎಂದು ಘಟನೆಗೆ ಸಂಬಂಧಿಸಿದಂತೆ ಶಾಸಕ ರಮೇಶ ಭೂಸನೂರು ಖಾರವಾಗಿ ಪ್ರತಿಕ್ರಿಯಿಸಿದರು.

loading...