ಪರಿವರ್ತನಾ ಯಾತ್ರೆ ಯಶಸ್ಸಿಗೆ ಶ್ರಮಿಸಿ: ಮಾಜಿ ಶಾಸಕ ಲಮಾಣಿ

0
37
loading...

ಕನ್ನಡಮ್ಮ ಸುದ್ದಿ-ಶಿರಹಟ್ಟಿ: ತಾಲೂಕಿನ ಸುಗನಹಳ್ಳಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ಬಿಜೆಪಿ ಪರಿವರ್ತನಾ ಯಾತ್ರೆಯ ಪೂರ್ವಭಾವಿ ಸಭೆ ಜರುಗಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದು ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಮುಂಬರುವ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ತಮ್ಮ ಮತ ನೀಡಿ ಅಧಿಕಾರಕ್ಕೆ ತರಬೇಕು. ಗ್ರಾಮಕ್ಕೆ ಹೆಚ್ಚಿನ ಅನುದಾನ ಬಳಸಿ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಲಾಗುವುದೆಂದು ಕರೆ ನೀಡಿದರಲ್ಲದೇ ಶಿರಹಟ್ಟಿಯಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಯ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಪಾಲ್ಗೊಂಡು ಯಶಸ್ವಿಗೊಳಿಸಬೇಕು.
ಈ ಸಂದರ್ಭದಲ್ಲಿ ತಿಮ್ಮರಡ್ಡಿ ಮರಡ್ಡಿ, ಶಂಕರ ಮರಾಠೆ, ರಾಮಣ್ಣ ಲಮಾಣಿ, ಭೀಮಶಿಂಗ್ ರಾಠೋಡ, ಕಿರಣ ಸಾಂಬ್ರಾಣಿ, ಮಡಿವಾಳರ, ರಾಜು ರಾಹುತ, ಮಂಜುನಾಥ ಬಡ್ನಿ, ಶಿವಲಿಂಗಪ್ಪ ಜಕ್ಕಲಿ, ವೀರನಗೌಡ ಪಾಟೀಲ, ಮಂಜುನಾಥ ಕಮ್ಮಾರ, ವೀರಪ್ಪ ಸೋಮಣ್ಣವರ, ಮಲ್ಲಿಕಾರ್ಜುನ ಶಿದ್ದಾಪೂರ ಸೇರಿದಂತೆ ಇನ್ನು ಹಲವಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

loading...